ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ, ಉಬರ್, ರ್‍ಯಾಪಿಡೋ ನಿಷೇಧಕ್ಕೆ 7 ದಿನದ ಗಡುವು ನೀಡಿದ ಬೆಂಗಳೂರು ಆಟೋ ಯೂನಿಯನ್

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 11: ಓಲಾ, ಉಬರ್ ಮತ್ತು ರ್‍ಯಾಪಿಡೋದಂತಹ ಅಗ್ರಿಗೇಟರ್‌ಗಳ ಮೂಲಕ ಚಲಿಸುವ ಆಟೋ ರಿಕ್ಷಾಗಳ ಮೇಲೆ ಸಾರಿಗೆ ಇಲಾಖೆ ಜಪ್ತಿ ಮಾಡಿದ್ದ ಒಂದು ದಿನದ ನಂತರ ಆಟೋ ರಿಕ್ಷಾ ಚಾಲಕರ ಒಕ್ಕೂಟಗಳ ಜಂಟಿ ಸಮಿತಿಯು ಎಲ್ಲಾ ಅಪ್ಲಿಕೇಶನ್‌ಗಳನ್ನು ನಿಷೇಧಿಸುವಂತೆ ಕೋರಿ ಸರ್ಕಾರಕ್ಕೆ 7 ದಿನಗಳ ಗಡುವನ್ನು ನಿಗದಿಪಡಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ 13 ಆಟೋ ರಿಕ್ಷಾ ಯೂನಿಯನ್‌ಗಳು ಮತ್ತು ಸಂಘಗಳ ಮುಖಂಡರು ಕಳೆದ ಏಳು ವರ್ಷಗಳಿಂದ ಅಗ್ರಿಗೇಟರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಇವರು ಚಾಲಕರು ಮತ್ತು ಪ್ರಯಾಣಿಕರಿಬ್ಬರಿಂದಲೂ ಲೂಟಿ ಮಾಡುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಕ್ಯಾಬ್ ಅಗ್ರಿಗೇಟರ್‌ಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಹೇಳಿದರು.

ಗಡುವು ಕೊಟ್ಟಿದ್ದು ಕಂಪನಿಗೆ- ಶಿಕ್ಷೆ ನಮಗಾ?' ಆರ್‌ಟಿಒ ವಿರುದ್ಧ ಆಟೋ ಚಾಲಕರ ಆಕ್ರೋಶಗಡುವು ಕೊಟ್ಟಿದ್ದು ಕಂಪನಿಗೆ- ಶಿಕ್ಷೆ ನಮಗಾ?' ಆರ್‌ಟಿಒ ವಿರುದ್ಧ ಆಟೋ ಚಾಲಕರ ಆಕ್ರೋಶ

ಅನೇಕರು ಕೇರಳ ಸರ್ಕಾರದ ಮಲ್ಟಿಮೋಡಲ್ ಅಪ್ಲಿಕೇಶನ್ ಅನ್ನು ಉಲ್ಲೇಖಿಸಿದ್ದು, ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಸಹಾಯ ಮಾಡಲು ಕರ್ನಾಟಕವು ಇದೇ ರೀತಿಯ ಅಪ್ಲಿಕೇಶನ್‌ನೊಂದಿಗೆ ಬರಬೇಕೆಂದು ಒತ್ತಾಯಿಸಿದರು.

ಮುಂದಿನ ಏಳು ದಿನಗಳಲ್ಲಿ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಸೇರಿದಂತೆ ಎಲ್ಲಾ ಟ್ಯಾಕ್ಸಿ ಅಗ್ರಿಗೇಟರ್ ಅಪ್ಲಿಕೇಶನ್‌ಗಳನ್ನು ಸರ್ಕಾರ ನಿಷೇಧಿಸಬೇಕು. ಕ್ರಮ ಕೈಗೊಳ್ಳದಿದ್ದರೆ ಸಾರಿಗೆ ಸಚಿವರಿಗೆ ಘೇರಾವ್ ಮಾಡುತ್ತೇವೆ. ಪ್ರಯಾಣಿಕರು ಮತ್ತು ಚಾಲಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಷ್ಕರಕ್ಕೆ ಕರೆ ನೀಡುತ್ತಿಲ್ಲ. ಆದರೆ ಕ್ರಮ ಕೈಗೊಳ್ಳದಿದ್ದರೆ ಘೇರಾವ್ ಮೊರೆ ಹೋಗುತ್ತೇವೆ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ.ಮಂಜುನಾಥ್ ಹೇಳಿದರು.

Breaking; ಜಯನಗರ ಆರ್‌ಟಿಒ ಕಚೇರಿ ಮುಂದೆ ಜಮಾಯಿಸಿದ ಆಟೋ ಚಾಲಕರುBreaking; ಜಯನಗರ ಆರ್‌ಟಿಒ ಕಚೇರಿ ಮುಂದೆ ಜಮಾಯಿಸಿದ ಆಟೋ ಚಾಲಕರು

ನಮ್ಮ ನ್ಯಾಯಯುತ ಗಳಿಕೆಗೆ ಮಣ್ಣು

ನಮ್ಮ ನ್ಯಾಯಯುತ ಗಳಿಕೆಗೆ ಮಣ್ಣು

ಆಟೋ ರಿಕ್ಷಾ ಚಾಲಕರ ಸಂಘದ ಸಿ.ಎನ್.ಶ್ರೀನಿವಾಸ್ ಮಾತನಾಡಿ, ಚಾಲಕರಿಗೆ ದಂಡ ವಿಧಿಸುವ ಹಾಗೂ ಅಗ್ರಿಗೇಟರ್ ಮೂಲಕ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳುವ ಸಾರಿಗೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ನಿಯಮ ಉಲ್ಲಂಘನೆಗಳ ಪರಿಶೀಲನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ. ಆದರೆ ಓಲಾ ಮತ್ತು ಉಬರ್‌ನಂತಹ ಕಂಪನಿಗಳು ನೂರಾರು ಕೋಟಿಗಳಷ್ಟು ನಮ್ಮ ನ್ಯಾಯಯುತ ಗಳಿಕೆಯನ್ನು ಕಸಿದುಕೊಂಡಿವೆ. ನಾವು ಅವುಗಳ ಕ್ರಮಕೈಗೊಳ್ಳಲು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಆದರೆ ವಿಪರೀತ ದರದ ದೂರುಗಳನ್ನು ಪರಿಶೀಲಿಸಿದ ನಂತರ ಚಾಲಕರು ಸರ್ಕಾರವು ನಮಗೆ ಶಿಕ್ಷೆ ವಿಧಿಸುತ್ತಿದೆ ಅವರು ಹೇಳಿದರು.

ಓಲಾ ಅಪ್ಲಿಕೇಶನ್‌ಗಳನ್ನು ಏಕೆ ನಿಷೇಧಿಸಬಾರದು

ಓಲಾ ಅಪ್ಲಿಕೇಶನ್‌ಗಳನ್ನು ಏಕೆ ನಿಷೇಧಿಸಬಾರದು

ಕರ್ನಾಟಕ ರಕ್ಷಣಾ ವೇದಿಕೆಯ ಟ್ಯಾಕ್ಸಿ ಚಾಲಕರ ಸಂಘದ ಜಿ ಎಸ್ ಕುಮಾರ್ ಮಾತನಾಡಿ, ಸರ್ಕಾರಕ್ಕೆ ಪ್ರಯಾಣಿಕರ ಬಗ್ಗೆಯಾಗಲಿ, ಚಾಲಕರ ಬಗ್ಗೆಯಾಗಲಿ ಯಾವುದೇ ಕಾಳಜಿ ಇಲ್ಲ. ಅವರು ಟಿಕ್‌ಟಾಕ್‌ನಂತಹ ಸಿಲ್ಲಿ ಅಪ್ಲಿಕೇಶನ್ ಅನ್ನು ನಿಷೇಧಿಸಬಹುದಾದರೆ, ಜನರು ಮತ್ತು ಚಾಲಕರನ್ನು ಬಹಿರಂಗವಾಗಿ ಲೂಟಿ ಮಾಡುವ ಅಗ್ರಿಗೇಟರ್ ಅಪ್ಲಿಕೇಶನ್‌ಗಳನ್ನು ಏಕೆ ನಿಷೇಧಿಸಬಾರದು ಎಂದು ಅವರು ಕೇಳಿದರು.

ಆನ್​ಲೈನ್ ಆಟೋ ಸೇವೆ ಅಕ್ರಮ

ಆನ್​ಲೈನ್ ಆಟೋ ಸೇವೆ ಅಕ್ರಮ

ಆಟೋ ಸೇವೆಗೆ ಅಗ್ರಿಗೇಟರ್‌(ಮಧ್ಯಸ್ಥಗಾರರು) ಆಗಿರುವ ಓಲಾ ಹಾಗೂ ಉಬರ್ ಸಂಸ್ಥೆಗಳು ವೆಬ್‌ಸೈಟ್‌ ಹೆಸರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡುತ್ತಿವೆ. ಸ್ವತಃ ಸಾರಿಗೆ ಇಲಾಖೆಯೇ ಆನ್​ಲೈನ್ ಆಟೋ ಸೇವೆ ಅಕ್ರಮ ಅಂತ ಹೇಳಿದೆ. ತಮ್ಮ ಸೇವೆ ನಿಲ್ಲಿಸುವಂತೆ ತಾಕೀತು ಮಾಡಿ ಆರ್‌ಟಿಒ ನೋಟಿಸ್ ನೀಡಿದ್ದರೂ ಓಲಾ, ಉಬರ್ ಸಂಸ್ಥೆಗಳು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಸಾರಿಗೆ ಇಲಾಖೆಯಿಂದ ಆಟೋಗಳ ಜಪ್ತಿ

ಸಾರಿಗೆ ಇಲಾಖೆಯಿಂದ ಆಟೋಗಳ ಜಪ್ತಿ

ಅಗ್ರೀಗೇಟರ್‌ಗಳಾದ ಓಲಾ, ಉಬರ್ ಕಂಪನಿಗಳು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಪಡೆದಿದ್ದರೂ ಆಟೋ ಸೇವೆ ನೀಡುತ್ತಿವೆ. ಆದರೆ ಈ ಆಟೋಗಳು ಜನರಿಂದ ಸುಲಿಗೆ ಮಾಡುತ್ತಿವೆ ಸಾರ್ವಜನಿಕರು ದೂರಿದ್ದಾರೆ. ಹೀಗಾಗಿ ಇಂದು ಆಟೋಗಳನ್ನು ಜಪ್ತಿ ಮಾಡಲಾಗಿದ್ದು ಆರ್‌ಟಿಒ ಕ್ರಮದ ವಿರುದ್ಧ ಚಾಲಕರು ಕೆಂಡಮಂಡಲವಾಗಿದ್ದಾರೆ. ಹತ್ತು ವರ್ಷದಿಂದ ನಾವು ಬಾಡಿಗೆ ಆಟೋ ಓಡಿಸುತ್ತಿದ್ದೇವೆ. ಆ ವೇಳೆಯೇ ಓಲಾ ಉಬರ್ ಕಂಪನಿಗಳು ಆಟೋ ಚಾಲಕರು ಹಾಗೂ ಪ್ರಯಾಣಿಕರು ಇಬ್ಬರಿಗೂ ಮೋಸ ಮಾಡುತ್ತಿವೆ ಎಂದು ಚಾಲಕರು ಸೋಮವಾರ ಆರೋಪ ಮಾಡಿದ್ದರು.

English summary
A day after the transport department seized auto-rickshaws plying through aggregators like Ola, Uber and Rapido, a joint committee of auto-rickshaw drivers' unions has set a 7-day deadline for the government to ban all the apps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X