Viral Video: ಕನ್ನಡ-ಹಿಂದಿ ವಿವಾದ! ಬೆಂಗಳೂರಲ್ಲಿ ಎಲ್ಲವು ಫಸ್ಟ್ ಕ್ಲಾಸ್: ಆಟೋ ಚಾಲಕ-ಮಹಿಳೆ ಸಂಭಾಷಣೆ ವೈರಲ್
ಬೆಂಗಳೂರು, ಜುಲೈ 27: ಬೆಂಗಳೂರಿನ ಬಗ್ಗೆ, ಕನ್ನಡಿಗರು, ಕನ್ನಡ ಭಾಷೆ ಮೇಲೆ ಕನ್ನಡೇತರರಿಗೆ ಮುನಿಸು, ಜಗಳ, ವಿವಾದಗಳನ್ನು ನೋಡಿದ್ದೇವೆ. ಈ ಸುದ್ದಿಗಳೇ ವೈರಲ್ ಆಗುತ್ತಿವೆ. ಹಿಂದಿ-ಕನ್ನಡ ಭಾಷಾ ವಿವಾದ ನಡುವೆ, ಆಟೋ ಚಾಲಕನ ಜೊತೆಗೆ ಹಿಂದಿಯಲ್ಲಿ ವ್ಯವಹರಿಸಿದ ಮಹಿಳೆಯ ವಿಡಿಯೋ ವೈರಲ್ ಆಗಿದೆ. ಭಾಷಾ ಉದ್ವಿಗ್ನತೆ ಮಧ್ಯ ಇವರ ಸಂಭಾಷಣೆ ಹೊಸ ದೃಷ್ಟಿಕೋನ ಹುಟ್ಟು ಹಾಕಿದೆ.
ನಾಲ್ಕು ತಿಂಗಳುಗಳಿಂದ ಕರ್ನಾಟಕದಲ್ಲಿದ್ದ ಮಹಿಳೆಯು ಹೆಚ್ಚಾಗಿ ಹಿಂದಿಯಲ್ಲಿ ವ್ಯವಹರಿಸುತ್ತಾರೆ. ಬೆಂಗಳೂರಲ್ಲಿ ಆಟೋ ಚಾಲಕನ ಬಳಿ ಅವರ ಮಾತನಾಡಿದ್ದು, ವಿಡಿಯೋ ಸೆರೆ ಹಿಡಿಯಲಾಗಿದೆ. ಈ ಮಹಿಳೆಗೆ ಕನ್ನಡದ ಕೆಲವು ಪದಗಳನ್ನು ಆಟೋ ಚಾಲಕ ಕಲಿಸಿದ್ದಾರೆ. ಕೆಲವೊಮ್ಮೆ ಹಿಂದಿ ಬಳಕೆ ವೇಳೆ ಎದುರಾಗುವ ಸಮಸ್ಯೆ ಬಗ್ಗೆ ಕೇಳಿದಾಗ ಮಹಿಳೆಗೆ ಚಾಲಕ ಉತ್ತರಿಸಿದ ರೀತಿ ಮೆಚ್ಚುಗೆಗೆ ಕಾರಣವಾಗಿದೆ. ಅವರು ಆಟೋ ಚಾಲಕನ ಸಹಾಯದಿಂದ ಕನ್ನಡ ಕಲಿಯಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಹುತೇಕ ಪಾಸಿಟಿವ್ ಕಾಮೆಂಟುಗಳೇ ಬಂದಿವೆ..

ಈ ಮಹಿಳೆ ಖ್ಯಾತಿ ಶ್ರೀ ಎಂಬ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹಿಂದಿ ಭಾಷೆ ಮತ್ತು ಕನ್ನಡಿಗರ ಭಾಷಿಗ ಮಧ್ಯೆ ಜಗಳಗಳ ಆಗಾಗ ಕೇಳೀ ಬಂದಿವೆ ಎಂದು ಮಹಿಳೆ ಹೇಳಿದ್ದಕ್ಕೆ ಚಾಲಕರ ಅವರಿಗೆ ಹಿಂದಿಯಲ್ಲಿ ತಿಳಿಸಿ ಅರ್ಥ ಮಾಡಿಸುತ್ತಾರೆ. ''ಕೆಲವು ಪುರುಷರು ಕುಡಿದು ಕಿಡಿಗೇಡಿತನ ಮಾಡುತ್ತಾರೆ, ಇಲ್ಲದಿದ್ದರೆ ಯಾವುದೇ ನಗರದಲ್ಲಿ ಸಮಸ್ಯೆಗಳಿಲ್ಲ. ಬೆಂಗಳೂರಿನಲ್ಲಿ ಎಲ್ಲವೂ ಫಸ್ಟ್ ಕ್ಲಾಸ್'' (ಯೇ ಥೋಡಾ ಆದ್ಮಿ ಲೋಗ್ ದಾರು ವಗೇರಾ ಪೆಕೆ ರೆಹ್ತಾ ಹೈ, ಐಸಾ ಐಸಾ ಕರ್ಕೆ ಜಗ್ದಾ ಹೋತಾ ಹೈ. ವಾರ್ನಾ ಕೋಯಿ ಸಮಸ್ಯೆ ನಹಿ ಹೈ, ಅಚ್ಚೆ ಸೆ ರೆಹ್ತೇ ಹೈ ಸಬ್...) ಚಾಲಕ ಹೇಳಿದ್ದು ವಿಡಿಯೋದಲ್ಲಿ ನೋಡಬಹುದು.
ಭಾಷೆ ವಿಚಾರವಾಗಿ ನಡೆಯುವ ವಿವಾದ, ಅಹಿತಕರ ಘಟನೆಗಳ ಮಧ್ಯ ಇವರ ಸರಳ ಸಂಭಾಷಣೆ ವಾಸ್ತವಗಳ ಮೇಲೆ ಬೆಳಕು ಚೆಲ್ಲುತ್ತದೆ. ಬೆಂಗಳೂರು ಎಲ್ಲ ಭಾಷಿಗರನ್ನು ಒಳಗೊಂಡಿದೆ. ಕನ್ನಡಿಗರು ವಿಶಾಲ ಮನಸ್ಸಿನವರು ಎಂಬುದನ್ನು ತೋರ್ಪಡಿಸುತ್ತದೆ. ಇಲ್ಲಿ ಜನರ ಕೋಪವು ಕೇವಲ ತಾತ್ಕಾಲಿಕ. ನಿಜವಾದ ದ್ವೇಷವಲ್ಲ ಎಂದು ಚಾಲಕ ವಿವರಿಸುತ್ತಾರೆ. ಈ ಮೂಲಕ ಬೆಂಗಳೂರು ಹೆಚ್ಚಾಗಿ ಶಾಂತಿಯುತವಾಗಿದೆ. ಯಾರೇ ಬಂದರೂ ಸ್ವಾಗತಿಸುತ್ತದೆ. ಜನರು ಪರಸ್ಪರ ಗೌರವಿಸುತ್ತಾರೆ ಎಂಬುದು ಅರ್ಥವಾಗುತ್ತದೆ.
ಮಹಿಳೆ ಪ್ರಯಾಣಿಕಳಾದ ಖ್ಯಾತಿಶ್ರೀ ಹೇಳಿದ್ದೇನು?
ವಿಡಿಯೋ ಪೋಸ್ಟ್ ಮಾಡಿ ಅದರೊಂದಿಗೆ ''ಕರ್ನಾಟಕದಲ್ಲಿನ ತಾವು ಕಳೆದ ನಾಲ್ಕು ತಿಂಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಿಂದಿ vs ಕನ್ನಡ ವಿವಾದ, ಸಮಸ್ಯೆಗಳು ಯಾವಾಗಲೂ ಸುದ್ದಿಯಲ್ಲಿರುತ್ತವೆ. ಇಲ್ಲಿನ ನಾನು ಇದ್ದಷ್ಟು ದಿನಗಳ ಕಾಲ ಬೆಂಗಳೂರಿನಾಚೆಗೂ ಪ್ರಯಾಣಿಸಿದ್ದೇನೆ. ಆದರೆ ಭಾಷೆಯ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ'' ಎಂದು ಅವರು ಕನ್ನಡಿಗರ ಔದಾರ್ಯ ಹಾಡಿ ಹೊಗಳಿದ್ದಾರೆ.
''ಅನೇಕ ಕ್ಯಾಬ್ ಮತ್ತು ಆಟೋ ಚಾಲಕರ ಜತೆ ಮಾತನಾಡಿದ್ದೇವೆ. ಅವರೆಲ್ಲ ನನ್ನನ್ನು ಸ್ಥಳೀಯರಂತೆ ಆತ್ಮೀಯವಾಗಿ ನೋಡಿದ್ದಾರೆ. ಅನೇಕ ಕಡೆಗಳಲ್ಲಿ ಊಟ ಮಾಡಿದ್ದೇನೆ ಮತ್ತು ಹಿಂದಿ ಮಾತನಾಡಿಲ್ಲ ಎಂದರೆ ಅಸಮ್ಮತಿಸುತ್ತಾರೆ. ಸರಿಯಾಗಿ ಸ್ಪಂದಿಸಲ್ಲ ಎಂಬ ಭಾವನೆ ಇತ್ತು. ಕರಾವಳಿ ಕರ್ನಾಟಕಕ್ಕೆ ಹೋದಾಗ ಕೆಲವು ಚಾಲಕರು ನನ್ನೊಂದಿಗೆ ವರ್ತಿಸಿದ್ದು ನೋಡಿ ಭಯವಾಗಿತ್ತು. ನಿಮಗೆ ಇಂಗ್ಲಿಷ್ ಗೊತ್ತಿದ್ದರೆ ಇಬ್ಬರ ನಡುವಿನ ಭಾಷಾ ಅಂತರ ಕಡಿಮೆ ಮಾಡುತ್ತದೆ ಎಂಬುದನ್ನು ನಾನು ಇಲ್ಲಿ ಗಮನಿಸಿದ್ದೇನೆ ಎಂದು ಅವರು ಆಟೋ ಚಾಲಕನೊಂದಿಗಿನ ವಿಡಿಯೋ ಹಂಚಿಕೊಂಡು ಖುಷಿ ಹಂಚಿಕೊಂಡಿದ್ದಾರೆ.
ವಿಡಿಯೋ ಬಗ್ಗೆ ಬಳಕೆದಾರರ ಪ್ರತಿಕ್ರಿಯೆ ಹೀಗಿದೆ..
ಈ ವೈರಲ್ ವೀಡಿಯೊ 10.5 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದಿದೆ. ಪಾಸಿಟಿವ್ ಕಾಮೆಂಟ್‌ಗಳೇ ಬಂದಿವೆ. ''ಚಾಲಕ ಪದಗಳಿಗೆ ಮೀರಿದ ಬುದ್ಧಿವಂತ. ಅವರು ಸುಂದರ ಉತ್ತರ ನೀಡಿದ್ದಾರೆ'' ಎಂದು ಒಬ್ಬರು ಕಾಮೆಂಟ್ ಹಾಕಿದ್ದಾರೆ. ಮತ್ತೊಬ್ಬರು ''ಇವರು ಹೇಳಿದ್ದ ಸತ್ಯ! ಹೆಚ್ಚಿನ ಸಮಸ್ಯೆಗಳನ್ನು ಕೆಲವರು ಸೃಷ್ಟಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೇ ದೊಡ್ಡದು ಮಾಡುತ್ತಾರೆ ಎಂದಿದ್ದಾರೆ.
'ನಾನು ಬೆಂಗಳೂರಿನಲ್ಲಿ 3 ವರ್ಷಗಳಿಂದ ಇದ್ದೇನೆ ಯಾವುದೇ ಸಮಸ್ಯೆ ಆಗಿಲ್ಲ. ಇಲ್ಲಿ ದಾರಾಳು ಗುಣದ ಜನರಿದ್ದಾರೆ'. ಮತ್ತೊಬ್ಬರು ''ಕೆಲವು ಜನರು ಪ್ರತ್ಯೇಕ ಘಟನೆಗಳ ಆಧಾರದ ಮೇಲೆ ಕೋಪಗೊಳ್ಳುವುದು ನಿಲ್ಲಿಸಬೇಕು'' ಎಂದಿದ್ದಾರೆ. 'ಭಾಷೆಗೂ ಮೀರಿ ವ್ಯಕ್ತಿ ಮತ್ತೊಬ್ಬರಿಗೆ ಗೌರವ ಕೊಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದೆಂದು' ಕಾಮೆಂಟ್ ಬಂದಿವೆ. ಅನೇಕರು ಪಾಸಿಟಿವ್ ಕಾಮೆಂಟ್ ಹಾಕಿದ್ದಾರೆ..












Click it and Unblock the Notifications