Viral News: ₹5 ಕೋಟಿ ಆಸ್ತಿ ಹೊಂದಿರುವ ಆಟೋ ಚಾಲಕ, ಮಾಸಿಕ ಆದಾಯ ₹2-3 ಲಕ್ಷ: ನೆಟ್ಟಿಗರು ಹೇಳಿದ್ದೇನು
ಬೆಂಗಳೂರು, ಅಕ್ಟೋಬರ್ 05: ಬೆಂಗಳೂರು ಅನೇಕ ಹೊತುಗಳಿಗೆ, ಬೆರಗುಗಳಿಗೆ ಕಾರಣವಾಗುತ್ತಲೇ ಇರುತ್ತದೆ. ಅಂತಹ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಿಡುತ್ತವೆ. ಇಲ್ಲೋಬ್ಬರು ಆಟೋ ಚಾಲಕರು ಕೋಟ್ಯಾಧಿಪತಿ ಎಂಬ ಸುದ್ದಿ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ. ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆಟೋ ಹತ್ತಿ ಟೆಕ್ಕಿಯೊಬ್ಬರು ಚಾಲಕನನ್ನು ಬಗ್ಗೆ ಪೋಸ್ಟ್ ಮಾಡಿರುವುದು ಇದಕ್ಕೆ ಕಾರಣವಾಗಿದೆ.
ಹೌದು, ಬೆಂಗಳೂರಿನಲ್ಲಿ ದಿನನಿತ್ಯದ ಆಟೋರಿಕ್ಷಾದಲ್ಲಿ ಸಂಚಾರ ಮಾಡುವ ಎಂಜಿನಿಯರ್ ಆಕಾಶ್ ಆನಂದನಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ಅಕ್ಟೋಬರ್ 4 ರಂದು ಎಂದಿನಂತೆ ಆಟೋ ಹತ್ತಿದ್ದಾರೆ. ಅಟೋ ಚಾಲಕನ ಬಳಿ ಇದ್ದ ಆಪಲ್ ವಾಚ್ ಮತ್ತು ಏರ್‌ಪಾಡ್‌ಗಳನ್ನು ಗಮನಿಸಿ ಸಹಜವಾಗಿ ಮಾತನಾಡಿದ್ದಾರೆ.

ಇದೇ ವೇಳೆ ಈ ಆಟೋ ಚಾಲಕ 4-5 ಕೋಟಿ ರೂಪಾಯಿ ಮೌಲ್ಯದ ಎರಡು ಮನೆಗಳ ಮಾಲೀಕ ಎಂಬುದು ಗೊತ್ತಾಗಿದೆ. ಮಾಡಿಕವಾಗಿ ಬಾಡಿಗೆ ರೂಪದಲ್ಲಿ ಆತ 2-3 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಇದಷ್ಟೇ ಅಲ್ಲದೇ AI ಸ್ಟಾರ್ಟ್‌ಅಪ್‌ನಲ್ಲಿ ಪಾಲು ಹೊಂದಿದ್ದಾರೆ. ಅವರು ಅದರಲ್ಲಿ ಹೂಡಿಕೆ ಮಾಡಿದ್ದು ಕೇಳಿ ಟಿಕ್ಕಿ ಆನಂದನಿ ಬೆಕ್ಕಸ ಬೆರಗಾಗಿದ್ದಾರೆ. ಈ ಬಗ್ಗೆ ಅವರು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
"ಈ ವಿಚಾರ ಕೇಳಿ ನಾನು ಹುಚ್ಚನಾಗಿದ್ದಾನೆ ಆಟೋ ವಾಲಾ ಭಯ್ಯಾ ಅವರು 4-5 ಕೋಟಿ ಮೌಲ್ಯದ 2 ಮನೆಗಳನ್ನು ಹೊಂದಿದ್ದಾರೆ. ಮಾಸಿಕ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅವರ ಈ ಪೊಸ್ಟ್ ಆನ್‌ಲೈನ್‌ಲ್ಲಲಿ ಹೆಚ್ಚು ಚರ್ಚೆ ಹುಟ್ಟುಹಾಕಿದೆ. ಕೆಲವೇ ಗಂಟೆಗಳಲ್ಲಿ ಟೆಕ್ಕಿ ಪೋಸ್ಟ್‌ಗೆ 1,300 ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 58,000 ವೀಕ್ಷಣೆ ಪಡೆದಿದೆ. ಆಟೋ ಚಾಲಕನ ಆಸ್ತಿ ಬಗ್ಗೆ ನೆಟ್ಟಿಗರು ಆಶ್ಚರ್ಯಗೊಂಡರೆ, ಕೆಲವರು ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ಇದೆಲ್ಲ ಕಟ್ಟು ಕಥೆ ಅಂತಲು ಒಂದಷ್ಟು ಮಂದಿ ಅಭಿಪ್ರಾಯ ಹೊರ ಹಾಕಿದ್ದಾರೆ.
Bangalore is fucking crazy the auto wala bhaiya said he has 2 houses worth 4-5 crs 😭 both on rent earns close to 2-3 lakhs per month , and is a startup founder / investor in a ai based startup bruh 😭😭😭
— Akash Anandani (@Kashh56) October 4, 2025
ನೆಟ್ಟಿಗರು ಹೇಳಿದ್ದೇನು?
"ಬೆಂಗಳೂರು ಸ್ಟಾರ್ಟ್‌ಅಪ್ ರಾಜಧಾನಿಯಾಗಲು ಇದೇ ಕಾರಣ. ಇಲ್ಲಿ ಆಟೋ ಚಾಲಕರು ಸಹ ಹೂಡಿಕೆದಾರರಾಗದ್ದಾರೆ. "ಬಾಲಿವುಡ್‌ನ ಬಡತನದಿಂದ ಶ್ರೀಮಂತರವರೆಗಿನ ಇಂತದ್ದೆ ಬೆಳವಣಿಗೆ ನೋಡಬಹುದು' ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಕೆಲವರು ಆನಂದನಿ ಅವರು ಹೇಳಿದ ಈ ವಿಷಯ ನಿಜವೆಂದು ಒಪ್ಪಿದ್ದಾರೆ. "ಆಟೋ ಚಾಲಕ ನಿಜವಾಗಿಯೂ ಹೂಡಿಕೆದಾರರಾಗಿದ್ದರೆ ಇದು ಸಂಪೂರ್ಣವಾಗಿ ನಂಬಲರ್ಹವಾಗಿದೆ. ಇನ್ನು ಕೆಲವೊಮ್ಮೆ ಇಂತಹ ವಿಷಯಗಳು ಆನ್‌ಲೈನ್ ಇಂಪ್ರೆಸ್ ಮಾಡಲು ಕಲ್ಪಿತವಾಗಿ ಕಥೆ ಕಟ್ಟಲಾಗಿರುತ್ತದೆ ಅಂತಲೂ ಮತ್ತೊಬ್ಬ ನೆಟ್ಟಿಗರು ಆನುಮಾನ ವ್ಯಕ್ತಪಡಿಸಿದ್ದಾರೆ.
ಆಟೋ ಚಾಲಕರಾದವರು ಹೂಡಿಕೆ ದಾರರು ಆಗಲು ಮೊದಲು ಹೂಡಿಕೆ ಮಾಡಬೇಕು. ಇಂತಹ ಹೂಡಿಕೆಗೆ ಸಂಭಾವ್ಯ ಸಂಸ್ಥಾಪಕರನ್ನು ಅವರು ಸಹಜವಾಗಿ ದೈನಂದಿನ ಜೀವನದಲ್ಲಿ ಭೇಟಿ ಮಾಡಿರುತ್ತಾರೆ. ಇದು ಅವರಿಗೆ ಉತ್ತಮ ಮಾರ್ಗವಾಗಿದೆ ಎಂದು ನಾಲ್ಕನೇ ನೆಟ್ಟಿಗರೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಣವಂತರು ಇದ್ದಾರೆ. ಆದರೆ ಅವರಿಗೆ ಒಂಟಿತನ ಕಾಡುತ್ತಿದ್ದರೆ ಅಂತವರು ಇಲ್ಲಿ ಹವ್ಯಾಸಕ್ಕಾಗಿ ಆಟೋ, ಟ್ಯಾಕ್ಸಿಗಳನ್ನು ಓಡಿಸುತ್ತಾರೆ. ಅವರು ಮಾಡುವುದು ಹಣಕ್ಕಾಗಿ ಅಲ್ಲ. ಏಕೆಂದರೆ ಇಂತಹ ಪ್ರಕರಣಗಳನ್ನು ನಾನು ನೋಡಿದ್ದೇನೆ ಎಂದ ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಒಟ್ಟಾರೆ ಈ ಆಟೋ ಚಾಲಕನ ಆಸ್ತಿ ಕೇಳಿದ ನೆಟ್ಟಿಗರು ದಂಗಾಗಿದ್ದಾರೆ.












Click it and Unblock the Notifications