ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಆಗಸ್ಟ್ 2: ಜನವರಿ 1, 2019 ಕ್ಕೆ 18 ವರ್ಷ ಪೂರ್ಣಗೊಳ್ಳುವ 18-19 ವರ್ಷ ತುಂಬಿದ ಯುವಕ/ಯುವತಿಯರು ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಮತದಾರರ ಪಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಹೆಸರನ್ನು ಸೇರ್ಪಡೆಗೊಳಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಲು ಜಿಲ್ಲಾಧಿಕಾರಿ ಬಿ.ಎಂ.ಶಂಕರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 07 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಮತಗಟ್ಟೆ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಹೆಚ್ಚಿನ ಪ್ರಮಾಣದ ಮತದಾರರು, ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಎಲ್ಲಾ ವಾರ್ಡ್ ಮಟ್ಟದ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ 10 ಜನ ಬಿ.ಎಲ್.ಓ. ಗಳಿಗೆ ಒಬ್ಬರಂತೆ ಸೂಪರ್‍ವೈಸರ್ ನಿಯೋಜಿಸುವುದು ಹಾಗೂ ಈಗಾಗಲೇ ಕಡಿಮೆ ಮತದರರು ನೋಂದಣೆಯಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ಮತದಾರರನ್ನು ಸೇರ್ಪಡೆಗೊಳಿಸಲು ಸೂಕ್ತ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವೋಟರ್ ಐಡಿ ಇಲ್ಲದಿದ್ದರೆ ಈ ದಾಖಲೆ ತೋರಿಸಬಹುದುವೋಟರ್ ಐಡಿ ಇಲ್ಲದಿದ್ದರೆ ಈ ದಾಖಲೆ ತೋರಿಸಬಹುದು

ಸಾರ್ವಜನಿಕರು ತಮ್ಮ ವಾಸದ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ತಂದೆ/ಗಂಡನ ಹೆಸರು, ಮನೆ ವಿಳಾಸ, ಲಿಂಗ, ವಯಸ್ಸು, ಮುಂತಾದ ವಿವರಗಳನ್ನು ಪರಿಶೀಲಿಸಿಕೊಳ್ಳುವುದು. ಒಂದು ವೇಳೆ ಹೆಸರು ಬಿಟ್ಟು ಹೋಗಿದ್ದಲ್ಲಿ ಆಗಸ್ಟ್ 10 ರವರೆಗೆ ಬಿ.ಎಲ್.ಓ ರವರು ಮನೆ ಮನೆಗೆ ಭೀಟಿ ನೀಡುವ ಸಂದರ್ಭದಲ್ಲಿ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ದಿನಾಂಕ: ಅಕ್ಟೋಬರ್ 10 ರಿಂದ ನವೆಂಬರ್ 20 ರ ಅವಧಿಯಲ್ಲಿ ನಮೂನೆ - 6 ಅನ್ನು ನೀಡಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ. ಅದೇ ರೀತಿ ಹತ್ತಿರದ ತಾಲ್ಲೂಕು ಕಚೇರಿ, ವಾರ್ಡ್ ಕಚೇರಿ, ಗ್ರಾಮ ಪಂಚಾಯ್ತಿ ಕಚೇರಿಗೆ ಭೇಟಿ ನೀಡಿ ನಮೂನೆ-6 ಸಲ್ಲಿಸುವುದು.

ದಿನಾಂಕ:17-08-2018 07 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಇಆರ್ ಒ/ಎಇಆರ್ ಒ ರವರ ಕಚೇರಿಯಲ್ಲಿ ಬಿ.ಎಲ್.ಓ. ಹಾಗೂ ಚುನಾವಣಾ ಸಿಬ್ಬಂದಿಗಳ ಸಭೆ ಕರೆದು ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸುವ ಕಾರ್ಯದಲ್ಲಿ ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೃಪೆ: ಕರ್ನಾಟಕ ವಾರ್ತೆ)

Bengaluru: An opportunity to include name in voter list
English summary
Government of Karnataka has given an opportunity to youths who attain 18-19 years as per 2019, January 1st to include their name in Voter list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X