ದಾಖಲೆ ಪ್ರಮಾಣದ ಪ್ರಯಾಣಿಕರಿಗೆ ಸಾಕ್ಷಿಯಾದ ಬೆಂಗಳೂರು ವಿಮಾನನಿಲ್ದಾಣ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2023-24ರಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ ದಾಖಲೆಯನ್ನು ಬರೆದಿದೆ.
ಅಂತಾರಾಷ್ಟ್ರೀಯ ವಿಮಾನಗಳು ಅಥವಾ ದೇಶೀಯ ವಿಮಾನಗಳು, ಪ್ರಯಾಣಿಕರ ಸಂಖ್ಯೆಯಲ್ಲೂ ಸಾಕಷ್ಟು ಏರಿಕೆ ಆಗಿದೆ. 2023-24 ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ದಟ್ಟಣೆಯ ವಿಷಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಹೊಸ ದಾಖಲೆಯನ್ನು ಮಾಡಿದೆ.

ಎಷ್ಟು ಜನರ ಪ್ರಯಾಣ?
2023-24 ರ ಆರ್ಥಿಕ ವರ್ಷದಲ್ಲಿ ಒಟ್ಟು 32.8 ಮಿಲಿಯನ್ ದೇಶಿಯ ಪ್ರಯಾಣಿಕರು ಹಾಗೂ 4.7 ಮಿಲಿಯನ್ ಅಂತಾರಾಷ್ಟ್ರೀಯ ಪ್ರಯಾಣೀಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅಂದಹಾಗೆ ದೇಶೀಯ ವಿಮಾನಯಾದಲ್ಲಿ ಶೇಕಡಾ 10 ರಷ್ಟು ಹಾಗೂ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಶೇಕಡಾ 13 ರಷ್ಟು ಹೆಚ್ಚಳವಾಗಿದೆ.
ಮೇ 2008 ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದಾಗಿನಿಂದ ಏಪ್ರಿಲ್ 29, 2023 ಅತ್ಯಂತ ಜನ ಬೀಡು ದಿನವಾಗಿತ್ತು. ಭಾರತದಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಮತ್ತು ಪುಣೆ ಅತ್ಯಂತ ಜನನಿಬಿಡ ದೇಶೀಯ ಸ್ಥಳಗಳಾಗಿವೆ. ಏಪ್ರಿಲ್ 29, 2023 ರಂದು ದೈನಂದಿನ ಪ್ರಯಾಣಿಕರ ದಟ್ಟಣೆಯು 116,688 ಅನ್ನು ಮುಟ್ಟಿತ್ತು. ವಾಯು ಸಂಚಾರದಲ್ಲಿನ ಬೆಳವಣಿಗೆಯು ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳವು ವಾಯು ಸಂಚಾರ ಚಲನೆಯ ಹೆಚ್ಚಳದಲ್ಲಿ ಪ್ರತಿಫಲಿಸುತ್ತದೆ.

ಕಾರ್ಗೋ ಸರ್ವಿಸ್ ಸಾಧನೆ ಹೇಗಿದೆ?
2024 ರ ಆರ್ಥಿಕ ವರ್ಷದಲ್ಲಿ ಕಾರ್ಗೋ ಸೇವೆಗಳಲ್ಲೂ ಏರಿಕೆ ಕಂಡಿದೆ. ಈ ಅವಧಿಯಲ್ಲಿ ಒಟ್ಟು 439,524 ಮೆಟ್ರಿಕ್ ಟನ್‌ಷ್ಟು ವಸ್ತುಗಳನ್ನು ಸಾಗಾಣೆ ಮಾಡಲಾಗಿದೆ. ಇದು ಹಿಂದಿನ ಹಿಂದಿನ ಹಣಕಾಸು ವರ್ಷಕ್ಕಿಂತ 7.1 ಶೇಕಡಾ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಕಾರ್ಗೋ ಸರ್ವಿಸ್ ಸಹ ದಾಖಲೆಯನ್ನು ಮುಟ್ಟಿದೆ. ಈ ಸೇವೆಯಲ್ಲಿ 2,66,186 ಮೆಟ್ರಿಕ್ ಟನ್ ವಸ್ತುಗಳನ್ನು ಸಾಗಾಣೆ ಮಾಡಲಾಗಿದೆ. ಇನ್ನು ದೇಶೀಯ ಕಾರ್ಗೋ ಸರ್ವಿಸ್‌ನಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
ಕಳೆದ ಆರ್ಥಿಕ ವರ್ಷದಲ್ಲಿ ನಮ್ಮ ವಿಮಾನ ನಿಲ್ದಾಣದ ಇತಿಹಾಸ ನಿರ್ಮಿಸಿದೆ. ಅತಿ ಹೆಚ್ಚು ಪ್ರಯಾಣಿಕರು ಹಾಗೂ ಸರಕು ಸರಂಜಾಮುಗಳನ್ನು ಸಾಗಿಸಿ ದಾಖಲೆ ಬರೆದಿದೆ. ಈಗಾಗಲೇ ವಿಮಾನಯಾನ ಸಂಸ್ಥೆಗಳ ಸಂಖ್ಯೆಯೂ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ದಾಖಲೆಯ ವಾಹನಗಳ ಮಾರಾಟದಲ್ಲೂ ಏರಿಕೆ ಆಗಿದೆ. ಕಳೆದ ಹಣ ಕಾಸು ವರ್ಷದಲ್ಲಿ 42,18,746 ಯುನಿಟ್ಸ್ ಆಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಅಂಕಿ ಅಂಶ 8.4ಕ್ಕೆ ಏರಿಕೆ ಆಗಿದೆ. ಭಾರತದಲ್ಲಿ ದ್ವಿಚಕ್ರ ವಾಹನ ಹಾಗೂ ಒಟ್ಟಾರೆ ವಾಹನದ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ.












Click it and Unblock the Notifications