Bengaluru Airport: ಕೆಂಪೇಗೌಡ ಏರ್‌ಪೋರ್ಟ್ ಟರ್ಮಿನಲ್ 2ನಿಂದ ವಿದೇಶಿ ವಿಮಾನಗಳ ಹಾರಟ ಮುಂದೂಡಿಕೆ, ಕಾರಣ ತಿಳಿಯಿರಿ
ಬೆಂಗಳೂರು, ಆಗಸ್ಟ್, 31: ನಾಳೆಯಿಂದ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್ 2ರಿಂದ ವಿದೇಶಿ ವಿಮಾನಗಳ ಹಾರಟವನ್ನು ಪ್ರಾರಂಭ ಮಾಡಬೇಕಿತ್ತು. ಆದರೆ ಇದೀಗ ದಿಢೀರ್ ಈ ಟರ್ಮಿಲ್ 2ನಿಂದ ಕೆಲ ದಿನಗಳವರೆಗೂ ವಿಮಾನ ಮುಂಡೂಡಿಕೆ ಮಾಡಲಾಗಿದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನು ಎನ್ನುವ ವಿವರವನ್ನು ಇಲ್ಲಿ ತಿಳಿಯರಿ.
ತಾಂತ್ರಿಕ ದೋಷ ಹಿನ್ನೆಲೆ ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್ 2ರಿಂದ ವಿದೇಶಿ ವಿಮಾನಗಳ ಹಾರಾಟ ಮುಂದೂಡಿಕೆ ಮಾಡಲಾಗಿದೆ. ಕೆಲ ದಿನಗಳ ಕಾಲ ಟರ್ಮಿನಲ್ 1ರಿಂದಲೇ ವಿದೇಶಿ ವಿಮಾನಗಳು ಹಾರಾಟ ನಡೆಸಲಿವೆ. ಎಲ್ಲಾ ಅಂದುಕೊಂಡಂತೆಯೇ ಆಗಿದ್ದರೆ ನಾಳೆಯಿಂದಲೇ ಟರ್ಮಿನಲ್ 1ರಿಂದ ದೇಶಿಯ ಮತ್ತು ಟರ್ಮಿನಲ್ 2ರಿಂದ ವಿದೇಶಿ ವಿಮಾನಗಳ ಹಾರಾಟ ನಡೆಸಬೇಕಿತ್ತು. ಆದರೆ ತಾಂತ್ರಿಕ ದೋಷ ಹಿನ್ನೆಲೆ ವಿಮಾಣ ಹಾರಾಟವನ್ನು ಮುಂದೂಡಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್ ಎರಡು 5 ಸಾವಿರ ಕೋಟಿ ರೂಪಾಯಿ ವೆಚ್ಚದ ವಿನೂತನ ಗಾರ್ಡನ್ ಅನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಸೂಕ್ತ ಮತ್ತು ಯೋಗ್ಯ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಂತಿಮ ಪರಿಶೀಲನೆಯ ಸಲುವಾಗಿ ಕೊನೆಯ ಕ್ಷಣದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಆದೇಶದವರೆಗೂ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಟರ್ಮಿನಲ್ 1ರಿಂದ ನಡೆಯುತ್ತವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೊನೇ ಕ್ಷಣದಲ್ಲಿ ತೆಗೆದುಕೊಂಡ ಈ ನಿರ್ಧಾರದಿಂದ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ನಮ್ಮ ಪ್ರಯಾಣಿಕರಿಗೆ ಸಾಧ್ಯವಾದಷ್ಟು ಉತ್ತಮ ಪ್ರಯಾಣದ ಅನುಭವವನ್ನು ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದು, ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಯನ್ನು ಪ್ರಶಂಸಿಸುತ್ತೇವೆ.
ಅಂತಾರಾಷ್ಟ್ರೀಯ ಪ್ರಯಾಣದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಬಿಐಎಎಲ್ ವಕ್ತಾರರು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ ಅಂತಾ ಎಎನ್‌ಐ ವರದಿ ಮಾಡಿದೆ.












Click it and Unblock the Notifications