ನಕಲಿ ಆಧಾರ ಕಾರ್ಡ್ ಜಾಲ: ಬೆಂಗಳೂರಿನಲ್ಲಿ ನಾಲ್ವರ ಬಂಧನ
ಬೆಂಗಳೂರು, ಜೂನ್ 17: ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಜೋಡಿಸುವುದು ಕಡ್ಡಾಯ ಎಂದು ನಿನ್ನೆ(ಜೂನ್ 16) ತಾನೇ ಸುಪ್ರೀಂ ಕೋರ್ಟ್ ಆದೇಶಿಸಿದ್ದು ಗೊತ್ತಿರುವುದು. ಇಂದು ಮತ್ತೊಮ್ಮೆ ಆಧಾರ್ ಕಾರ್ಡ್ ಸುದ್ದಿಯಲ್ಲಿದೆ.

ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ನಾಲ್ವರನ್ನು ಬೆಂಗಳೂರಿನ ಯಲಹಂಕದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೋಹನ್ ಕುಮಾರ್, ಪ್ರದೀಪ್, ಮಲ್ಲಪ್ಪ ಮತ್ತು ದೇವರಾಜ್ ಬಂಧಿತರು. ಕರ್ನಾಟಕ ಸರ್ಕಾರ ಸಚಿವಾಲಯದ ನಕಲಿ ಲೆಟರ್ ಹೆಡ್ ತಯಾರಿಸಿಕೊಂಡು, ಗೆಜೆಟೆಡ್ ಅಧಿಕಾರಿಯ ನಕಲಿ ಸಹಿ ಮಾಡುತ್ತಿದ್ದ ಇವರು ಇದೇ ರೀತಿಯಾಗಿ ಹಲವರಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆಂದು ಶಂಕಿಸಲಾಗಿದೆ. ಅಪರಾಧಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿಯಬೇಕಿದೆ.












Click it and Unblock the Notifications