• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ ಮೆಟ್ರೋಗೆ ಕೋಚ್ ತಯಾರಿ ಆರಂಭಿಸಿದ ಬಿಇಎಂಎಲ್

|

ಬೆಂಗಳೂರು, ಜುಲೈ 30 : ಬೆಂಗಳೂರಿನಲ್ಲಿರುವ ಬಿಇಎಂಎಲ್ ಮುಂಬೈ ಮೆಟ್ರೋಗೆ ಬೋಗಿಗಳನ್ನು ಪೂರೈಕೆ ಮಾಡುವ ಟೆಂಡರ್ ಪಡೆದಿದೆ. 63 ಬೋಗಿಗಳ ಉತ್ಪಾದನಾ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಸೋಮವಾರ ಬೆಂಗಳೂರಿನ ಬಿಇಎಎಲ್‌ ಕಚೇರಿಯಲ್ಲಿ ಬೋಗಿಗಳನ್ನು ತಯಾರು ಮಾಡುವ ಕಾರ್ಯಕ್ಕೆ ಸಿಎಂಡಿ ದೀಪಕ್ ಕುಮಾರ್ ಹೋಟಾ ಚಾಲನೆ ಕೊಟ್ಟರು. "ನಿಗದಿತ ಅವಧಿಯಲ್ಲಿಯೇ ಬೋಗಿಗಳನ್ನು ಪೂರೈಕೆ ಮಾಡಲಾಗುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬೈ: ಭಾನುವಾರದಿಂದ ಮೆಟ್ರೋ ಸಂಚಾರ ಆರಂಭಮುಂಬೈ: ಭಾನುವಾರದಿಂದ ಮೆಟ್ರೋ ಸಂಚಾರ ಆರಂಭ

2014ರ ಜೂನ್ 8ರಂದು ಮುಂಬೈನಲ್ಲಿ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಮೆಟ್ರೋಗೆ ಚಾಲನೆ ಸಿಗುವಾಗ ಬಿಇಎಂಎಲ್ 63 ಮೆಟ್ರೋ ಬೋಗಿಗಳನ್ನು ತಯಾರು ಮಾಡಿ ಕಳಿಸಿತ್ತು. 3015 ಕೋಟಿ ರೂ. ಮೌಲ್ಯದ ಟೆಂಡರ್ ಇದಾಗಿತ್ತು.

ಏರ್‌ಪೋರ್ಟ್‌ ಮೆಟ್ರೋ ಪರಿಷ್ಕೃತ ಮಾರ್ಗ ಬಹಳ ದೂರ, ವೆಚ್ಚವೂ ಹೆಚ್ಚುಏರ್‌ಪೋರ್ಟ್‌ ಮೆಟ್ರೋ ಪರಿಷ್ಕೃತ ಮಾರ್ಗ ಬಹಳ ದೂರ, ವೆಚ್ಚವೂ ಹೆಚ್ಚು

ಪ್ರಸ್ತುತ 63 ಬೋಗಿಗಳನ್ನು ಪೂರೈಕೆ ಮಾಡುವ ಟೆಂಡರ್ ಪುನಃ ಬಿಇಎಂಎಲ್ ಪಡೆದಿದೆ. ಇದುವರೆಗೂ ಒಟ್ಟು 505 ಬೋಗಿಗಳನ್ನು ಪೂರೈಕೆ ಮಾಡುವ ಟೆಂಡರ್ ಪಡೆಯುವ ಮೂಲಕ ಬಿಇಎಂಎಲ್ ದೇಶದ ದೊಡ್ಡ ಉದ್ಯಮ ಎಂಬುದನ್ನು ಸಾಬೀತು ಮಾಡಿದೆ.

ಮೆಟ್ರೋ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆಮೆಟ್ರೋ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆ

300 ಪ್ರಯಾಣಿಕರನ್ನು ಕೊಂಡೊಯ್ಯುವ ಬೋಗಿಗಳನ್ನು ಬಿಇಎಂಎಲ್ ತಯಾರು ಮಾಡಲಿದೆ. ಸ್ಟೈನ್ ಲೆಸ್ ಸ್ಟೀಲ್‌ನಿಂದ ತಯಾರು ಮಾಡುವ ಬೋಗಿಯಲ್ಲಿ 4 ಬಾಗಿಲುಗಳಿದ್ದು, ಸಿಸಿಟಿವಿಯನ್ನು ಸಹ ಒಳಗೊಂಡಿರಲಿದೆ.

English summary
The Bharat Movers Limited (BEML) Bengaluru unit started the production of metro cars for the Mumbai Metropolitan Region Development Aythority. BEML will produce 63 six car train set for Mumbai metro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X