Get Updates
Get notified of breaking news, exclusive insights, and must-see stories!

ಬೇಲೂರು ರಘುನಂದನ್ ಪುಸ್ತಕ ಬಿಡುಗಡೆ, ನಾಟಕ ಪ್ರದರ್ಶನ

ಬೇಲೂರು ರಘನಂದನ್ ನಾವು ಇಂದು ಸಾಹಿತ್ಯ ಕ್ಷೇತ್ರದಲ್ಲಿ ಕೇಳಿಸಿಕೊಳ್ಳುತ್ತಿರುವ ಚಿರಪರಿಚಿತ ಹೆಸರು. ಕಾವ್ಯ, ನಾಟಕ, ಮಕ್ಕಳ ಕಥೆಗಳು, ವಿಮರ್ಶೆ ಹೀಗೆ ಸಾಹಿತ್ಯದ ಹಲವೂ ಜಲದ ಒರತೆಗಳನ್ನು ತಳಸ್ಪರ್ಶಿಯಾಗಿ ಮುಟ್ಟಿ ಹೊಸದೇನನ್ನೋ ಕಟ್ಟುವ ಕುತೂಹಲ ಮತ್ತು ಜವಾಬ್ಧಾರಿಗಳಿರುವ ಮನುಷ್ಯ. ಕವಿ ಈ ಮಣ್ಣಿನ ಘಮಲನ್ನು ಉಸಿರಾಡುತ್ತಲೇ ಜೀವಂತಿಕೆಯ ಮೂಲಗಳನ್ನು ಪ್ರತಿಪಾದಿಸುವ ಶಕ್ತಿಯನ್ನು ಪಡೆದಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇವರ ಸೊನ್ನೆಯಾಗುವ ಕಾಯ. ಕವನ ಸಂಕಲನ ಬಿಡುಗಡೆಗೆ ಸಿದ್ದವಾಗಿದೆ. ಒಂದು ಕವನ ಸಂಕಲನ ಬಿಡುಗಡೆಯಾಗುತ್ತದೆ ಎಂದರೇ ಮಾರ್ಮಿಕ ಮಾತುಗಳಾಡುವರೇ ಹೆಚ್ಚು. ಕಾಲ ಕಾಲಕ್ಕೆ ಸ್ಪಂದಿಸುವ ಜೀವಂತ ಕಾವ್ಯವನ್ನು ಗುರುತಿಸುವ ಪ್ರಕ್ರಿಯೇ ಕುವೆಂಪುವಿನ ನಂತರ ಸಮರ್ಪಕವಾಗಿ ನಡೆಯಲಿಲ್ಲ. ಎಂಬುದು ಲೋಕ ಸತ್ಯ.

ಬೇಲೂರು ರಘನಂದನ್ ಇಪ್ಪತ್ತೊಂದನೇ ಶತಮಾನದ ಹೊಸ ಕವಿಯಾಗಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ ಕಾವ್ಯದ ಓದು ಮತ್ತು ಅರ್ಥಗ್ರಹಿಕೆಯ ಬಗ್ಗೆ ಇಡೀ ಕರ್ನಾಟಕದ ಯುವ ಪ್ರತಿಭೆಗಳನ್ನು ಪ್ರಭಾವಿಸುತ್ತಾ ತನ್ನೊಳಗಿನ ಕಾವ್ಯದ ನಶೆಯನ್ನಾ ಸಾಹಿತ್ಯ ಲೋಕಕ್ಕೆ ನೀಡುತ್ತಿರುವಾ ಈ ಕವಿಯ ಕಾವ್ಯವೇ ಹೊಸ ಚಿಂತನೆಗೆ ಮಾರ್ಗದರ್ಶಿಯಾಗುತ್ತದೆ.

Belur Raghunandan book release KH Kalasoudha

ರಘನಂದನ್ ಅವರ 'ಸೊನ್ನೆಯಾಗುವ ಕಾಯ' ಕವನ ಸಂಕಲನ ಸೃಷ್ಟಿಯ ಪ್ರಕ್ರಿಯೆಗಳನ್ನು ಹೊಸ ರೂಪಕ ಮತ್ತು ಪ್ರತಿಮೆಗಳ ಮೂಲಕ ಕಟ್ಟಲು ಪ್ರಯತ್ನಿಸುತ್ತದೆ. ಮನುಷ್ಯನ ಮನಸ್ಸು ಮತ್ತು ದೇಹದ ಗುಂಗಿನ ಹಂಗನ್ನು ಕಾವ್ಯಕ್ಕೆ ಒಗ್ಗಿಸುವ ಕಲಾತ್ಮಕತೆ ಸರಳವಾಗಿ ಕಾಣುವುದಾದರೂ ಕುತೂಹಲ ಮೂಡಿಸುತ್ತದೆ.

ಕವಿ ತನ್ನ ಕಲ್ಪನೆಯ ಪಾಕದಲ್ಲಿ ಕುದಿಸಿರುವ ಅನುಭವವನ್ನು ಉಣಬಡಿಸುವ ರೀತಿಯೂ ಸೊಗಸಾಗಿದ್ದು. ಒಂದೇ ಧಾವಂತದಲ್ಲಿ ಓದಿ ಮುಗಿಸುವ ,ಓದಿದ ಮೇಲೆ ಮತ್ತೆ ಓದಿಸುವ ಜೊತೆಗೆ ಆನಂದವನ್ನು ಕಾಯ್ದುಕೊಳ್ಳುವ ಶಕ್ತಿ ಈ ಕವನಸಂಕಲನದಲ್ಲಿ ಇದೆ. ಇವರ ಪದ್ಯಗಳ ಬಗ್ಗೆ ವಿಶೇಷ ಚರ್ಚೆ ಅಗತ್ಯವಾಗಿ ನಡೆಯಬೇಕು. ಒಬ್ಬ ಶಲ್ಲಿಯನ್ನೂ ಕೀಟ್ಸನನ್ನೂ ಓದಿದ ಅನುಭವ ದೊರಕುತ್ತದೆ.

Belur Raghunandan book release KH Kalasoudha

ಮಕ್ಕಳ ಕಥೆಗಳು ಅಪರೂಪವಾಗುತ್ತಿರುವ ಈ ಕಾಲಘಟ್ಟದಲ್ಲಿ ರಘುನಂದನ್ ಅವರ 'ಹಾರುವ ಆನೆ ಕಥೆಗಳು' ಮಕ್ಕಳ ಜೀವನಕ್ಕೆ ಮೌಲ್ಯ ಮತ್ತು ಆದರ್ಶಗಳನ್ನು ತುಂಬುವ ಕಥೆಗಳಾಗಿ ಗುರುತಿಸಿಕೊಳ್ಳತ್ತವೆ. ಜೊತೆಗೆ ಮಕ್ಕಳ ಮನಸ್ಸಿನ ಬೇಸರವನ್ನು ಕಳೆಯುತ್ತವೆ.

ಈ ಕೃತಿ ಬಿಡುಗಡೆಯ ದಿನ ದಿನಾಂಕ: 10/04/2019 ಸಂಧ್ಯಾಕಾಲ 5.30 ಆತ್ಮೀಯ ಸಾಹಿತ್ಯ ಪ್ರಿಯರಿಗೆ ಗೆಳೆಯರಿಗೆ ಸ್ವಾಗತ. ಸ್ಥಳ: ಕೆಎಚ್ ಕಲಾಸೌಧ, ಹನುಮಂತನಗರ, ಬೆಂಗಳೂರು. ಜೊತೆಗೆ ಬೆಳಕಿನ ಕಿಂಡಿ ಮಕ್ಕಳ ನಾಟಕ ಪ್ರದರ್ಶನವಿರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+