ಬೆಳ್ಳಂದೂರು ಕೆರೆಗೆ "ಕಾಂಗ್ರೆಸ್ ಕೆರೆ" ಎಂದು ಮರು ನಾಮಕರಣ
Recommended Video

ಬೆಂಗಳೂರು, ಆಗಸ್ಟ್ 22: ಮಿತಿಮೀರಿದ ಮಾಲಿನತೆಯಿಂದಾಗಿ ಇಡೀ ರಾಷ್ಟ್ರದ ಗಮನ ಸೆಳೆದಿರುವ ಬೆಳ್ಳಂದೂರು ಕೆರೆಗೆ ಕಾಂಗ್ರೆಸ್ ಕೆರೆ ಎಂದು ಮರು ನಾಮಕರಣ ಮಾಡಿರುವ ನವ ಭಾರತ ಪ್ರಜಾಸತ್ತಾತ್ಮಕ ಪಕ್ಷದ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾತನಾಡಿದ ಕಾರ್ಯಕರ್ತರು, ಪ್ರಪಂಚದ ಎಂಟನೇ ಅದ್ಭುತವನ್ನು ಸೃಷ್ಟಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಇದು ಸಲ್ಲಿಸಲೇ ಬೇಕಾದ ಗೌರವ ಎಂದು ನವ ಭಾರತ ಕಾರ್ಯಕರ್ತರು ಟೀಕಿಸಿದರು.

"ಕಾಂಗ್ರೆಸ್ ಕೆರೆ" ಎನ್ನುವ ಬ್ಯಾನರ್ ಗಳನ್ನು ಬೆಳ್ಳಂದೂರು ಕೆರೆಯ ಸುತ್ತಲೂ ಅಳವಡಿಸುವ ಮೂಲಕ ಹಾಗು ಸಿ.ಎಂ ಸಿದ್ದರಾಮಯ್ಯ ಮತ್ತು ಕೆ. ಜೆ.ಜಾರ್ಜ್ ರವರ ಮುಖವಾಡ ಧರಿಸಿ ಮರುನಾಮಕರಣದ ಉದ್ಘಾಟನೆ ಮಾಡುವ ಮೂಲಕ ಅಣುಕು ಪ್ರದರ್ಶನ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಅನಿಲ್ ಶೆಟ್ಟಿ "ಇತ್ತೀಚೆಗೆ ನಾವು ನೋಡಿದ ಹಾಗೆ ಸಿದ್ದರಾಮಯ್ಯ ಸರ್ಕಾರವು ಜಾರಿಮಾಡುತ್ತಿರುವ ಯೋಜನೆಗಳಿಗೆ ನೆಹರು ಹಾಗು ಗಾಂಧಿ ವಂಶಸ್ಥರ ಹೆಸರಿಡಲು ತುಂಬಾ ಉತ್ಸಾಹ ತೋರಿಸುತ್ತಿದೆ. ಉದಾಹರಣೆ ಇಂದಿರಾ ಕ್ಯಾಂಟೀನ್. ಆದುದರಿಂದ ನಾವ್ಯಾಕೆ ಬೆಳ್ಳಂದೂರು ಕೆರೆಗೆ ಸರ್ಕಾರದ ಹೆಸರಿಟ್ಟು ಗೌರವಿಸಬಾರದು ಎಂಬ ಆಲೋಚನೆಮಾಡಿ ಮರುನಾಮಕರಣ ಮಾಡಿದ್ದೇವೆ. ಈ ಮೂಲಕ ಸರ್ಕಾರವು ಕೊಲ್ಲುತ್ತಿರುವ ಬೆಳ್ಳಂದೂರು ಕೆರೆಯನ್ನು ಉಳಿಸುವಂತೆ ಆಗ್ರಹಿಸುತ್ತಿದ್ದೇವೆ ಹಾಗು ಸರ್ಕಾರವು ಬರಿ ಸುಳ್ಳುಹೇಳುವುದನ್ನು ಬಿಟ್ಟು ಕೆರಗಳನ್ನು ಉಳಿಸುವ ಕೆಲಸ ಮಾಡಬೇಕು" ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಜನಜಾಗೃತಿ ಹಾಡುಗಳನ್ನು ಹಾಡಿದರು.












Click it and Unblock the Notifications