ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಸ್ತವ, ಕಲ್ಪನಾ ಬದುಕಿನ ಹೂರಣ ಬೆಳಕಿನ ಅಂಗಡಿ

|
Google Oneindia Kannada News

ಬೆಂಗಳೂರು, ಮೇ 2: ಎಸ್‌.ವಿ. ಸುಷ್ಮಾ ನಿರ್ದೇಶನದ ಥೇಮಾ ಪ್ರಸ್ತುತಪಡಿಸುತ್ತಿರುವ ಬೇಲೂರು ರಘುನಂದನ್ ಅವರ ನಾಟಕ 'ಬೆಳಕಿನ ಅಂಗಡಿ' ಮೇ.7 ರಂದು ರಂಗಶಂಕರದಲ್ಲಿ ಸಂಜೆ.7.30ಕ್ಕೆ ಪ್ರದರ್ಶನ ಕಾಣಲಿದೆ.

ಬೆಳಕಿನ ಅಂಗಡಿ, ಮಧ್ಯ ವಯಸ್ಕ ಹೆಣ್ಣೊಬ್ಬಳ ಜೀವನ ಗಾಥೆ. ಕಲಾವಿದೆಯೊಬ್ಬಳ ಬದುಕಿನ ಅಂತರಂಗ ದರ್ಶನ, ಸ್ತ್ರೀತ್ವ ಮತ್ತು ಮಾತೃತ್ವಗಳು ಬಣ್ಣ ಮತ್ತು ಚಿತ್ರಗಳ ಮೂಲಕ ಪಾತ್ರಗಳಾಗುತ್ತಲೇ ಏಕಾಂಗಿ ಬದುಕಿನ ಹಲವು ಆಯಾಮಗಳನ್ನು ಕಟ್ಟುತ್ತದೆ.

ಮೇ 4ರಂದು ಹನುಮಂತನಗರದಲ್ಲಿ ಬೀಚಿಯವರ 'ನನ್ನ ಭಯಾಗ್ರಫಿ' ಮೇ 4ರಂದು ಹನುಮಂತನಗರದಲ್ಲಿ ಬೀಚಿಯವರ 'ನನ್ನ ಭಯಾಗ್ರಫಿ'

ಇಲ್ಲಿನ ಕನಸುಗಳು ವಾಸ್ತವ ಮತ್ತು ಕಲ್ಪನೆ ಎರಡರಲ್ಲೂ ಕ್ರಿಯೆ ಮತ್ತು ಪ್ರತಿಕ್ರಿಯೆಗಳಾಗಿ ಇಡೀ ನಾಟಕವನ್ನು ಮುನ್ನಡೆಸುತ್ತದೆ. ಅನಾಥ ಪ್ರಜ್ಞೆ ಹಾಗೂ ನಗರದ ಬದುಕಿನ ಮಧ್ಯಮವರ್ಗದ ಜನರ ಸಂಕಟಗಳು ಮತ್ತು ಸಂಘರ್ಷಣೆಗಳ ನಡುವೆ ನಾಟಕ ವ್ಯಕ್ತಿ ಕೇಂದ್ರದಲ್ಲಿ ರೂಪ ಪಡೆಯುತ್ತಾ ಸಾಮಾಜಿಕವಾಗುತ್ತದೆ.

Belakina Angadi - A world of love Drama in Rangashankara

ಇಲ್ಲಿ ಎಲ್ಲಾ ಪಾತ್ರಗಳು ತಾನು ಇಷ್ಟಪಟ್ಟ ಬದುಕನ್ನೇ ಹುಡುಕುತ್ತವೆ. ಆ ಮೂಲಕ ದಕ್ಕುವ ಪ್ರೀತಿ ಸ್ವಾತಂತ್ರ್ಯ ಬೆಳಕಿನ ಅಂಗಡಿ ನಾಟಕದ ಮೂಲ ದ್ರವ್ಯ.

English summary
Belakina Angadi - A world of love Drama in Rangashankara on May 7. Belakina Angadi drama is a story of a middle aged artist, which portrays her inner feelings.Feminism and motherhood are canvassed on the stage through lolors and paintings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X