ಮೃತಭಿಕ್ಷುಕನ ಕೃತಕ ಕಾಲಿನಲ್ಲಿತ್ತು 96 ಸಾವಿರ
ಬೆಂಗಳೂರು, ಜನವರಿ 2: ಭಿಕ್ಷುಕ ಎಂದಮೇಲೆ ಅವರ ಬಳಿ ನೂರೋ ಇನ್ನೋರೊ ಚಿಲ್ಲರೆಗಳು ಇರುವುದು ಸಾಮಾನ್ಯ ಆದರೆ ಮೃತ ಭಿಕ್ಷುಕನ ಬಳಿ ಬರೋಬ್ಬರಿ 96 ಸಾವಿರ ರೂ ದೊರೆತಿದೆ.
ಮೃತಭಿಕ್ಷುಕನ ಕೃತಕ ಕಾಲಿನಲ್ಲಿ 96 ಸಾವಿರ ರೂ ದೊರೆತಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ವೃದ್ಧ ಭಿಕ್ಷುಕ(ಷರೀಫ್) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಷರೀಫ್ 10 ವರ್ಷಗಳಿಂದ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡಿಕೊಂಡು ದಿನ ಕಳೆಯುತ್ತಿದ್ದ, ನಿಲ್ದಾಣದಲ್ಲೇ ಮಲಗುತ್ತಿದ್ದ, ಐದು ವರ್ಷಗಳ ಹಿಂದೆ ಷರೀಫ್ ಕಾಲಿಗೆ ಗ್ಯಾಂಗ್ರಿನ್ ಆಗಿತ್ತು, ಈ ಹಿನ್ನೆಲೆಯಲ್ಲಿ ಕೃತಕ ಕಾಲು ಅಳವಡಿಸಲಾಗಿತ್ತು.

ಮಂಗಳವಾರ ಬೆಳಗ್ಗೆ 10.20ರ ಸುಮಾರಿಗೆ ಷರೀಫ್ ರೈಲು ನಿಲ್ದಾಣದ ಬಳಿ ತೆರಳುತ್ತಿದ್ದಾಗ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದ, ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೃತಕ ಕಾಲಿನಲ್ಲಿ 500,100,50,20 ರೂ ಮುಖಬೆಲೆಯ ನೋಟು ಸೇರಿ 96 ಸಾವಿರ ರೂ ಪತ್ತೆಯಾಗಿದೆ.











Click it and Unblock the Notifications