ಆ.26ರಂದು ಬೀದಿ ಬಿಂಬ ರಂಗದ ತುಂಬ ನಾಟಕ ನೋಡಿ, ಆನಂದಿಸಿ
ಬೆಂಗಳೂರು, ಆಗಸ್ಟ್ 24: ಅಶ್ವಘೋಷ ಥಿಯೇಟರ್ ಟ್ರಸ್ಟ್ ಪ್ರಸ್ತುತಪಡಿಸುವ, ಕರಣಂ ಪವನ್ ಪ್ರಸಾದ್ ರಚಿಸಿ, ನಿರ್ದೇಶಿಸಿರುವ 'ಬೀದಿ ಬಿಂಬ ರಂಗದ ತುಂಬ ' ನಾಟಕದ ಎರಡು ಪ್ರದರ್ಶನಗಳು ಆಗಸ್ಟ್ 26ರಂದು ಆಯೋಜನೆಗೊಂಡಿದೆ.
ನಮ್ಮ ಸುತ್ತಮುತ್ತಲಿನ ಸಮಾಜದ ಘಟನೆಗಳಿಗೆ ಕನ್ನಡಿ ಹಿಡಿಯುವಂಥ ಪಾತ್ರಗಳನ್ನು ಹೊಂದಿರುವ ಈ ನಾಟಕ, ಈಗಾಗಲೇ ವಿವಿಧ ವೇದಿಕೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.
ನಾಟಕದ ಹೆಸರು: ಬೀದಿ ಬಿಂಬ ರಂಗದ ತುಂಬ
ತಂಡ : ಅಶ್ವಘೋಷ
ಸಮಯ/ ದಿನಾಂಕ : ಸಂಜೆ 4.30 ರಿಂದ 7.30
ನಿರ್ದೇಶನ: ಪವನ್ ಪ್ರಸಾದ್ ಶರ್ಮ
ಸ್ಥಳ: ಪ್ರಭಾತ್ ಕಲಾ ಪೂರ್ಣಿಮಾ, ಎನ್ ಆರ್ ಕಾಲೋನಿ, ಬೆಂಗಳೂರು
ಟಿಕೆಟ್ ದರ: 100ರು
ಟಿಕೆಟ್ ಗಳು ಬುಕ್ ಮೈ ಶೋನಲ್ಲಿ ಲಭ್ಯ.

ನಾಟಕದ ತಿರುಳು: ಅಳಿಯುತ್ತಿರುವ ಬೀದಿ ನಾಟಕ ಹಾಗೂ ಸ್ವಮೇಕ್ ನಾಟಕ ಸಂಸ್ಕೃತಿಯನ್ನು ಉಳಿಸಲು ಮುಂದಾಗುವ ನಾಯಕ, ವ್ಯವಸ್ಥೆಯನ್ನು ದೂಷಿಸುತ್ತಾ ನಾಟಕದ ಮೂಲಕ ಜನರನ್ನು ಎಚ್ಚರಿಸಲು ಯೋಜಿಸುತ್ತಾನೆ. ರಾಜಕಾರಣಿಗಳು ಮಾಧ್ಯಮಗಳನ್ನು ಎದುರು ಹಾಕಿಕೊಳ್ಳುತ್ತಾನೆ. ಕೊನೆಗೆ ಹೇಗೆ ವ್ಯವಸ್ಥೆ ನಾಯಕ ಕಟ್ಟಿ ಬೆಳೆಸಲು ಯತ್ನಿಸಿದ ನಾಟಕ ತಂಡ ಹಾಗೂ ಯುವ ಜನಾಂಗವನ್ನು ತುಳಿಯಲು ಯತ್ನಿಸುತ್ತದೆ ಎಂಬುದನ್ನು ಪಂಚಿಂಗ್ ಡೈಲಾಗ್ ಹಾಗೂ ಸ್ಕ್ರಿಪ್ಟ್ ಮೂಲಕ ತೋರಿಸಲಾಗಿದೆ.












Click it and Unblock the Notifications