ನಮ್ಮ ಮೆಟ್ರೋ ಕಾಮಗಾರಿ ವೇಳೆ ಅವಘಡ, ಓರ್ವ ಸಾವು

ಬೆಂಗಳೂರು, ನವೆಂಬರ್ 11: ಮೆಟ್ರೋ ಕಾಮಗಾರಿ ವೇಳೆ ನಡೆದ ಅವಘಡದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಒಡಿಶಾ ಮೂಲದ ಕಾರ್ಮಿಕನೊಬ್ಬ ಮೃತಪಟ್ಟು , ಇಬ್ಬರು ಗಂಭೀರವಾಗಿ ಗಾಯಗೊಂಡರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಒಡಿಶಾ ಮೂಲದ ಸಮೀರ್ ಕಾಂತೋ ಸೇನಾಪತಿ(24) ಮೃತ ಕಾರ್ಮಿಕ. ಘಟನೆಯಲ್ಲಿ ಕಾರ್ಮಿಕರಾದ ಅನಿಲ್ ಜಾಧವ್ ಮತ್ತು ಎಂಡಿರಬ್ಬನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Beam Collapse Namma Metro Worker Killed

ನವೆಂಬರ್ 7ರಂದು ಸಂಜೆ 5.30ರ ಸುಮಾರಿಗೆ ನಡೆಯುತ್ತಿದ್ದ ಕಾಮಗಾರಿ ವೇಳೆ ಚೈನ್‌ಪುಲ್ಲಿ ಸಹಾಯದಿಂದ ಕ್ರಷರ್‌ನ್ನು ಇಳಿಸುವಾಗ ಚೈನ್ ತುಂಡಾಗಿದೆ. ಕಾರ್ಮಿಕರ ಮೇಲೆ ಕಬ್ಬಿಣದ ಕ್ರಷ್ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ತಕ್ಷಣವೇ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೇ ಮರುದಿನ ಸಮೀರ್ ಕಾಂತೋ ಮೃತಪಟ್ಟಿದ್ದಾರೆ. ಮೆಟ್ರೋ ಕಾಮಗಾರಿ ಸೇರಿದಂತೆ ಯಾವ ಕಾಮಗಾರಿಯಾದರೂ ಸರಿ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು, ಇಂತಹ ಘಟನೆ ಇದೇ ಮೊದಲಲ್ಲ ಹಲವು ಘಟನೆಗಳು ಸಂಭವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+