ಕೆಂಪೇಗೌಡ ಬಡಾವಣೆ: ವಿವಿಧ ಸೌಲಭ್ಯ ಕಾಮಗಾರಿಗೆ ಚಾಲನೆ
ಬೆಂಗಳೂರು, ಫೆಬ್ರವರಿ 27 : ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ವಿವಿಧ ಸೌಲಭ್ಯ ಕಲ್ಪಿಸಲು ಬಿಡಿಎ ಮುಂದಾಗಿದೆ. ಒಳಚರಂಡಿ ಸೌಲಭ್ಯ, ಕುಡಿಯುವ ನೀರು, ವಿದ್ಯುತ್ ಸೌಕರ್ಯ ಒದಗಿಸುವ ಕಾಮಗಾರಿಗೆ ಚಾಲನೆ ದೊರೆಯಲಿದೆ.
ಪ್ರಾಧಿಕಾರ 1,619 ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 4 ರಂದು ಚಾಲನೆ ನೀಡಲಿದ್ದಾರೆ. ಕೆಂಪೇಗೌಡ ಬಡಾವಣೆ 4043 ಎಕರೆ ವಿಸ್ತೀರ್ಣ ಹೊಂದಿದೆ. ಈಗಾಗಲೇ ಸ್ವಾಧೀನಗೊಂಡಿರುವ ಜಮೀನಿನಲ್ಲಿ ಶೇ.60 ರಷ್ಟು ಭಾಗ ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಗೊಂಡಿದೆ.
ಪ್ರಾಥಮಿಕ ಸಿವಿಲ್ ಕೆಲಸ ಅರ್ಧದಷ್ಟು ಪೂರ್ಣಗೊಂಡಿದ್ದು, ಪಿಆರ್ ಆರ್ ನ ಭಾಗವಾಗಿ ಬಡಾವಣೆಯಲ್ಲಿ ಹಾದು ಹೋಗುವ 10.7 ಕಿ.ಮೀ ಉದ್ದ ಮುಖ್ಯ ಆರ್ಟೀರಿಯಲ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಬಡಾವಣೆಗೆ ನಾನಾ ದಿಕ್ಕಿನಿಂದ ನೇರ ಸಂಪರ್ಕ ನೀಡಲಿದ್ದು, 2017-18 ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಯೋಜನೆ ಪ್ರಕಟಿಸಿದೆ.

ರಸ್ತೆ ನಿರ್ಮಾಣ ಹೊಣೆಯನ್ನು ಸರ್ಕಾರ ಬಿಡಿಎಗೆ ನೀಡಿದ್ದು, ಇತ್ತೀಚೆಗೆ ಟೆಂಡರ್ 465.79 ಕೋಟಿ ರೂಗೆ ಅಂತಿಮಗೊಳಿಸಲಾಗಿದೆ. 100 ಮೀ. ಅಗಲದ ಮುಖ್ಯ ಕ್ಯಾರೇಜ್ ಭಾಗ ಆರು ಪಥ ಇರಲಿದೆ. ತಲಾ ಎರಡು ಪಥಗಳ ಸರ್ವೀಸ್ ರಸ್ತೆ ಹಾಗೂ ಸೈಕಲ್ ಪಥಕ್ಕೂ ಅವಕಾಶ ಕಲ್ಪಿಸಲಾಗಿದೆ.
ಏನೇನು ಸೌಲಭ್ಯ ಮತ್ತು ಅಗತ್ಯಗಳು: ಇಡೀ ಬಡಾವಣೆ ವ್ಯಾಪ್ತಿಗೆ ದ್ವಿ ಕೊಳವೆ ಅಳವಡಿಕೆ, ನೀರು-ಒಳಚರಂಡಿ, ವಿದ್ಯುತ್ ಕಾಮಗಾರಿಗೆ 2 ವರ್ಷ ಗಡುವು, ಸೌಲಭ್ಯ ನಿರ್ವಹಣೆ 10 ವರ್ಷದ ವರೆಗೆ ಗುತ್ತಿಗೆ ನೀಡಲಾಗುತ್ತಿದೆ. ಬಡಾವಣೆಯಲ್ಲಿ 40 ಸಾವಿರ ನಿವೇಶನ ರಚಿಸಲಾಗುತ್ತಿದೆ. ಜತೆಗೆ ಹತ್ತು ಕಡೆ ಒಟ್ಟು 450 ಎಕರೆ ಪ್ರದೇಶದಲ್ಲಿ ಫ್ಲಾಟ್ಸ್ ನಿರ್ಮಾಣಕ್ಕೆ ಜಾಗ ಮೀಸಲಿಡಲಾಗಿದೆ.
ವಿದ್ಯುತ್ ಸೌಲಭ್ಯ ಕಾಮಗಾರಿಯಡಿ ಬೀದಿ ದೀಪ, ಪರಿವರ್ತಕಗಳ ಸ್ಥಾಪನೆ ಕಾರ್ಯವೂ ಸೇರಿದೆ.
-
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ












Click it and Unblock the Notifications