ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ 4ನೇ ಹಂತದ ನಿವೇಶನ ಇ-ಹರಾಜು ಪ್ರಕ್ರಿಯೆ ಆರಂಭ

Google Oneindia Kannada News

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂರನೇ ಹಂತದ ಹರಾಜು ಪ್ರಕ್ರಿಯೆಯು ಮುಗಿದಿದ್ದು, ಗರಿಷ್ಠ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಉತ್ತಮ ಪ್ರತಿಕ್ರಿಯೆ ಬಂದಿದೆ. ಒಟ್ಟು 402 ನಿವೇಶನಗಳನ್ನು ಇ-ಹರಾಜಿನಲ್ಲಿ ಅಳವಡಿಸಿದ್ದು, ಕಾರಣಾಂತರಗಳಿಂದ 40 ನಿವೇಶನಗಳನ್ನು ಹಿಂಪಡೆಯಲಾಗಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ 286 ನಿವೇಶನಗಳು ಮಾರಾಟವಾಗಿದ್ದು, ಒಟ್ಟು 1673 ಬಿಡ್ಡುದಾರರು ಭಾಗವಹಿಸಿರುತ್ತಾರೆ. ಹರಾಜಿಗಿಟ್ಟಿದ್ದ ಮೌಲ್ಯದಲ್ಲಿ ಶೇಕಡ 47.58ರಷ್ಟು ಗಳಿಕೆಯಾಗಿದೆ. 55 ನಿವೇಶನಗಳಿಗೆ ಪ್ರತಿಕ್ರಿಯೆ ಬಂದಿರುವುದಿಲ್ಲ.

ಅರ್ಕಾವತಿ ಬಡಾವಣೆಯ ನಿವೇಶನ ಸಂಖ್ಯೆ 1355ಕ್ಕೆ ಆರಂಭಿಕ ಠೇವಣಿ ರೂ. 44,400 ನಿಗದಿಪಡಿಸಿದ್ದು ಬಿಡ್ ದರವು ಮೂರು ಪಟ್ಟು ಅಂದರೆ 1,54,900 ರೂ.ಗಳಿಗೆ ಬಿಡ್ ಮಾಡಿ ಖರೀದಿಸಿರುತ್ತಾರೆ. ಹೆಚ್.ಎಸ್.ಆರ್. 3ನೇ ಸೆಕ್ಟರ್ ನಿವೇಶನ ಸಂಖ್ಯೆ 213/ಎ ಕ್ಕೆ ಆರಂಭಿಕ ಠೇವಣಿ ರೂ. 1,50,000 ನಿಗದಿಪಡಿಸಿದ್ದು, ಬಿಡ್ ದರವು 2,71,000 ರೂ.ಗಳಿಗೆ ಬಿಡ್ ಮಾಡಿ ಖರೀದಿಸಿರುತ್ತಾರೆ.

BDA Third Phase Site e Auction is completed, Fourth phase begin

ಹರಾಜು ನಿವೇಶನಗಳಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳು ಈ ಕೆಳಕಂಡಂತಿದೆ:
ಅಧಿಸೂಚನೆಗೊಂಡ ಒಟ್ಟು ನಿವೇಶನಗಳ ಸಂಖ್ಯೆ-402
ಪ್ರತಿಕ್ರಿಯೆ ಬಾರದಿರುವುದು-55
ಶೇ. 5ಕ್ಕಿಂತ ಕಡಿಮೆ ಪ್ರತಿಕ್ರಿಯೆ-21
ಹಿಂಪಡೆದ ನಿವೇಶನಗಳ ಸಂಖ್ಯೆ-40
ಇ-ಹರಾಜಿನಲ್ಲಿ ಮಾರಾಟವಾದ ಒಟ್ಟು ನಿವೇಶನಗಳು-286
ಒಟ್ಟು ಬಿಡ್ಡುದಾರರು-1673
ಒಟ್ಟು ಮೂಲ ಬೆಲೆ-ರೂ. 1,80,45,73,202-00
ಒಟ್ಟು ಹರಾಜು ಮೌಲ್ಯ-ರೂ. 2,66,31,95,312-00
ಗಳಿಕೆ-ರೂ. 85,86,22,110-00
ಶೇಕಡಾವಾರು ಗಳಿಕೆ-47.58%

ನಾಲ್ಕನೇ ಹಂತದ ಇ-ಹರಾಜು ಪ್ರಕ್ರಿಯೆ ಪ್ರಾರಂಭ

ನಾಲ್ಕನೇ ಹಂತದ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಬನಶಂಕರಿ, ಸರ್. ಎಂ. ವಿಶ್ವೇಶ್ವರಯ್ಯ, ಜೆ.ಪಿ. ನಗರ, ಅರ್ಕಾವತಿ ಬಡಾವಣೆ, ಬಿ.ಟಿ.ಎಂ. ಬಡಾವಣೆಗಳಲ್ಲಿ ವಿವಿಧ ಅಳತೆಯ ಒಟ್ಟು 448 ನಿವೇಶನಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. * ದಿನಾಂಕ 12.10.2020 ರಿಂದ ಬಿಡ್ಡಿಂಗ್ ಪ್ರಾರಂಭವಾಗಲಿದ್ದು, ದಿನಾಂಕ 03.11.2020 ರಿಂದ ದಿನಾಂಕ 09.11.2020ರವರೆಗೆ ಆರು ಹಂತಗಳಲ್ಲಿ ಬಿಡ್ಡಿಂಗ್ ಮುಕ್ತಾಯವಾಗಲಿದೆ.

* ಈ ನಿವೇಶನಗಳಿಗೆ Geo-Tag ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಇದರಿಂದಾಗಿ ಬಿಡ್ದಾರರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿವೇಶನಗಳನ್ನು ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X