ಟ್ರಾಫಿಕ್ ನಲ್ಲಿ ಕಾಯ್ಬೇಡಿ, ಮೇಲ್ಸೇತುವೆಯಲ್ಲಿ ಸಂಚರಿಸಿ
ಬೆಂಗಳೂರು, ಅಕ್ಟೋಬರ್, 07: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಎದುರಾಗುವ ಟ್ರಾಫಿಕ್ ನಲ್ಲಿ ನಿಂತು ನಿಂತು ಹೈರಾಣರಾಗಿದ್ದೀರಾ? ಹಾಗಾದರೆ ನಿಮಗೊಂದು ಶುಭಸುದ್ದಿ. ಈ ಸಮಸ್ಯೆ ನೀಗಿಸಲು ಷಟ್ಪಥ ನಿರ್ಮಿಸಲು ಬಿಡಿಎ ನಿರ್ಧರಿಸಿದೆ.
ಏರ್ ಪೋರ್ಟ್ ಹತ್ತಿರ ತಲೆ ಎತ್ತುವ ಷಟ್ಪಥ ನಿರ್ಮಾಣಕ್ಕೆ 1,350 ಕೋಟಿ ವೆಚ್ಚ ತಗುಲಲಿದ್ದು, ಕಾಮಗಾರಿ ಎರಡು ವರ್ಷದಲ್ಲಿ ಕೊನೆಗೊಳಿಸಲು ಯೋಜನೆ ಹಾಕಿಕೊಂಡಿದ್ದೇವೆ. ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. [ಹುಬ್ಬಳ್ಳಿ-ಬೆಂಗಳೂರು ನಡುವೆ ಏರ್ ಪೆಗಾಸಸ್ ವಿಮಾನ ಸೇವೆ]

ಈ ಮೇಲ್ಸೆತುವೆ ಬಸವೇಶ್ವರ ವೃತ್ತದಿಂದ ಆರಂಭವಾಗಿ ವಿಂಡ್ಸರ್ ಮ್ಯಾನರ್, ಮೇಖ್ರಿ ವೃತ್ತದ ಮೂಲಕ ಸಾಗಿ ಹೆಬ್ಬಾಳ ಮೇಲ್ಸೆತುವೆಗೆ ಸಂಪರ್ಕ ಕಲ್ಪಿಸುತ್ತದೆ. ಇದರ ಆಧಾರ ಸ್ತಂಭಗಳು ಹಾಗೂ ಉಳಿದ ಭಾಗಗಳಿಗೆ ಉಕ್ಕು ಮತ್ತು ಸಿಮೆಂಟ್ ಬಳಸಲಾಗುತ್ತದೆ ಎಂದು ಬಿಡಿಎ ಎಂಜಿನಿಯರ್ ಸದಸ್ಯ ಎಸ್. ಎನ್ ಕುಮಾರ್ ತಿಳಿಸಿದ್ದಾರೆ.
ಬಿಬಿಎಂಪಿ ಎಲೆವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಿದ್ದು ನೀಲನಕ್ಷೆ ತಯಾರಾಗುತ್ತಿದೆ. ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಗೂ ಚಾಲನೆ ನೀಡಲಾಗಿದೆ. ಒಟ್ಟಿನಲ್ಲಿ ಪೆಡಂಭೂತವಾಗಿ ಕಾಡುತ್ತಿರುವ ಟ್ರಾಫಿಕ್ ಸಮಸ್ಯೆ ಕಡಿಮೆಗೊಳಿಸಲು ಬಿಬಿಎಂಪಿ ಮತ್ತು ಬಿಡಿಎ ಸತತ ಶ್ರಮಿಸುತ್ತಿದೆ.












Click it and Unblock the Notifications