₹150 ಕೋಟಿ ಬೆಲೆ ಬಾಳುವ ಜಾಗ ವಶಕ್ಕೆ ಪಡೆದ ಬಿಡಿಎ- ಯಾಕೆ ಮತ್ತು ಎಲ್ಲಿ?
ಬೆಂಗಳೂರು, ಡಿಸೆಂಬರ್, 31: ಬೆಂಗಳೂರಿನಲ್ಲಿರುವ ಎಚ್‍ಬಿಆರ್ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಸೇರಿರುವ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ 150 ಕೋಟಿ ರೂಪಾಯಿ ಬೆಲೆಬಾಳುವ ಜಾಗವನ್ನು ಶನಿವಾರ (ಡಿಸೆಂಬರ್ 30) ಬಿಡಿಎ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.
ಹೆಚ್‍ಬಿಆರ್ ಬಡಾವಣೆಯ 1ನೇ ಹಂತ, ಕಾಚರಕನಹಳ್ಳಿ ಗ್ರಾಮದ ಸರ್ವೆ ನಂ. 181, 182 ಮತ್ತು 183ರಲ್ಲಿ ಪ್ರಾಧಿಕಾರಕ್ಕೆ ಸೇರಿರುವ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ವಶಕ್ಕೆ ಪಡೆದ ಜಾಗವು ಸುಮಾರು 150 ಕೋಟಿ ರೂಪಾಯಿ ಬೆಲೆಬಾಳುವ 2.20 ಹೆಕ್ಟೇರ್ ಜಾಗ ಆಗಿದೆ.

ರಾಜ್ಯ ಸರಕಾರ 1985ರಲ್ಲಿ ಪ್ರಾಧಿಕಾರದ ಆಸ್ತಿ ಎಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದ್ದರಿಂದ ಭದ್ರತೆಯ ಹಿತದೃಷ್ಟಿಯಿಂದ 200 ಅಧಿಕಾರಿಗಳು ಸೇರಿದಂತೆ 100 ಜನ ಕಾರ್ಮಿಕರು ಹಾಗೂ 15 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಮ್ಮುಖದಲ್ಲಿ ತೆರವುಗೊಳಿಸಿ ಪ್ರಾಧಿಕಾರದ ಅಸ್ತಿತ್ವಕ್ಕೆ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾರಿಡಾರ್-4 ಕಾಮಗಾರಿಯನ್ನ ಗುತ್ತಿಗೆ ಪಡೆದ L&T ಕಂಪನಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ, ರೈಲು ನಿಲ್ದಾಣ ಕಾಮಗಾರಿಗಳ ವಿಚಾರದಲ್ಲಿ ಆಗಾಗಾ ದೊಡ್ಡ ದೊಡ್ಡ ಅಭಿವೃದ್ಧಿಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಉಪನಗರ ರೈಲು ಯೋಜನೆಯ ಕಾರಿಡಾರ್-4 ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಎಲ್ ಆಂಡ್ ಟಿ ಕಂಪನಿ ಪಡೆದಿದೆ. ಹಾಗಾದರೆ ಎಷ್ಟು ಕೋಟಿಗೆ ಗುತ್ತಿಗೆ ಪಡೆದಿದೆ ಹಾಗೂ ಇದನ್ನು ಪೂರ್ಣಗೊಳಿಸುವ ಅವಧಿಯ ಬಗ್ಗೆ ಇಲ್ಲಿ ತಿಳಿಯಿರಿ.
ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-4 ನಿರ್ಮಾಣ ಕಾಮಗಾರಿಯಯನ್ನು ಎಲ್ ಆಂಡ್ ಟಿ ಕಂಪನಿ 1040.51 ಕೋಟಿ ರೂಪಾಯಿಗೆ ಪಡೆದಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿ ಪಡಿಸಲಾಗಿದೆ.
ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕಿಸುವ ಕಾರಿಡಾರ್ -4.48 ಕಿಲೋ ಮೀಟರ್ ಉದ್ದವಿದೆ. 8.960 ಕಿಲೋ ಮೀಟರ್ ಎತ್ತರಿಸಿದ ಮಾರ್ಗ ಮತ್ತು 37.9 ಕಿಲೋ ಮೀಟರ್ ಸಮತಲ ಮಾರ್ಗಗಳನ್ನು ಒಳಗೊಂಡಿದೆ. ಈ ನಿರ್ಮಾಣ ಕಾಮಗಾರಿಯ ಒಪ್ಪಂದವು ಯಲಹಂಕ ಬಳಿ ಕಾರಿಡಾರ್-1 ಮತ್ತು ಕಾರಿಡಾರ್-4ಕ್ಕಾಗಿ 1.2 ಕಿಲೋ ಮೀಟರ್ ಉದ್ದದ ಡಬಲ್ ಡೆಕ್ಕರ್ ಜೋಡಣೆಯ ನಿರ್ಮಾಣ ಒಳಗೊಂಡಿದೆ.
ಬೆನ್ನಿಗಾಹಳ್ಳಿ ಬಳಿ ಬಿಎಂಆರ್‌ಸಿಎಲ್ ವಯಡಕ್ಟ್ ಕೆಳಗೆ 500 ಮೀಟರ್ ಉದ್ದದ ಬಿಎಸ್‌ಆರ್‌ಪಿ ಎತ್ತರಿಸಿದ ಮಾರ್ಗ ನಿರ್ಮಿಸಲಿದೆ. ಬಿಎಸ್‌ಆರ್‌ಪಿ ಮತ್ತು ಬಿಎಂಆರ್‌ಸಿಎಲ್ ನಡುವೆ ಮಾರ್ಗ ಸಮಾನವಾಗಿ ಹಂಚಿಕೆ ಆಗಲಿದೆ. ಈ ಮಾದರಿಯ ಕಾಮಗಾರಿ ನಿರ್ಮಾಣವು ದೇಶದಲ್ಲಿಯೇ ಮೊದಲು ಎಂದು ಬಿಎಸ್‌ಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications