ಬಿಡಿಎ ಸೈಟು ಬೇಕಾ? ಕನಸಿನ ಸೈಟು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
Recommended Video

ಬೆಂಗಳೂರು, ಡಿಸೆಂಬರ್ 29 : ನಾಡಪ್ರಭು ಕೆಂಪೇಗೌಡ ಬಡಾವಣೆಯ 2 ನೇ ಹಂತದಲ್ಲಿನ 5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಹೊಸ ವರ್ಷಕ್ಕೆ ಸಾರ್ವಜನಿಕರಿಗೆ ಭರ್ಜರಿ ಕೊಡುಗೆ ನೀಡಲಿದೆ.
ಗುರುವಾರದಿಂದಲೇ ಅರ್ಜಿ ಫಾರಂಗಳು ವಿವಿಧ ಬ್ಯಾಂಕ್ ಗಳಲ್ಲಿ ಲಭ್ಯವಿದ್ದು, ಫೆ.9 ರವರೆಗೆ ನಿಗದಿತ ಅರ್ಜಿ ಶುಲ್ಕ ಹಾಗೂ ಆರಂಭಿಕ ಠೇವಣಿ ಪಾವತಿಸಿ, ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2015ರ ನವೆಂಬರ್ ನಲ್ಲಿ ರಾಜ್ಯೋತ್ಸವ ಕೊಡುಗೆಯಾಗಿ 5 ಸಾವಿರ ಸೈಟ್ ಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಬಿಡಿಎ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ, ಸಿಗದೆ ಇರುವವರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ.

ದೊಡ್ಡ ಸೈಟ್ ಗಳಿಗೆ ಕತ್ತರಿ
ಬಡಾವಣೆಯ ಮೊದಲ ಹಂತದಲ್ಲಿ ನಿಗದಿ ಮಾಡಲಾಗಿದ್ದ ಮೌಲ್ಯವನ್ನೇ ಕಾಯ್ದಿರಿಸಿ ಬಿಡಿಎ, ದೊಡ್ಡ ಅಳತೆಯ ನಿವೇಶನಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ನೋಟು ಬ್ಯಾನ್ ಬಳಿಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಏರುಪೇರುಗಳಾಗಿದ್ದು ಅಲ್ಲದೆ ಕಳೆದ ಬಾರಿ ನಿವೇಶನ ಮೌಲ್ಯ ಹೆಚ್ಚಸಿರುವ ಕಾರಣಕ್ಕೆ 450 ಕ್ಕೂ ಅಧಿಕ ಮಂದಿ ಹಂಚಿಕೆಯಾದ ಸೈಟ್ ಗಳನ್ನು ಹಿಂದಿರುಗಿಸಿದ್ದರು.
50/80 ಚದರಡಿಯ ಸೈಟ್ ಗಳ ಸಂಖ್ಯೆಯನ್ನು 500 ರಿಂದ 300ಕ್ಕೆ ಹಾಗೂ 40/60 ಚದರಡಿಯ ಸೈಟ್ ಗಳ ಸಂಖ್ಯೆಯನ್ನು1 ಸಾವಿರದಿಂದ 700ಕ್ಕೆ ಇಳಿಕೆ ಮಾಡಲಾಗಿದೆ. ಬದಲಾಗಿ 30/40 ಚದರಡಿಯ ಸೈಟ್ ಗಳನ್ನು 2 ಸಾವಿರದಿಂದ 2500ಕ್ಕೆ ಹೆಚ್ಚಳ ಮಾಡಲಾಗಿದೆ.

ಅರ್ಕಾವತಿಯಲ್ಲಿ ಭೂಮಿ ಕಳೆದುಕೊಂಡವರಿಗೂ ಆದ್ಯತೆ
ಆ ವೇಳೆ 5 ಸಾವಿರ ನಿವೇಶನಗಳನ್ನು ಆಸಕ್ತರಿಗೆ ನೀಡಲು ಆಲೋಚಿಸಲಾಗಿತ್ತು ಈ ಪೈಕಿ 3 ಸಾವಿರ ನಿವೇಶನಗಳನ್ನು ಭೂಮಿ ಕಳೆದುಕೊಂಡವರಿಗೆ ನೀಡಲಾಗುವುದು ಎಂದು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ತಿಳಿಸಿದರು. ಅರ್ಕಾವತಿ ಬಡಾವಣೆ ಯೋಜನೆಯ ಡಿನೋಟಿಫಿಕೇಷನ್ ವೇಳೆ ಭೂಮಿ ಕಳೆದುಕೊಂಡವರಿಗೂ ಕೂಡ ಕೆಂಪೇಗೌಡ ಬಡಾವಣೆಗೆ ಅರ್ಜಿ ಸಲ್ಲಿಸಬಹುದು. ಅವರ ಅರ್ಜಿಗಳನ್ನೂ ಕೂಡ ಪರಿಗಣಿಸಲಾಗುತ್ತದೆ. 5 ಸಾವಿರ ಬಿಡಿಎ ನಿವೇಶನಗಳ ಪೈಕಿ ಅರ್ಧದಷ್ಟು ಜೆನರಲ್ ಕೆಟಗರಿಯಲ್ಲಿ ನೀಡಲಾಗುವುದು ಎಂದು ಹೇಳಿದರು. ಅರ್ಕಾವತಿ ಬಡಾವಣೆಗಾಗಿ ಭೂಮಿ ಕಳೆದುಕೊಂಡ ಅನೇಕರು ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ ವೇಳೆ ಅರ್ಜಿ ಸಲ್ಲಿಸಿದ್ದರು. ಕೆಲವರಿಗೆ ಮಾತ್ರ ನಿವೇಶನಗಳು ಸಿಕ್ಕಿತ್ತು. ಈ ಬಾರಿ ಅರ್ಜಿ ಸಲ್ಲಿಸುವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅರ್ಕಾವತಿಗಾಗಿ ಭೂಮಿ ಕಳೆದುಕೊಂಡವರ ವೇದಿಕೆ ಅಭಿಪ್ರಾಯ ಪಟ್ಟಿದೆ.

ಬಿಡಿಎ ಕಚೇರಿಯಲ್ಲಿ ಅರ್ಜಿ ದೊರೆಯುವುದಿಲ್ಲ
ಕೆಂಪೇಗೌಡ ಬಡಾವಣೆಯ ಅರ್ಜಿಗಳು ಬಿಡಿಎ ಕಚೇರಿಯಲ್ಲಿ ಲಭ್ಯವಿರುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗಳಲ್ಲೂ ಬಿಡಿಎ ಅರ್ಜಿಗಳನ್ನು ನೀಡಿಲ್ಲ. ಬಿಡಿಎ ಅಧಿಸೂಚನೆಯಲ್ಲಿ ಸೂಚಿಸಿದ ಬ್ಯಾಂಕ್ ಹಾಗೂ ಶಾಖೆಗಳಲ್ಲಿ ಅರ್ಜಿ ಲಭ್ಯವಿರುತತ್ದೆ ಎಂದು ಸ್ಪಷ್ಟಪಡಿಸಿದೆ.

ಎಲ್ಲೆಲ್ಲಿ ಅರ್ಜಿಗಳು ಲಭ್ಯ
ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ವಿಜಯ ಬ್ಯಾಂಕ್ ಗಳಲ್ಲಿ ಒಟ್ಟು 167 ಶಾಖೆಗಳಲ್ಲಿ ಅರ್ಜಿ ನಮೂನೆ ಲಭ್ಯವಿದೆ.












Click it and Unblock the Notifications