ರೈತರಿಗೆ ಪರಿಹಾರದ ನಿವೇಶನ ವಿತರಿಸಲು ಬಿಡಿಎ ರೆಡಿ: ಒಂದು ಸಮಸ್ಯೆ
ಬೆಂಗಳೂರು, ಜುಲೈ 27: ರೈತರಿಗೆ ಪರಿಹಾರದ ನಿವೇಶನ ವಿತರಿಸುವುದಾಗಿ ಬಿಡಿಎ ಭರವಸೆ ನೀಡಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಪಾರಿಹಾರ ರೂಪದ ನಿವೇಶನ ಕಾಲಮಿತಿಯಲ್ಲಿ ವಿತರಿಸುವುದಾಗಿ ಬಿಡಿಎ ತಿಳಿಸಿದೆ.
ಶುಕ್ರವಾರ ಪ್ರಾಧಿಕಾರದ ಕಚೇರಿಯಲ್ಲಿ ಬಿಡಿಎ ಆಯುಕ್ತರು ಹಾಗೂ ರೈತರ ನಡುವೆ ನಡೆದ ಚರ್ಚೆಯಲ್ಲಿ ಈ ಭರವಸೆ ನೀಡಿದ್ದಾರೆ.ಬಡಾವಣೆಯ 4,027 ಎಕರೆ ಪೈಕಿ 2500 ಎಕರೆ ಪ್ರದೇಶದಲ್ಲಿ ನಿವೇಶನ ರಚಿಸಲಾಗಿದೆ. ಜೊತೆಗೆ ಅಂದಾಜು 700 ಎಕರೆಗೆ ಸಂಬಂಧಿಸಿದ ಭೂಮಿಯ ವ್ಯಾಜ್ಯ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಇದು ಶೀಘ್ರ ಇತ್ಯರ್ಥಗೊಂಡಲ್ಲಿ ರೈತರಿಗೆ ತ್ವರಿತ ಪರಿಹಾರ ಒದಗಿಸಬಹುದು ಎಂದು ಹೇಳಿದೆ.

ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಂಡು ಸರ್ಕಾರದ ಅನುಮೋದನೆಗೆ ಕಡತ ಕಳುಹಿಸಿಕೊಡಲಾಗುವುದು. ಇದಕ್ಕೆ ಒಪ್ಪಿಗೆ ದೊರೆತರೆ ರೈತರಿಗೆ ನಿವೇಶನ ವಿತರಿಸಲಾಗುವುದು .
ಇದಲ್ಲದೆ ವ್ಯಾಜ್ಯವಿಲ್ಲದ ನಿವೇಶನ ನೀಡಲು ಯಾವುದೇ ಸಮಸ್ಯೆ ಇಲ್ಲ ಎಂದು ಆಯುಕ್ತರು ಅಭಯ ನೀಡಿದ್ದಾರೆ. ಮುಖ್ಯವಾಗಿ ಬಡಾವಣೆ ಮಧ್ಯೆ ಹಾದುಹೋಗುವ ಮುಖ್ಯ ಸಂಪರ್ಕ ರಸ್ತೆ ಸಮೀಪದಲ್ಲಿ ಪರಿಹಾರ ನಿವೇಶನ ವಿತರಿಸುವಂತೆ ರೈತರು ಮನವಿ ಮಾಡಿದ್ದಾರೆ.












Click it and Unblock the Notifications