ಎಸಿಬಿ ದಾಳಿ: ಬಿಡಿಎ 'ಶ್ರೀಮಂತ' ಎಂಜಿನಿಯರ್ ಗೌಡಯ್ಯ ಅಮಾನತು
ಬೆಂಗಳೂರು, ಅಕ್ಟೋಬರ್ 16: ಇತ್ತೀಚೆಗೆ ಬೆಂಗಳೂರಲ್ಲಿ ಎಸಬಿ ದಾಳಿಗೆ ಒಳಗಾಗಿದ್ದ ಬಿಡಿಎ ಅಧಿಕಾರಿ ಗೌಡಯ್ಯ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಅಕ್ಟೋಬರ್ 5ರಂದು ಬೆಂಗಳೂರಿನ ಎರಡು ಕಡೆ ಎಸಿಬಿ ಬೃಹತ್ ದಾಳಿ ನಡೆಸಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾಗಿದ್ದರು, ಅರು ತಮ್ಮ ಕುಟುಂಬದ ಹೆಸರಿನಲ್ಲಿ 2 ಮನೆ 8, ನಿವೇಶನ, 14 ಅಪಾರ್ಟ್ ಮೆಂಟ್, 3 ಕೆಜಿ ಚಿನ್ನ, 10 ಕೆಜಿ ಬೆಳ್ಳಿ, 3 ಕಾರು, 3 ದ್ವಿಚಕ್ರ ವಾಹನ, 75 ಲಕ್ಷ ನಗದು, 30 ಲಕ್ಷ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ್ದರು. ಅವರ ಮಾವನ ಮನೆಯಲ್ಲಿ 4.5 ಕೆಜಿ ಚಿನ್ನಾಭರಣ ಲಭ್ಯವಾಗಿತ್ತು.

ಇಷ್ಟೇ ಅಲ್ಲದೆ ಅಂದು ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಅವರ ಮನೆ ಮೇಲೂ ಎಸಿಬಿ ಪೊಲೀಸರು ದಾಳಿ ನಡೆಸಿದ್ದು, ಕುಟುಂಬಸ್ಥರ ಹೆಸರಿನಲ್ಲಿದ್ದ 8 ಮನೆ, 10 ನಿವೇಶನಗಳು, ವಿವಿಧೆಡೆ 10 ಎಕರೆ ಕೃಷಿ ಭೂಮಿ, ಚಿನ್ನ 1.6ಕೆಜಿ, 4 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು. ಈ ಎರಡು ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಮಾಹಿತಿಮಮೇರೆಗೆ ಅವರಿಗೆ ಸಂಬಂಧಿಸಿದ ಎಂಟು ಕಡೆಗಳಲ್ಲಿ ದಾಳಿ ನಡೆದಿತ್ತು.












Click it and Unblock the Notifications