ದೇಶಿ ತಳಿ ಸಸಿ ನೆಡಲು ಬಿಬಿಎಂಪಿ ನಿರ್ಧಾರ

ಬೆಂಗಳೂರು, ಮೇ 14: ಬಿಬಿಎಂಪಿಯು ಇದುವರೆಗೂ ಬೆಳೆಸುತ್ತಿದ್ದ ವಿದೇಶಿ ಜಾತಿಯ ಮರಗಳನ್ನು ಬಿಟ್ಟು ಈಗ ಭೂಮಿಯೊಳಗೆ ಬೇರೂರುವ ಸ್ಥಳೀಯ ಪ್ರಭೇದದ ಮರಗಳನ್ನು ಬೆಳೆಸಲು ಮುಂದಾಗಿದೆ.

ನಗರದಲ್ಲಿ ಸಣ್ಣ ಗಾಳಿ ಮಳೆಗೂ ಮರೆಗಳು ಧರೆಗುರುತ್ತಿದೆ ಇದು ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅರಣ್ಯ ವಿಭಾಗ ಎಚ್ಚೆತ್ತುಕೊಂಡಿದ್ದು, 2018ನೇ ಸಾಲಿನ ಮಳೆಗಾಲದಲ್ಲಿ ಭೂಮಿಯೊಳಗೆ ಆಳವಾಗಿ ಬೇರೂರುವ ಸಸಿಗಳನ್ನು ಬೆಳೆಸಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಪ್ರಸ್ತುತ ಮುಂಗಾರು ಆರಂಭವಾಗುತ್ತಿದ್ದಂತೆ ಮಹಾಗನಿ, ಹೊಂಗೆ, ತಬೂಬಿಯ ಸೇರಿದಂತೆ ವಿವಿಧ ಜಾತಿಯ ಮಣ್ಣಿಗೆ ಹೊಂದಿಕೊಳ್ಳುವ ಸಸಿಗಳನ್ನು ಬೆಳೆಸಲು ಸಿದ್ಧತೆ ಮಾಡಿಕೊಂಡಿದೆ.

BBMP will plant Desi breed saplings in the city

ಸಾಮಾನ್ಯವಾಗಿ ಮೂರ್ನಾಲ್ಕು ಅಡಿಯ-7-8 ತಿಂಗಳ ಸಸಿಗಳನ್ನು ನಾಟಿ ಮಾಡಲಾಗುತ್ತದೆ. ಆದರೆ, ಮುಖ್ಯರಸ್ತೆ ಹಾಗೂ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಈ ಸಸಿಗಳು ಬೆಳೆಯುವುದಕ್ಕೆ ಸಾಧ್ಯವಾಗರಿರುವುದನ್ನು ಗಮನಿಸಿರುವ ಪಾಲಿಕೆಯು ಈ ವರ್ಷ ಕನಿಷ್ಠ 7-8 ಅಡಿಯ ಒಂದು ವರ್ಷದ ಸಸಿಗಳನ್ನು ನಾಟಿ ಮಾಡಲು ಸಿದ್ಧತೆ ನಡೆಸಿದೆ. ಅದಕ್ಕಾಗಿ 75 ಸಾವಿರ ದೊಡ್ಡ ಬ್ಯಾಗ್‌ಗಳಲ್ಲಿ ಹೊಂಗೆ, ಮಹಾಗನಿ, ತಬೂಬಿಯ ಸಸಿಗಳನ್ನು ಬೆಳೆಸಲಾಗುತ್ತಿದೆ.

ಮಳೆಗೆ ಧರೆಗುರುಳುತ್ತಿರುವ ಮರಗಳಲ್ಲಿ ಹೆಚ್ಚಿನವು ವಿದೇಶಿ ಪ್ರಭೇದದ ಮರಗಳೇ ಆಗಿರುವುದು ಪಾಲಿಕೆಯ ಈ ನಿರ್ಧಾರಕ್ಕೆ ಕಾರಣವಾಗಿದೆ. ಕಳೆದ ವರ್ಷ ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ಸುರಿದ ಮಳೆ ಮತ್ತು ಗಾಳಿಗೆ ಒಟ್ಟು 664 ಮರಗಳು ಧರೆಗುರುಳಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+