ಅಪಾರ್ಟ್‌ಮೆಂಟ್‌ಗಳಲ್ಲಿ ಲಸಿಕಾ ಶಿಬಿರ ನಡೆಸಲು ಬಿಬಿಎಂಪಿ ಸಿದ್ಧತೆ
ಬೆಂಗಳೂರು, ಮೇ 1 : ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಭೀತಿ ಹಿನ್ನೆಲೆ, ಹಲವು ರಾಜ್ಯಗಳಲ್ಲಿ ಕೊರೊನಾ ನಿಯಮಗಳನ್ನು ಕಡ್ಡಾಯಗೊಳಿಸಿದೆ. ಜೊತೆಗೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿದೆ. ಸದ್ಯ ಬೆಂಗಳೂರಿನಲ್ಲೂ ಕೂಡ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ, ನಿವಾಸಿಗಳ ಕಲ್ಯಾಣ ಸಂಘ ನಗರದಲ್ಲಿರುವ ಇನ್ನು ಹಲವು ಜನರಿಗೆ ಲಸಿಕೆ ನೀಡಿಲ್ಲ, ಹೀಗಾಗಿ ಲಸಿಕೆ ನೀಡುವಂತೆ ಮನವಿ ಮಾಡಿತ್ತು ಅದರಂತೆ ಬಿಬಿಎಂಪಿ ನಗರದಲ್ಲಿ ಇನ್ನೂ ಮೂರು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಎರಡನೇ ಡೋಸ್ ಪಡೆಯಬೇಕಾಗಿರುವುದರಿಂದ ಅಪಾರ್ಟ್‌ಮೆಂಟ್ ಹಾಗೂ ವಸತಿ ಬಡಾವಣೆಗಳಲ್ಲಿ ಲಸಿಕೆ ಶಿಬಿರ ನಡೆಸಲು ಸಿದ್ದತೆ ಮಾಡಿಕೊಂಡಿದೆ.
ನಿವಾಸಿಗಳ ಕಲ್ಯಾಣ ಸಂಘ ಮತ್ತು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಜೊತೆ ಸಭೆ ನಡೆಸಿದ ಬಿಬಿಎಂಪಿ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ ಅವರು ಕೊರೊನಾ ಹರಡುವಿಕೆ, ಮುನ್ನೆಚ್ಚರಿಕಾ ಡೋಸ್‌ಗಳು ವಿತರಣೆ ಹಾಗೂ ಮಕ್ಕಳ ವ್ಯಾಕ್ಸಿನೇಶನ್ ಕುರಿತು ನಿವಾಸಿಗಳಲ್ಲಿ ಜಾಗೃತಿ ಮೂಡಿಸಿದರು. ಜೊತೆಗೆ 12 ರಿಂದ 18 ವರ್ಷದೊಳಗಿನವರಿಗೂ ಸೇರಿದಂತೆ ಎಲ್ಲಾ ಅರ್ಹ ನಾಗರಿಕರಿಗೆ ಲಸಿಕೆ ಹಾಕಲು ಸಾಕಷ್ಟು ಲಸಿಕೆ ದಾಸ್ತಾನು ಇದೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಐಎಲ್‌ಐ ಕಾಯಿಲೆ ಮತ್ತು ತೀವ್ರ ಉಸಿರಾಟದ ಸಮಸ್ಯೆ ಹೊಂದಿರುವ ರೋಗಿಗಳು ಹಾಗೂ ಹೊರ ರೋಗಿ ಮತ್ತು ಒಳ ರೋಗಿಗಾಗಿ ಬರುವ ರೋಗಿಗಳಿಗೆ ಕೊರೊನಾ ಪರೀಕ್ಷೆಯನ್ನು ನಡೆಸಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.

ಅಲ್ಲದೆ ನಗರದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡ 10 ರಷ್ಟು ಹಾಸಿಗೆಗಳನ್ನು ಕಾಯ್ದಿರಿರಿಸಬೇಕಾಗಿದೆ ಎಂದು ಆಸ್ಪತ್ರೆ ಪ್ರತಿನಿಧಿಗಳ ಜೊತೆ ನಡೆಸ ಸಭೆಯಲ್ಲಿ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ.
ಇನ್ನು ಮಾಲ್, ಹೋಟೆಲ್ , ಸಿನಿಮಾ ಹಾಲ್‌ಗಳಲ್ಲಿ ಡಬಲ್ ಡೋಸ್ ವ್ಯಾಕ್ಸಿನೇಷನ್ ಹಾಕಿದವರಿಗೆ ಪ್ರವೇಶ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಮಾರ್ಷಲ್‌ಗಳು ಕೂಡ ಹೆಚ್ಚು ಜನಸಂದಣಿಯಾಗುವ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಹೇಳಿದೆ.
ಒಟ್ಟಿನಲ್ಲಿ ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುವುದನ್ನ ತಡೆಗಟ್ಟಲು ಬಿಬಿಎಂಪಿ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ನಾಲ್ಕನೇ ಅಲೆ ಹೆಚ್ಚು ಹರಡದಂತೆ ಈಗಿನಿಂದಲೇ ಸೂಕ್ತ ಕ್ರಮ ವಹಿಸಿದೆ.












Click it and Unblock the Notifications