ನಿಸಾರ್ ಅಹಮದ್ ಪುತ್ರನಿಗೆ ಕ್ಯಾನ್ಸರ್: ಬಿಬಿಎಂಪಿಯಿಂದ ಚಿಕಿತ್ಸೆಗೆ ನೆರವು
ಬೆಂಗಳೂರು, ಜನವರಿ 8: ಕ್ಯಾನ್ಸರ್‌ನಿಂದ ಬಳಲುತ್ತಿರುವ ಕವಿ ನಿಸಾರ್ ಅಹಮದ್ ಅವರ ಪುತ್ರ ನವೀದ್ ಅವರ ಚಿಕಿತ್ಸೆಗೆ ಬೆಂಗಳೂರು ಮಹಾನಗರ ಪಾಲಿಕೆ ಸಹಾಯ ಹಸ್ತ ಚಾಚಿದೆ.
ನವೀದ್ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಿಬಿಎಂಪಿ 10 ಲಕ್ಷ ರೂ ಚೆಕ್ ವಿತರಿಸಿದೆ.

ಈ ವೇಳೆ ಉಪ ಮೇಯರ್ ರಾಮಮೋಹನ್ ರಾಜು ಹಾಗೂ ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್ ಉಪಸ್ಥಿತರಿದ್ದರು. ಕವಿ ನಿಸಾರ್ ಅಹಮದ್ ಕೂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅವರ ಚಿಕಿತ್ಸೆಗಾಗಿ ಬಿಬಿಎಂಪಿಯು 20 ಲಕ್ಷ ರೂ ನೀಡಲು ಮುಂದಾಗಿದೆ. ಪಾಲಿಕೆ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ.












Click it and Unblock the Notifications