ಬೆಂಗಳೂರು ಜನರ ಮೇಲೆ ಮತ್ತೊಂದು ಸೆಸ್ ಹೇರಲು ಬಿಬಿಎಂಪಿ ಸಿದ್ಧತೆ

ಬೆಂಗಳೂರು, ಆಗಸ್ಟ್ 27: ಬೆಂಗಳೂರಿಗರೇ ಮತ್ತೊಂದು ತೆರಿಗೆ ಕಟ್ಟಲು ಸಿದ್ಧರಾಗಿ, ತೀವ್ರ ವಿರೋಧದ ನಡುವೆಯೂ ಸಾರಿಗೆ ಉಪಕರ ಹೇರಲು ತಯಾರಿ ನಡೆದಿದೆ.

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ, ಸ್ವತ್ತುಗಳ ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ಸಾರಿಗೆ ಸೆಸ್ ಹೇರಿ, 40ಕೋಟಿ ರೂ ಸಾರಿಗೆ ಸೆಸ್ ಸಂಗ್ರಹಿಸಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಭೂ ಸಾರಿಗೆ ಕರ ಸಂಗ್ರಹಿಸಲು ಲೆಕ್ಕ ಪರಿಶೋಧಕರಿಂದಲೇ ಸರ್ಕಾರಕ್ಕೆ ಮಾಹಿತಿ ರವಾನಿಸಲಾಗಿದೆ.

ಬೆಂಗಳೂರಿನ ರಸ್ತೆಗಳ ಪರಿಸ್ಥಿತಿಯಿಂದ ಬಿಎಂಟಿಸಿ ಬಸ್‌ಗಳು ಹಾಳಾಗುತ್ತಿದ್ದು, ನಗರ ಭೂಸಾರಿಗೆ ವ್ಯವಸ್ಥೆ ಉತ್ತಮ ಪಡಿಸಲು ಬಿಬಿಎಂಪಿ ಹಣ ನೀಡಬೇಕೆಂದು ಕೆಲವು ದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಆಸ್ತಿ ತೆರಿಗೆ ಮೊತ್ತದ ಶೇ.2ರಷ್ಟು ಹಣವನ್ನು ನಗರ ಭೂಸಾರಿಗೆ ಉಪಕರ ಎಂದು ವಸೂಲಿ ಮಾಡಲು ಅನುಮತಿ ನೀಡಿದೆ.

BBMP to impose 2percent transport cess

ಈ ಕುರಿತು ಪ್ರಸ್ತಾವನೆಯನ್ನು ಕೌನ್ಸಿಲ್ ಅನುಮೋದನೆಗೆ ಮಂಡಿಸಲಾಗತ್ತಿದ್ದು, ಬೆಂಗಳೂರಿನ ಆಸ್ತಿ ಮಾಲೀಕರು ಇನ್ನುಮುಂದೆ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ. ನಗರ ಭೂ ಸಾರಿಗೆ ಉಪಕರ ಈ ಹಿಂದೆ ಜಾರಿಯಲ್ಲಿತ್ತು.

ಆಸ್ತಿ ಮಾಲೀಕರಿಗೆ ಹೊರೆಯಾಗುವ ದೃಷ್ಟಿಯಿಂದ ಆದೇಶ ಹಿಂಪಡೆಯುವಂತೆ 2014ರಲ್ಲಿಯೇ ಕೌನ್ಸಿಲ್ ನಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಬಿಬಿಎಂಪಿ ನಿರ್ಣಯವನ್ನು ಪರಿಗಣಿಸಲು ಬರುವುದಿಲ್ಲ ಎಂದು ತಿಳಿಸಿರುವ ಸರ್ಕಾರ ಉಪಕರ ವಸೂಲಿಗೆ ಚಿಂತನೆ ನಡೆಸಿದೆ.

ಉಪಕರ ವಸೂಲಿ ಮಾಡದ ಹಿನ್ನೆಲೆಯಲ್ಲಿ ರಾಜಸ್ವ ನಷ್ಟವಾಗಿದೆ ಎಂದು ಲೆಕ್ಕ ಪರಿಶೋಧನೆ ವೇಳೆ ಆಕ್ಷೇಪಿಸಲಾಗಿತ್ತು. ಈ ಹಿಂದೆ ಆದೇಶದಂತೆ 2013ರಿಂದಲೇ ಶೇ.2ರಷ್ಟು ಹೆಚ್ಚುವರಿ ತೆರಿಗೆ ವಸೂಲಿ ಮಾಡಬೇಕಿತ್ತು ಈ ಚಿಂತನೆ ಕುರಿತು ಇಂದಿನ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+