ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲರಾ ಭೀತಿ; ಬೆಂಗಳೂರಲ್ಲಿ ರಸ್ತೆ ಬದಿ ಹೋಟೆಲ್ ಬಂದ್

|
Google Oneindia Kannada News

ಬೆಂಗಳೂರು, ಮಾರ್ಚ್ 10 : ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ವರದಿಯಾಗಿವೆ. ರೋಗ ಹರಡದಂತೆ ಬಿಬಿಎಂಪಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಬೀದಿ ಬದಿ ತೆರೆದಿಟ್ಟ ಆಹಾರ ಮಾರಾಟವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದೆ.

ಬಿಬಿಎಂಪಿ ಕಾಲರಾ ಮತ್ತು ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ‌ನಗರದಲ್ಲಿನ ರಸ್ತೆ ಬದಿ ಆಹಾರ ಪದಾರ್ಥ ಮಾರಾಟ ಮಾಡುವುದನ್ನು ನಿರ್ಬಂಧಿಸಿದೆ. ಆಹಾರ ಪದಾರ್ಥ ಮಾರುವ ಅಂಗಡಿಗಳನ್ನು ತೆರವು ಮಾಡುತ್ತಿದೆ.‌

ಬಿಬಿಎಂಪಿ ವಾರ್ಡ್‌ ವಿಂಗಡನೆ; ಬದಲಾದ ಹಲವು ವಾರ್ಡ್‌ಗಳ ಸ್ವರೂಪ ಬಿಬಿಎಂಪಿ ವಾರ್ಡ್‌ ವಿಂಗಡನೆ; ಬದಲಾದ ಹಲವು ವಾರ್ಡ್‌ಗಳ ಸ್ವರೂಪ

ನೈರ್ಮಲ್ಯದ ಕೊರತೆ ಇರುವುದರಿಂದ ಸಾರ್ವಜನಿಕರು ರಸ್ತೆ ಬದಿ‌ ಮಾರಲಾಗುವ ಆಹಾರಗಳನ್ನು ಸೇವಿಸದಂತೆ ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಬೆಂಗಳೂರು; ಬೀದಿ ಬದಿ ತೆರೆದಿಟ್ಟ ಆಹಾರ ಮಾರಾಟ ನಿಷೇಧ ಬೆಂಗಳೂರು; ಬೀದಿ ಬದಿ ತೆರೆದಿಟ್ಟ ಆಹಾರ ಮಾರಾಟ ನಿಷೇಧ

BBMP Take Action Against Footpath Vendors & Food Sellers

ಸೋಮವಾರ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಸಾರ್ವಜನಿಕ ಆರೋಗ್ಯ ಸಮಿತಿ ಸಭೆಯನ್ನು ನಡೆಸಿದರು. ಸಭೆಯಲ್ಲಿ ಬೀದಿ ಬದಿ ತೆರೆದಿಟ್ಟ ಆಹಾರ ಮಾರಾಟವನ್ನು ನಿಷೇಧಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.

ಬೆಂಗಳೂರಲ್ಲಿ 4 ಕೊರೊನಾ ಪ್ರಕರಣಗಳು ದೃಢ: ಹೆಚ್ಚಿದ ಆತಂಕ ಬೆಂಗಳೂರಲ್ಲಿ 4 ಕೊರೊನಾ ಪ್ರಕರಣಗಳು ದೃಢ: ಹೆಚ್ಚಿದ ಆತಂಕ

BBMP Take Action Against Footpath Vendors & Food Sellers

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಯ ಬೀದಿ ಬದಿಗಳಲ್ಲಿ ತೆರೆದಿಟ್ಟ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಮಾರಾಟ ಮಾಡುವ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ.

ಒಂದು ಕಡೆ ಕೊರೊನಾ ಭೀತಿಯ ನಡುವೆಯೇ ಬೆಂಗಳೂರು ನಗರದಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾಗಿದ್ದವು. ನಗರದಲ್ಲಿ ಇದುವರೆಗೂ 17 ಜನರಿಗೆ ಕಾಲರಾ ಇರುವುದನ್ನು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

English summary
Bruhat Bengaluru Mahanagara Palike (BBMP) take action to prevent the spread of cholera, gastroenteritis & communicable diseases. Taken up a massive clearing drive overnight to seize footpath eateries, Panipuri vendors, Cut Fruit & Juice center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X