• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ಸ್ಥಾಯಿ ಸಮಿತಿಗಳ ಚುನಾವಣೆಗೆ ದಿನಾಂಕ ನಿಗದಿ

|

ಬೆಂಗಳೂರು, ಜನವರಿ 02 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಚುನಾವಣೆಗೆ ದಿನಾಂಕವನ್ನು ನಿಗದಿ ಮಾಡಲಾಗಿದೆ. ಮೂರು ಬಾರಿ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ವಿವಿಧ ಕಾರಣಗಳಿಂದಾಗಿ ಮುಂದೂಡಲಾಗಿತ್ತು.

ಪ್ರಾದೇಶಿಕ ಆಯುಕ್ತರು ಜನವರಿ 18ರಂದು 12 ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ದಿನಾಂಕ ನಿಗದಿ ಮಾಡಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಸಭಾಂಗಣದಲ್ಲಿ 11.30ಕ್ಕೆ ಚುನಾವಣೆ ನಡೆಯಲಿದೆ.

''ಮೇಯರ್ ಹುದ್ದೆ ಎಂದರೆ ಬಿಬಿಎಂಪಿಯ ಎಟಿಎಂ ಮಷಿನ್

ಮೇಯರ್ ಮತ್ತು ಉಪ ಮೇಯರ್ ಆಯ್ಕೆಯ ಸಮಯದಲ್ಲಿಯೇ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಬೇಕು. ಆದರೆ, ಸದಸ್ಯರ ಅವಧಿ ಮುಗಿದಿಲ್ಲ ಎಂದು ಕೆಲವು ಸದಸ್ಯರು ನ್ಯಾಯಾಲಯ ಮೆಟ್ಟಿಲೇರಿದ್ದರು. ಆದ್ದರಿಂದ, ಚುನಾವಣೆ ಮುಂದೂಡಲಾಗಿತ್ತು.

ಬಿಬಿಬಿಎಂಪಿ 53ನೇ ಮೇಯರ್ ಗೌತಮ್ ಕುಮಾರ್ ಪರಿಚಯ

ಬಳಿಕ ಎರಡು ಬಾರಿ ಪ್ರಾದೇಶಿಕ ಆಯುಕ್ತರು ಸ್ಥಾಯಿ ಸಮಿತಿಗಳ ಚುನಾವಣೆಗೆ ದಿನಾಂಕವನ್ನು ನಿಗದಿ ಮಾಡಿದ್ದರು. ಆದರೆ, ಸದಸ್ಯರು ಚುನಾವಣೆಗೆ ಗೈರಾಗಿದ್ದರು. ಈ ಹಿನ್ನಲೆಯಲ್ಲಿ ಚುನಾವಣೆ ಮುಂದಕ್ಕೆ ಹೋಗಿತ್ತು.

ಬೆಂಗಳೂರಿಗೆ ಕನ್ನಡಿಗ ಮೇಯರ್ ಬೇಕು: ಆಗ್ರಹ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 4 ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತವಿತ್ತು. ಈ ಬಾರಿ ಮೇಯರ್ ಆಯ್ಕೆಯ ಸಂದರ್ಭದಲ್ಲಿ ಪಾಲಿಕೆ ಆಡಳಿತ ಬಿಜೆಪಿ ವಶವಾಗಿದೆ. ಬಿಜೆಪಿ ಬೆಂಬಲಿಸಿದ ಪಕ್ಷೇತರರು ಸ್ಥಾಯಿ ಸಮಿತಿಗಳ ಸದಸ್ಯರಾಗಲು ಬಯಸಿದ್ದಾರೆ.

ಒಟ್ಟು ಮೂರು ಬಾರಿ ಮುಂದೂಡಿಕೆಯಾಗಿದ್ದ ಚುನಾವಣೆ ಈ ಬಾರಿಯಾದರೂ ನಡೆಯಲಿದೆಯೇ? ಕಾದು ನೋಡಬೇಕು. ವಿವಿಧ ಸ್ಥಾಯಿ ಸಮಿತಿಗಳು ಯಾರ ಪಾಲಾಗಲಿವೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

English summary
The Bruhat Bengaluru Mahanagara Palike (BBMP) standing committee elections scheduled on January 18, 2020. Election will be held to 12 standing committees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X