ಡಿಸೆಂಬರ್ 30ಕ್ಕೆ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ
ಬೆಂಗಳೂರು, ಡಿಸೆಂಬರ್ 20: ಕಳೆದ ಎರಡು ಬಾರಿ ಬಿಬಿಎಂಪಿ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಮುಂದೂಡಿದ್ದ ಚುನಾವಣೆಯನ್ನು ಡಿ.30ರಂದು ನಡೆಸುವ ಸಂಬಂಧ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಸದಸ್ಯರು ಅಂದು ಬೆಳಗ್ಗೆ 8 ಗಂಟೆಯಿಂದ 9.30ರವರೆಗೆ ಬಿಬಿಎಂಪಿ ಪೌರ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರಿಗೆ ನಾಮಪತ್ರ ಸಲ್ಲಿಸಬಹುದು. ನಂತರ ಸದಸ್ಯರ ಹಾಜರಾತಿ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗುತ್ತದೆ.
ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆದ ಅ.1 ರಂದು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ನಡೆಯಬೇಕಾಗಿತ್ತು. ಆದರೆ, ಹಿಂದಿನ ಸ್ಥಾಯಿ ಸಮಿತಿ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳದ ಕಾರಣ ಮುಂದೂಡಲಾಗಿತ್ತು.

ನಂತರ ಡಿ.4ರಂದು ಚುನಾವಣೆ ಘೋಷಣೆ ಮಾಡಿಲಾಗಿತ್ತು ಆದರೂ ವಿಧಾನಸಭೆ ಉಪ ಚುನಾವಣೆ ಪ್ರಚಾರದ ಹಿನ್ನೆಲೆ ಯಾವೊಬ್ಬ ಸದಸ್ಯ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ.
ಬಿಬಿಎಂಪಿ ಪಾಲಿಕೆ ಸದಸ್ಯರ ಐದು ವರ್ಷಗಳ ಆಯ್ಕೆ ಅವಧಿ ಬರುವ ಸೆ.28ಕ್ಕೆ ಮುಕ್ತಾಯವಾಗಲಿದೆ.ಅಂದೇ ಸ್ಥಾಯಿ ಸಮಿತಿ ಅಧಿಕಾರವೂ ಅಂತ್ಯಗೊಳ್ಳಲಿದೆ. ಕಳೆದ ಸ್ಥಾಯಿ ಸಮಿತಿ ಸದಸ್ಯರು ಒಂದು ವರ್ಷ ಅಧಿಕಾರಬೇಕು ಎಂದು ನ್ಯಾಯಾಲಯದ ಮೋರೆ ಹೋಗಿ ಚುನಾವಣೆ ಮುಂದೂಡಿದ್ದರು.












Click it and Unblock the Notifications