ಬೆಂಗಳೂರಿನಲ್ಲಿ 4 ತಾಸು ಇದ್ದ ಮೋದಿ: 23 ಕೋಟಿ ರಸ್ತೆಗೆ ಸುರಿದ ಬಿಬಿಎಂಪಿ!

ಬೆಂಗಳೂರು, ಜೂನ್21: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎರಡುದಿನ ಪ್ರವಾಸಕ್ಕೆ ಬಂದಿದ್ದೇ ಬಂದಿದ್ದು. ಬಿಬಿಎಂಪಿ ಹಣದ ಹೊಳೆಯನ್ನೇ ಹರಿಸಿದೆ. ರಸ್ತೆಗಂಡಿಗಳು ಮುಕ್ತಿಯನ್ನು ಕಾಣದಿದ್ದರು. ಮೋದಿ ಸಂಚರಿಸಿದ ಮಾರ್ಗದಲ್ಲಿ ಹಳ್ಳಕೊಳ್ಳಗಳನ್ನು ಮುಚ್ಚುವ ಮೂಲಕ ಕೋಟಿ ಕೋಟಿ ಹಣವನ್ನು ವ್ಯಯ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮತ್ತು ಮೈಸೂರಿಗೆ ಆಗಮಿಸಿದ್ದರು. ಬೆಂಗಳೂರಿಗೆ ಆಗಮಿಸಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದರು. ಬೆಂಗಳೂರಿನಲ್ಲಿ ನಾಲ್ಕು ಗಂಟೆಯ ಕಾರ್ಯಕ್ರಮಕ್ಕಾಗಿ ಬಿಬಿಎಂಪಿ ಖರ್ಚು ಮಾಡಿದ ಹಣ ಬರೋಬ್ಬರಿ ಎಷ್ಟು ಗೊತ್ತಾ ಬರೋಬ್ಬರು 23 ಕೋಟಿ.

ಕೇವಲ ರಸ್ತೆ ಡಾಂಬರಿಕರಣದ ಹೆಸರಿನಲ್ಲಿ ಕೋಟಿ ಕೋಟಿ ಹಣವ್ನು ಬಿಬಿಎಂಪಿ ವೆಚ್ಚ ಮಾಡಿದೆೆ. ಡಾಂಬರ್ ನಿರ್ಮಾಣಕ್ಕೆ ಖರ್ಚಾಗಿದ್ದು 14 ಕೋಟಿ ಸ್ಟ್ರೀಟ್ ಲೈಟ್, ಮೀಡಿಯನ್ ನಿರ್ವಹಣೆ, ಚರಂಡಿ ದುರಸ್ತಿ, ಬಣ್ಣ ಬಳಿಯಲು ಖರ್ಚಾಗಿದ್ದು 9 ಕೋಟಿಯನ್ನು ಬಿಬಿಎಂಪಿ ಖರ್ಚು ಮಾಡಿದ್ದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಹಣ ಖರ್ಚಾಗಿದೆ ಎಂದು ಬಿಬಿಎಂಪಿ ಸಮರ್ಥಿಸಿಕೊಳ್ಳುತ್ತಿದೆ.

BBMP spent Rs 23 crore on road development for Narenra Modi Bengaluru visit

ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಹೇಳಿಕೆ

ಕೊಮ್ಮಘಟ್ಟಗೆ ಸಂಪರ್ಕ ಕಲ್ಪಿಸೋ ರಸ್ತೆ, ಹೆಬ್ಬಾಳ ಫ್ಲೈ ಓವರ್ ಸಂಪರ್ಕ ಕಲ್ಪಿಸೋ ರಸ್ತೆ, ಅಂಬೇಡ್ಕರ್ ಕಾಲೇಜಿಗೆ ಸಂಪರ್ಕ‌ ಕಲ್ಪಿಸೋ ರಸ್ತೆಗಳಿಗೆ ಡಾಂಬರ್ ಹಾಕಲಾಗಿದೆ. ಇಷ್ಟು ದಿನ ಕಣ್ಮುಚ್ಚಿ ಕೂತಿದ್ದ ಪಾಲಿಕೆ ಅಧಿಕಾರಿಗಳು, ಕೇವಲ ಪ್ರಧಾನಿ ಸಂಚಾರದ ರಸ್ತೆಗೆ ಮಾತ್ರ ಡಾಂಬರೀಕರಣ ಮಾಡಿ, ಉಳಿದ ಕಡೆ ಕನಿಷ್ಟ ರಸ್ತೆ ಗುಂಡಿಗಳನ್ನು ಕೂಡಾ ಮುಚ್ಚುವ ಕೆಲಸ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಂಚರಿಸಿದ್ದ ರಸ್ತೆಗಳನ್ನು ಡಾಂಬರೀಕರಣ ಮತ್ತು ಚರಂಡಿ ಸೇರಿದಂತೆ 23 ಕೋಟಿಯನ್ನು ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.

ಯಾವ ಯಾವ ರಸ್ತೆಗೆ ಎಷ್ಟೇಷ್ಟು ಖರ್ಚು..?

ಬಳ್ಳಾರಿ ರಸ್ತೆ 2.4 ಕಿ.ಲೋ.4.6 ಕೋಟಿ, ತುಮಕೂರು ರಸ್ತೆ 0.9 ಕಿ.ಮೀ ಗೆ 1.5 ಕೋಟಿ ವೆಚ್ಚ, ಬೆಂಗಳೂರು ವಿಶ್ವ ವಿದ್ಯಾಲಯ ರಸ್ತೆ 3.6 ಕಿ.ಮೀಟರ್ 6.05 ಕೋಟಿ ವೆಚ್ಚ ಮಾಡಲಾಗಿದೆ. ಮೈಸೂರು ರಸ್ತೆ 0.1.5 ಕಿ.ಮೀ 35 ಲಕ್ಷ, ಕೊಮ್ಮಘಟ್ಟ 7 ಕಿ.ಮೀ 11.5 ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ಒಟ್ಟಾರೆ 14 ಕಿ. ಮೀ ರಸ್ತೆಯನ್ನು ಅಭಿವೃದ್ದಿಯನ್ನು ಮಾಡಲಾಗಿದೆ.

BBMP spent Rs 23 crore on road development for Narenra Modi Bengaluru visit

ರಸ್ತೆಯ ಅಭಿವೃದ್ದಿಗೆ ಮೀಸಲಿಟ್ಟ ಹಣ ಮತ್ತು ಚರಂಡಿ, ರಸ್ತೆಗುಂಡಿ, ಮೀಡಿಯನ್ ಅಭಿವೃದ್ದಿಗೆ ಮೀಸಲಿಟ್ಟಿದ್ದ ಹಣವನ್ನ ಬಳಕೆ ಮಾಡಿ ರಸ್ತೆಯ ಅಭಿವೃದ್ದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+