Get Updates
Get notified of breaking news, exclusive insights, and must-see stories!

'ಆಲೂರು ವೆಂಕಟರಾವ್ ರಸ್ತೆಯ ಹೆಸರು ಬದಲಾಗಲ್ಲ'

ಚಾಮರಾಜಪೇಟೆ ಮೊದಲ ಮುಖ್ಯರಸ್ತೆಯ ಆಲೂರು ವೆಂಕಟರಾವ್ ಹೆಸರನ್ನು ಟಿಪ್ಪು ಸುಲ್ತಾನ್ ರಸ್ತೆ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಮೇಯರ್ ಜಿ ಪದ್ಮಾವತಿ ಅವರು ಕೈಬಿಟ್ಟಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು, ಫೆಬ್ರವರಿ 28: ಚಾಮರಾಜಪೇಟೆ ಮೊದಲ ಮುಖ್ಯರಸ್ತೆಯ ಆಲೂರು ವೆಂಕಟರಾವ್ ಹೆಸರನ್ನು ಟಿಪ್ಪು ಸುಲ್ತಾನ್ ರಸ್ತೆ ಎಂದು ಬದಲಾಯಿಸುವ ಮರು ನಾಮಕರಣ ಈ ಪ್ರಸ್ತಾವನೆಯನ್ನು ಮೇಯರ್ ಜಿ ಪದ್ಮಾವತಿ ಅವರು ಕೈಬಿಟ್ಟಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಹಿರಿಯ ಸಾಹಿತಿ ಚಿದಾನಂದ ಮೂರ್ತಿ ಅವರು ಹೆಸರು ಬದಲಾಯಿಸದಂತೆ ಮನವಿಯ ಮಾಡಿಕೊಂಡಿದ್ದರು. ನಂತರ ಪ್ರಸ್ತಾವನೆಯನ್ನು ಮೇಯರ್ ಜಿ ಪದ್ಮಾತಿ ಅವರು ಕೈ ಬಿಟ್ಟಿದ್ದು, "ಆಲೂರು ವೆಂಕಟ್ ರಾವ್" ರಸ್ತೆಯೆಂದೇ ಹೆಸರು ಮುಂದುವರೆಯಲಿದೆ.

ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರ ಹೆಸರನ್ನು ಬದಲಾಯಿಸಿ ಟಿಪ್ಪು ಸುಲ್ತಾನ್ ಹೆಸರಿಡಲು ಬಿಬಿಎಂಪಿ ಮುಂದಾಗಿತ್ತು. ಈ ಬಗ್ಗೆ 2015ರಿಂದಲೂ ಆಕ್ಷೇಪ ವ್ಯಕ್ತವಾಗುತ್ತಾ ಬಂದಿದೆ.

BBMP solves Alur Venkat road renaming controversy

ಸಾಹಿತಿ ಚಿದಾನಂದ ಮೂರ್ತಿ, ಕನ್ನಡ ಪರ ಸಂಘಟನೆಗಳ ಒಕ್ಕೂಟ, ವೆಂಕಟರಾಯರ ರಾಷ್ಟ್ರೀಯ ಸ್ಮಾರಕ, ಉತ್ತಿಷ್ಠ ಭಾರತ, ಕರ್ನಾಟಕ ಬಿಜೆಪಿ, ವಿಶ್ವ ಚೇತನ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿರೋಧ ವ್ಯಕ್ತವಾಗಿತ್ತು.


ರಸ್ತೆ ಎಲ್ಲಿದೆ?: ಚಾಮರಾಜಪೇಟೆ ಒಂದೇ ಮುಖ್ಯರಸ್ತೆ ಇದಾಗಿದ್ದು, ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ಮೈಸೂರು ರಸ್ತೆ ಕಡೆಗೆ ಸಂಪರ್ಕ ಒದಗಿಸುತ್ತದೆ. ಬಿಬಿಎಂಪಿ ವಾರ್ಡ್ 119, 139 ಹಾಗೂ 140ರ ವ್ಯಾಪ್ತಿಗೆ ಬರುತ್ತದೆ.

ನಾಗರೀಕರೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಹೀಗೆ:

ಸನ್ಮಾನ್ಯ ಮಹಾಪೌರರೆ,
ಬೆಂಗಳೂರಿನಲ್ಲಿ ಅದೆಷ್ಟೋ ರಸ್ತೆಗಳು ಇಂದಿಗೂ ಬ್ರಿಟಿಷ್ ಅಧಿಕಾರಿಗಳ ಹೆಸರಿನಲ್ಲಿವೆ. ನಮ್ಮ ದೇಶವನ್ನು ಲೂಟಿ ಹೊಡೆದ ಅವರ ಹೆಸರುಗಳನ್ನು ಕಿತ್ತು ಹಾಕಿ ಒಂದು ರಸ್ತೆಗೆ ಬೇಕಾದರೆ ಟಿಪ್ಪು ಸುಲ್ತಾನ್ ಹೆಸರಿಡಿ. ಕರ್ನಾಟಕ ಏಕೀಕರಣದ ಶಿಲ್ಪಿ ಆಲೂರು ವೆಂಕಟರಾವ್ ರಸ್ತೆಯ ಹೆಸರನ್ನು ಮಾತ್ರ ಬಡಲಾಯಿಸಬೇಡಿ, ಆ ಹಿರಿಯ ಆತ್ಮ ನೊಂದು ಕಣ್ಣೀರಿಟ್ಟೀತು!! ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನೀವು ಅದೇ ಬೆಂಗಳೂರಿನ ಇತಿಹಾಸಕ್ಕೆ ಅಪಚಾರ ಮಾಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ದಯವಿಟ್ಟು ಬೆಂಗಳೂರಿನ ಮತದಾರರ ವಿಶ್ವಾಸ ಉಳಿಸಿಕೊಳ್ಳಿ.- ಹೊಳೆನರಸೀಪುರ ಮಂಜುನಾಥ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+