ಬೆಂಗಳೂರು : ಕಾಮಾಕ್ಯ, ಇಟ್ಟಮಡು ಜಂಕ್ಷನ್ ನಡುವೆ ಫ್ಲೈ ಓವರ್

ಬೆಂಗಳೂರು, ಜೂನ್ 20 : ಬೆಂಗಳೂರಿನಲ್ಲಿ ಮತ್ತೊಂದು ಫ್ಲೈ ಓವರ್ ನಿರ್ಮಾಣ ಮಾಡಲು ಬಿಬಿಎಂಪಿ ಪ್ರಸ್ತಾವನೆ ಸಿದ್ಧಪಡಿಸಿದೆ. ಈ ಯೋಜನೆಗೆ ಅನುಮತಿ ಸಿಕ್ಕರೆ ಮೈಸೂರು ರಿಂಗ್ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ತುಸು ನೆಮ್ಮದಿ ಸಿಗಲಿದೆ.

ನಗರದ ಕಾಮಾಕ್ಯ ಚಿತ್ರಮಂದಿರ-ಇಟ್ಟಮಡು ಜಂಕ್ಷನ್ ನಡುವೆ ಫ್ಲೈ ಓವರ್ ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದೆ. ಸದಾ ವಾಹನದಿಂದ ತುಂಬಿರುವ ಈ ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ.

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗೆ ಸುಮಾರು 125 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕಾಮಾಕ್ಯ, ಕತ್ರಿಗುಪ್ಪೆ ಮತ್ತು ಇಟ್ಟಮಡು ಮೂರು ಹೆಚ್ಚು ವಾಹನ ಸಂಚಾರ ದಟ್ಟಣೆ ಇರುವ ಸಿಗ್ನಲ್‌ಗಳಾಗಿವೆ.

BBMP propose flyover between Kamakhya theatre and Ittamadu junction

ನಾಯುಂಡಹಳ್ಳಿ ಬಳಿಯ ಮೈಸೂರು ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ಸಿಗ್ನಲ್ ಮುಕ್ತ ರಸ್ತೆ ನಿರ್ಮಿಸುವ ಯೋಜನೆಯಡಿ ಈ ಫ್ಲೈ ಓವರ್ ನಿರ್ಮಾಣವಾಗಲಿದೆ. ಕಾಮಾಕ್ಯದಿಂದ-ಇಟ್ಟಮಡು ಜಂಕ್ಷನ್‌ ವರೆಗಿನ ರಸ್ತೆಯಲ್ಲಿ ಗಂಟೆಗೆ 15 ಸಾವಿರ ಕಾರುಗಳು ಸಂಚಾರ ನಡೆಸುತ್ತವೆ.

ಬಿಬಿಎಂಪಿ ಮೊದಲು ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ 17.82 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿತ್ತು. ಆದರೆ, ಈಗ ಕಾಮಾಕ್ಯದಿಂದ ಇಟ್ಟಮಡು ಜಂಕ್ಷನ್ ತನಕ ಫ್ಲೈ ಓವರ್ ನಿರ್ಮಾಣ ಮಾಡುವುದರಿಂದ ಆ ಯೋಜನೆ ಕೈ ಬಿಡಲಾಗಿದೆ.

ಈ ರಿಂಗ್ ರಸ್ತೆಯಲ್ಲಿ ಈಗಾಗಲೇ ದೇವೇಗೌಡ ಪೆಟ್ರೋಲ್ ಬಂಕ್ ಮತ್ತು ಪಿಇಎಸ್ ಕಾಲೇಜು ಬಳಿ ಫ್ಲೈ ಓವರ್ ನಿರ್ಮಾಣವಾಗಿದೆ. ಜನತಾ ಬಜಾರ್‌ ಬಳಿ ಅಂಡರ್ ಪಾಸ್ ಕೆಲಸ ನಡೆಯುತ್ತಿದೆ. ಈಗ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಆರಂಭವಾದರೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+