ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಅಶೋಕ ಪಿಲ್ಲರ್ ಮೇಲಿನ ರಾಷ್ಟ್ರೀಯ ಲಾಂಛನ ಬದಲಾವಣೆ?

|
Google Oneindia Kannada News

ಬೆಂಗಳೂರು, ಜುಲೈ 29: ಪ್ರಧಾನಿ ಮೋದಿಯವರು ನೂತನ ಸಂಸತ್‌ ಭವನದ ಮೇಲೆ ಅಲ್ಪ ಬದಲಾಯಿಸಲ್ಪಟ್ಟ ರಾಷ್ಟ್ರೀಯ ಲಾಂಛನವನ್ನು ಅನಾವರಣ ಮಾಡಿದ್ದರು. ಕೇಂದ್ರ ಸರ್ಕಾರದ ಹೊಸ ಲಾಂಛನ ಈಗ ನಮ್ಮ ಸಿಲಿಕಾನ್ ಸಿಟಿಯಲ್ಲಿ ಬದಲಾವಣೆಯಲ್ಲೂ ಕಾಣಲು ಸಜ್ಜಾಗುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಜಯನಗರದಲ್ಲಿರುವ ಅಶೋಕ ಪಲ್ಲರ್ ಮೇಲಿರುವ ರಾಷ್ಟ್ರಲಾಂಛನವನ್ನು ಬದಲಾಯಿಸಲು ಬಿಬಿಎಂಪಿ ಸನ್ನದ್ಧವಾಗಿದೆ.

ನಮ್ಮ ದೇಶದ ರಾಷ್ಟ್ರೀಯ ಲಾಂಛನ ಎಂದರೆ ನಾಲ್ಕು ದಿಕ್ಕಿಗೂ ಮುಖವನ್ನು ಹೊಂದಿರುವ ಸಿಂಹವಾಗಿದೆ. ಅಶೋಕ ಸ್ಥಾಪಿಸಿದ್ದ ಲಾಂಛನವನ್ನು ಭಾರತ ದೇಶ ಸ್ವಾತಂತ್ರ್ಯವನ್ನು ಪಡೆದ ಬಳಿಕ ಅಧಿಕೃವಾಗಿ ನಾಲ್ಕು ಮುಖವುಳ್ಳ ಸಿಂಹವನ್ನು ರಾಷ್ಟ್ರೀಯ ಲಾಂಛನವನ್ನಾಗಿ ಕೇಂದ್ರ ಸರ್ಕಾರ ಘೋಷಣೆಯನ್ನು ಮಾಡಿತ್ತು. ಈಗಲೂ ರಾಷ್ಟ್ರ ಲಾಂಚನ ಸಿಂಹವಾಗಿದ್ದರು ಸಿಂಹ ಸ್ವರೂಪದಲ್ಲಿ ಬದಲಾವಣೆಯಾಗಿದೆ.

ನೂತನ ಸಂಸತ್ ಭವನದ ಮೇಲೆ ಸ್ಥಾಪಿತವಾಗಿರುವ ರಾಷ್ಟ್ರೀಯ ಲಾಂಛನದಲ್ಲಿ ಸಿಂಹ ಘರ್ಜಿಸುವ ಮುಖಚಹರೆಯನ್ನು ಹೊಂದಿದೆ. ಆದರೆ ಅಶೋಕ ಲಾಂಛನವನ್ನು ಸ್ವೀಕರಿದ್ದ ಭಾರತದ ಹಳೇಯ ಸಂಸತ್ ನ ಮೇಲೆ ಸೌಮ್ಯಾ ಸ್ವಾಭಾವದ ಸಿಂಹದ ಲಾಂಛನವಿತ್ತು. ಸಿಂಹ ಮುಖ ಚಹರೆಯನ್ನು ಬದಲಾಯಿಸಿದ್ದಕ್ಕೆ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ದ ವಾದ ಪ್ರತಿವಾದ, ಟೀಕೆಗಳು ವ್ಯಕ್ತವಾಗಿದ್ದವು. ಇದರ ನಡುವೆ ಬಿಬಿಎಂಪಿ ಅಶೋಕ ಸ್ಥಂಭದಲ್ಲಿನ ಸಿಂಹದ ಮುಖವನ್ನು ಬದಲಾವಣೆ ಮಾಡುತ್ತಿರುವುದು ವಿವಾದಕ್ಕೆ ಆಸ್ಪದವಾಗುತ್ತಿದೆ.

ಅಶೋಕ ಪಿಲ್ಲರ್ ಲಾಂಛನ ಬದಲಾವಣೆಗೆ ಬಿಬಿಎಂಪಿ ಚಿಂತನೆ

ಅಶೋಕ ಪಿಲ್ಲರ್ ಲಾಂಛನ ಬದಲಾವಣೆಗೆ ಬಿಬಿಎಂಪಿ ಚಿಂತನೆ

ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನದಲ್ಲಿ ಕೇಂದ್ರ ಸರ್ಕಾರದ ಬದಲಾವಣೆ ವಿಚಾರ ಈಗ ಬೆಂಗಳೂರಿಗೂ ತಟ್ಟಿದೆ, ಈ ಮೊದಲು ರಾಷ್ಟ್ರ ಲಾಂಛನದಲ್ಲಿ ಸಿಂಹದ ಸೌಮ್ಯ ಸ್ವಭಾವದ ಮಾದರಿಯಲ್ಲಿತ್ತು. ಈಗ ಕೇಂದ್ರ ಸರ್ಕಾರ ಸಿಂಹ ಘರ್ಜಿಸುವ ರೀತಿಯಲ್ಲಿ ಬದಲಾಯಿಸಿ ಲೋಕಾರ್ಪಣೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಇರೋ ರಾಷ್ಟ್ರಲಾಂಛನದಲ್ಲಿರುವ ಸಿಂಹಗಳ ಮುಖಛರ್ಯೆ ಬದಲಾವಣೆಗೆ ಬಿಬಿಎಂಪಿ ಸಿದ್ದತೆ ಕೈಗೋಳ್ತಿದೆ.

48 ಆಗಸ್ಟ್ 20 ರಂದು ಅಶೋಕ ಪಿಲ್ಲರ್ ಸ್ಥಾಪನೆ

48 ಆಗಸ್ಟ್ 20 ರಂದು ಅಶೋಕ ಪಿಲ್ಲರ್ ಸ್ಥಾಪನೆ

ಬೆಂಗಳೂರಿನ ಜಯನಗರದ ಅಶೋಕ ಪಿಲ್ಲರ್ ನಲ್ಲಿರುವ ರಾಷ್ಟ್ರ ಲಾಂಛನವನ್ನು ಮೈಸೂರು ಸಂಸ್ಥಾನದ ಮಹಾರಾಜ ಜಯ ಚಾಮರಾಜ ಒಡೆಯರ್ ಬಹದ್ದೂರ್ 1948 ಆಗಸ್ಟ್ 20 ರಂದು ಅಶೋಕ ಪಿಲ್ಲರ್ ಮೇಲೆ ರಾಷ್ಟ್ರ ಲಾಂಛನ ಸ್ಥಾಪನೆ ಮಾಡಿದ್ದರು. ಸ್ವಾತಂತ್ರ್ಯ ಸಿಕ್ಕ ಮರುವರ್ಷವೇ ಮೈಸೂರು ಸಂಸ್ಥಾನದಿಂದ ಜಯನಗರದಲ್ಲಿ ಈ ಪಿಲ್ಲರ್ ಸ್ಥಾಪಿಸಿದ್ದರು, ಇದೀಗ ಬರೋಬ್ಬರಿ 71 ವರ್ಷಗಳ ಬಳಿಕ ಅಶೋಕ ಸ್ಥಂಭದ ಮೇಲಿನ ರಾಷ್ಟ್ರ ಲಾಂಛನದಲ್ಲಿ ಬದಲಾವಣೆ ಮಾಡೋದಕ್ಕೆ ಬಿಬಿಎಂಪಿ ಒಳಗೊಳಗೆ ಸಿದ್ದತೆ ನಡೆಸುತ್ತಿದೆ, ಸದ್ಯ ಗಂಭೀರ ಮುಖಭಾವವಿದ್ದ ಅಶೋಕಸ್ತಂಭದ ಸಿಂಹಗಳ ಮುಖವನ್ನೂ ಬದಲಾಯಿಸಿ ಸಿಂಹಗಳು ಬಾಯ್ದೆರದು ಕೋರೆಹಲ್ಲುಗಳನ್ನು ಪ್ರದರ್ಶಿಸುವ (ಘರ್ಜಿಸುವ) ರಾಷ್ಟ್ರಲಾಂಛನ ನಿರ್ಮಾಣ ಮೊಡೋದಕ್ಕೆ ಮುಂದಾಗಿದೆ, ಈ ಬಗ್ಗೆ ಬಿಬಿಎಂಪಿ ಆಯುಕ್ತರನ್ನ ಕೇಳಿದರೇ "ಅಯ್ಯೋ ನಮ್ಮಗೆ ಇನ್ನೂ ಆದೇಶ ಬಂದಿಲ್ಲ, ಆದೇಶ ಬಂದನಂತರ ಎಲ್ಲಾ ರಾಜ್ಯಗಳಲ್ಲೂ ಬದಲಾಯಿಸಿದ ಹಾಗೆ ನಾವು ಕೂಡ ಬದಲಾಯಿಸ್ತಿವಿ" ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬಿಬಿಎಂಪಿ ರಾಷ್ಟ್ರಲಾಂಛನ ಬದಲಿಸದಂತೆ ಆಗ್ರಹ

ಬಿಬಿಎಂಪಿ ರಾಷ್ಟ್ರಲಾಂಛನ ಬದಲಿಸದಂತೆ ಆಗ್ರಹ

ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನದಲ್ಲಿ ಕೇಂದ್ರ ಸರ್ಕಾರದ ಬದಲಾವಣೆ ವಿಚಾರವಾಗಿ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಬಿಜೆಪಿ ಸರ್ಕಾರ ಹಿಟ್ಲರ್ ರೀತಿಯಲ್ಲಿ ಕಾನೂನು ತರ್ತಿದೆ ಎಂದು ವಾಗ್ದಾಳಿ ನಡೆಸಿದ್ದವು. ಇದೀಗ "ಬಿಬಿಎಂಪಿ ಸಹ ಗುಪ್ತ್ ಗುಪ್ತ್ ಆಗಿ ಅಶೋಕ ಪಿಲ್ಲರ್ ಮೇಲಿರುವ ಲಾಂಛನದ ಸಿಂಹಗಳ ಮುಖಛರ್ಯೆ ಬದಲಿಸಲು ಹೊರಟಿದೆ. ಹಳೇಯ ಮತ್ತು ಪಾರಂಪರಿಕ ಕಟ್ಟಡಗಳು, ಪಿಲ್ಲರ್ ಗಳನ್ನು ಕೆಡವಿ ತಮಗೆ ಇಷ್ಟವಾದ ಬದಲಾವಣೆ ಮಾಡ್ತಿದೆ" ಅಂತ ಬಿಬಿಎಂಪಿ ಕಾಂಗ್ರೆಸ್ ನಾಯಕ ಅಬ್ದುಲ್ ವಾಜೀದ್ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಕೇಂದ್ರ ಸರ್ಕಾರ ಆದೇಶಿಸಿದರೇ ಬದಲಾವಣೆ ಅನಿವಾರ್‍ಯ

ಕೇಂದ್ರ ಸರ್ಕಾರ ಆದೇಶಿಸಿದರೇ ಬದಲಾವಣೆ ಅನಿವಾರ್‍ಯ

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಲಾಂಛನವನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿರುವಂತೆಯೇ ಘರ್ಜಿಸುವ ರೀತಿಯಲ್ಲಿರುವ ಸಿಂಹವನ್ನು ಅಳವಡಿಸಲು ಸೂಚಿಸಿದರೇ ರಾಜ್ಯಗಳು ಅಂಗೀಕರಿಸಬೇಕಾಗುತ್ತದೆ. ಆದ ವಿಧಾನ ಸೌಧವೂ ಸೇರಿದಂತೆ ರಾಜ್ಯದಲ್ಲಿ ರಾಷ್ಟ್ರೀಯ ಲಾಂಛನದ ಬದಲಾದ ಸ್ವರೂಪದಲ್ಲಿನ ಘರ್ಜಿಸುವ ನಾಲ್ಕು ಮುಖದ ಸಿಂಹವನ್ನು ಪ್ರತಿಷ್ಠಾಪಿಸಬೇಕಾಗುತ್ತದೆ. ಇನ್ನು ನಮ್ಮ ಬೆಂಗಳೂರಿನಲ್ಲಿಯೂ ಬಿಬಿಎಂಪಿ ಕೂಡ ಒಳಗೊಳಗೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಆ ಮೂಲಕ ರಾಷ್ಟ್ರ ಲಾಂಛನದ ಸ್ವರೂಪ ಬದಲಾಗಿ ಪಾರಂಪರಿಕ ಕಟ್ಟಡ ಮೇಲೂ ರಾರಾಜಿಸಲಿದೆ.

Recommended Video

ರಾಜ್ಯದಲ್ಲಿರೋದು ನಿರ್ವೀರ್ಯ ಸರ್ಕಾರ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಕ್ರವರ್ತಿ ಸೂಲಿಬೆಲೆ ತರಾಟೆ | OneIndia Kannada

English summary
Prime Minister Modi unveiled a slightly changed National emblem on the new Parliament House. The new logo of the central government is now gearing up to see a change in our Silicon City. BBMP is all set to change the National emblem on top of Ashoka Pillar in Jayanagar, a prestigious area of ​​Bengaluru,know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X