ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಅವರೆ ಮೇಳದ ಬಗ್ಗೆ ಮೇಯರ್ ಏನಂದ್ರು?

|
Google Oneindia Kannada News

ಬೆಂಗಳೂರು, ಜನವರಿ 10: ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ವಿವಿ ಪುರಂನ ಅವರೆ ಮೇಳಕ್ಕೆ (ಅವರೆಕಾಯಿ ಮೇಳ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮತಿ ನೀಡುವುದಿಲ್ಲ ಎಂಬ ಚರ್ಚೆಗೆ ತೆರೆ ಬಿದ್ದಿದೆ.

ಈ ಕುರಿತು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದು, "ಅವರೆ ಮೇಳಕ್ಕೆ ಬಿಬಿಎಂಪಿ ಅನುಮತಿ ನೀಡಲಿದೆ' ಎಂದು ತಿಳಿಸಿದ್ದಾರೆ. ಕಡಲೆಕಾಯಿ ಪರಿಷೆ ಹಾಗೂ ಅವರೆ ಮೇಳ ಬೆಂಗಳೂರು ಸಂಸ್ಕೃತಿಯ ಅವಿಭಾಜ್ಯ ಅಂಗ. ಆದರೆ, ಅವರೆ ಮೇಳದಿಂದ ಕಸದ ಸಮಸ್ಯೆ ಆಗುತ್ತೆ. ಅನುಮತಿ ನೀಡುವುದು ಬೇಡ ಎಂದು ಕೆಲವರು ಪಾಲಿಕೆಯಲ್ಲಿ ಚರ್ಚೆ ನಡೆಸಿದ್ದರು. ಇದಕ್ಕೆ ನಾನು ಬೆಂಬಲ ಸೂಚಿಸಿಲ್ಲ. ಅವರೆ ಮೇಳ ನಡೆಯುತ್ತದೆ' ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಪ್ರಸಿದ್ಧ ಅವರೆ ಬೇಳೆ ಮೇಳಕ್ಕೆ ಬಿಬಿಎಂಪಿ ಅಡ್ಡಗಾಲುಬೆಂಗಳೂರಿನ ಪ್ರಸಿದ್ಧ ಅವರೆ ಬೇಳೆ ಮೇಳಕ್ಕೆ ಬಿಬಿಎಂಪಿ ಅಡ್ಡಗಾಲು

ಎಲ್ಲರ ಬಾಯಲ್ಲಿ ನೀರೂರಿಸುವ ಅವರೆ ಬೇಳೆಯಿಂದ ತಯಾರಿಸಿರುವ ಪದಾರ್ಥಗಳು ಈ ಮೇಳದಲ್ಲಿ ಲಭ್ಯವಿರುತ್ತವೆ. ವಾಸವಿ ಕಾಂಡಿಮೆಂಟ್ಸ್ ಪ್ರತಿ ವರ್ಷ ಈ ಮೇಳವನ್ನು ಆಯೋಜಿಸುತ್ತಿತ್ತು. ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಅವರೆ ಕಾಯಿ ಮೇಳವನ್ನು ವಾಸವಿ ಕಾಂಡಿಮೆಟ್ಸ್ ಏರ್ಪಡಿಸಿಕೊಂಡು ಬರುತ್ತದೆ. ಆದರೆ, ಈ ವರ್ಷ ಸ್ವಚ್ಛತೆಯ ಕಾರಣವೊಡ್ಡಿ ಮೇಳ ನಡೆಸಲು ಬಿಬಿಎಂಪಿ ಅನುಮತಿ ನೀಡುವುದಿಲ್ಲ ಎಂಬ ಊಹಾಪೋಹಗಳು ಎದ್ದಿದ್ದವು.

BBMP Permission Clears To Bengaluru Avare Mela

ಮೇಳವನ್ನು ರಸ್ತೆ ಬದಿ ನಡೆಸುವಾಗ ಸ್ವಚ್ಛತೆಯಿರುವುದಿಲ್ಲ. ಅಲ್ಲದೆ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಈ ವರ್ಷ ಮೇಳಕ್ಕೆ ಅನುಮತಿಯಿಲ್ಲ ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ವಾಸವಿ ಕಾಂಡಿಮೆಟ್ಸ್ ಗೆ ಕಳುಹಿಸಿದ ನೊಟಿಸ್‌ ನಲ್ಲಿ ತಿಳಿಸಿತ್ತು.

English summary
BBMP Permission Clears To Bengaluru Avare Mela. Mayor M Goutham Kumar Posted a Message in facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X