• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೆಕ್ಕಿಗೆ ಸ್ಮಾರ್ಟ್ ಟೆಕ್ನಿಕ್ ಮೂಲಕ ಬಿಸಿ ಮುಟ್ಟಿಸಿದ ಬಿಬಿಎಂಪಿ ಅಧಿಕಾರಿಗಳು!

|

ಬೆಂಗಳೂರು, ಮೇ 16: ಕೆಲವರು ಚಾಪೆ ಕೆಳಗೆ ತೂರುವ ಜಾಣತನ ತೋರಿಸಿದರೆ, ಇನ್ನೂ ಕೆಲವರು ರಂಗೋಲಿ ಕೆಳಗೆ ತೂರುವ ಚಾಕಚಕ್ಯತೆಯನ್ನು ತೋರಿಸುತ್ತಾರೆ. ಇಂತಹದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

   ಸರ್ಕಾರ ಹೇಳೋತನಕ ಖಾಸಗಿ ಶಾಲೆಯವರು ಫೀಸ್ ಕೇಳುವಂತಿಲ್ಲ | Suresh Kumar

   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಹರಸಾಹಸ ಪಡುತ್ತದೆ. ಆದರೆ, ಕೆಲವರು ಬೇಕಾಬಿಟ್ಟಿಯಾಗಿ ರಸ್ತೆಯಲ್ಲೆಲ್ಲಾ ಕಸ ಎಸೆದು ನಗರದ ಸೌಂದರ್ಯ ಹಾಳು ಮಾಡುತ್ತಾರೆ.

   ಕೊರೊನಾ ಸಂಕಷ್ಟ: ಬಿಬಿಎಂಪಿ ಬಜೆಟ್ ಅನುದಾನ ಕಡಿತ ಮಾಡಿದ ಸರ್ಕಾರ!

   ಹೀಗೆ ನಗರದ ಟೆಕ್ಕಿಯೊಬ್ಬ ಯಾರೂ ಇಲ್ಲದ ಹೊತ್ತಲ್ಲಿ ಸಾರ್ವಜನಿಕ ಜಾಗೆಯಲ್ಲಿ ದಂಡಿ ದಂಡಿಯಾಗಿ ಕಸ ಸುರಿದು ಪರಾರಿಯಾಗಿದ್ದ. ಹೀಗೆ ಕಸ ಸುರಿಯುವುದು ತಪ್ಪು ಹಾಗೂ ಭಾರೀ ದಂಡ ತೆರಬೇಕಾಗುತ್ತದೆ ಎಂದು ಗೊತ್ತಿದ್ದರೂ ಟೆಕ್ಕಿ ಈ ಕೆಲಸ ಮಾಡಿದ್ದ. ಇದರಿಂದ ಕುಪಿತಗೊಂಡಿದ್ದ ಬಿಬಿಎಂಪಿ ತ್ಯಾಜ್ಯ ಘಟಕದ ಅಧಿಕಾರಿಗಳು ಟೆಕ್ಕಿಯನ್ನು ಸ್ಮಾರ್ಟ್ ಟೆಕ್ನಿಕ್ ಬಳಸಿ ಹಿಡಿದು ಬರೋಬ್ಬರಿ ದಂಡ ವಿಧಿಸಿದ್ದಾರೆ.

   ಬ್ಲಾಕ್ ಸ್ಪಾಟ್ ಆಗಲು ಕಾರಣವಾಗಿತ್ತು

   ಬ್ಲಾಕ್ ಸ್ಪಾಟ್ ಆಗಲು ಕಾರಣವಾಗಿತ್ತು

   ನಗರದ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಟೆಕ್ಕಿಯೊಬ್ಬರು ಕಳೆದ ರಾತ್ರಿ ಸಾರ್ವಜನಿಕ ರಸ್ತೆಯಲ್ಲಿ ಕಸ ಎಸೆದು ಹೋಗಿದ್ದರು. ಇದು ಬ್ಲಾಕ್ ಸ್ಪಾಟ್ ಆಗಲು ಕಾರಣವಾಗಿತ್ತು. ಟೆಕ್ಕಿ ಒಣ ಕಸ, ಹಸಿ ಕಸ, ಕೆಲವು ಪ್ಲಾಸ್ಟಿಕ್ ನ್ನು ದೊಡ್ಡ ಪ್ರಮಾಣದಲ್ಲಿ ಎಸೆದು ಹೋಗಿದ್ದರು.

   ತ್ಯಾಜ್ಯ ವಿಲೇವಾರಿ ಟಾಸ್ಕ್ ಪೋರ್ಸ್ ತಂಡ

   ತ್ಯಾಜ್ಯ ವಿಲೇವಾರಿ ಟಾಸ್ಕ್ ಪೋರ್ಸ್ ತಂಡ

   ಸ್ಥಳಕ್ಕೆ ಬಂದಿದ್ದ ತ್ಯಾಜ್ಯ ವಿಲೇವಾರಿ ಘಟಕದವರು, ತ್ಯಾಜ್ಯ ವಿಲೇವಾರಿ ಆಗಿಲ್ಲ ಎಂದು ತ್ಯಾಜ್ಯ ವಿಲೇವಾರಿ ಟಾಸ್ಕ್ ಪೋರ್ಸ್ ತಂಡ, ಬಿಬಿಎಂಪಿ ಹೆಲ್ತ್ ಇನ್ಸಪೆಕ್ಟರ್‌ಗಳಾದ ಸತ್ಯ ವಾಣಿ ಹಾಗೂ ಆರೋಗ್ಯ ಮೇಲ್ವಿಚಾರಕ ಅನಿಲ್ ಬೆಣ್ಣಿ ಅವರಿಗೆ ದೂರು ನೀಡಿತ್ತು. ಸ್ಥಳಕ್ಕೆ ಬಂದ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕಸ ಎಸೆದವರಿಗೆ ಬುದ್ದಿ ಕಲಿಸಲು ನಿರ್ಧರಿಸಿದ್ದರು.

   ಕಸ ಆಯುವವರು ಬಂದಾಗ ಕಸ ನೀಡಲು ಆಗುವುದಿಲ್ಲ

   ಕಸ ಆಯುವವರು ಬಂದಾಗ ಕಸ ನೀಡಲು ಆಗುವುದಿಲ್ಲ

   ''ನಾನು ಸಾಪ್ಟವೇರ್ ಕಂಪೆನಿಯೊಂದರ ಉದ್ಯೋಗಿ. ನಾನು ಸಂಜೆ 6 ರಿಂದ ರಾತ್ರಿ 3 ರವೆರೆಗೆ ಕೆಲಸ ಮಾಡಬೇಕು. ಹೀಗಾಗಿ ನನಗೆ ಕಸ ಆಯುವವರು ಬಂದಾಗ ಕಸ ನೀಡಲು ಆಗುವುದಿಲ್ಲ. ಇನ್ಮುಂದೆ ಸಾರ್ವಜನಿಕ ಜಾಗದಲ್ಲಿ ಕಸ ಎಸೆಯುವುದಿಲ್ಲ'' ಎಂದು ಟೆಕ್ಕಿ ಹೇಳಿದ್ದಾನೆ. ಒಟ್ಟಿನಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರನ್ನು ಬಿಬಿಎಂಪಿ ಅಧಿಕಾರಿಗಳು ಸುಮ್ಮನೆ ಬಿಡುವುದಿಲ್ಲ ಎಂಬುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ. (ಮೂಲ: ಬೆಂಗಳೂರು ಮಿರರ್).

   English summary
   BBMP Officers Fined Huge Amout To A Techie Using Smart Thinking. a techie dump very much garbage near his residence. through a hotel bill ditected techie at HSR Layout Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X