ಕೋಟಿ ಕೋಟಿ ಗ್ರಂಥಾಲಯ ಕರ ಪಾವತಿ ಯಾವಾಗ? ಕ್ರಮಕ್ಕೆ ಆಗ್ರಹ ಬಳಿಕ ಸಿಕ್ತು ಉತ್ತರ
ಬೆಂಗಳೂರು, ಜನವರಿ 22: ಬೆಂಗಳೂರು ವ್ಯಾಪ್ತಿಯಲ್ಲಿ ಗ್ರಂಥಾಲಯ ಕರ (ಸೆಸ್) ರೂಪದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಂಗ್ರಹಿಸಿರುವ ಕೋಟ್ಯಂತರ ರೂಪಾಯಿ ಹಣವನ್ನು ಸಂಬಂಧಿಸಿದ ಇಲಾಖೆಗೆ ನೀಡಿಲ್ಲ. ಹೀಗಾಗಿ ಪಾಲಿಕೆ ಆಯುಕ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬಂದಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಬೆಂಗಳೂರಿನ ನಾಗರಿಕ ಸಂಸ್ಥೆಯಿಂದ ಒಟ್ಟು 397 ಕೋಟಿ ರೂಪಾಯಿ ಬಿಡುಗಡೆ ಆಗಬೇಕು. ಇಲಾಖೆಗೆ ಬಾಕಿ ಹಣ ಪಾವತಿಸದ ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕಾಂಗ ಸಮಿತಿ ಆಗ್ರಹಿಸಿದೆ.

ಸಚಿವರಿಂದ ಕರ ಬಿಡುಗಡೆ ಭರವಸೆ
ಇದರ ಬೆನ್ನಲ್ಲೆ ಗ್ರಂಥಾಲಯಕ್ಕೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸಲು ಖಚಿತಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ಭರವಸೆ ಪತ್ರವು ನೀಡಿದ್ದರು. ಬಾಕಿ ಹಣ ಪಾವತಿಗೆ ಸಂಬಂಧಸಿದಂತೆ ಈ ಪತ್ರದಲ್ಲಿ, ಬಿಬಿಎಂಪಿಯು 14 ಮುಖ್ಯ ಆಯುಕ್ತರ ಹೆಸರುಗಳನ್ನು ತಿಳಿಸಿದೆ.
ಬಿಬಿಎಂಪಿ ಈ ಹಿಂದೆ ಉನ್ನತ ಹುದ್ದೆ ಹೊಂದಿದ ಡಾ ಎಸ್ ಸುಬ್ರಹ್ಮಣ್ಯ ಅವರಿಂದ ನಂತರದ ಗೌರವ್ ಗುಪ್ತಾ ಅವರು ಆಯುಕ್ತರಾಗಿದ್ದ ಅವಧಿಯ ವರೆಗೆ ಬಿಬಿಎಂಪಿಯಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಗ್ರಂಥಾಲಯ ಕರ ಹಣ ಬಿಡುಗಡೆ ಮಾಡಿಲ್ಲ.

ಬ್ಯಾಂಕ್ ಖಾತೆ ತೆರೆದು ಬಾಕಿ ಹಣ ಪಾವತಿ
ಮುಂದಿನ ನಾಲ್ಕು ಆರ್ಥಿಕ ವರ್ಷಗಳಲ್ಲಿ 397.37 ಕೋಟಿ ರೂಪಾಯಿ ತೆರಿಗೆ ಹಣವನ್ನು ಹಂತ ಹಂತವಾಗಿ ಗ್ರಂಥಾಲಯ ಇಲಾಖೆಗೆ ಬಿಡುಗಡೆ ಮಾಡಲಾಗುವುದು ಎಂದು ನಾಗರಿಕ ಸಂಸ್ಥೆ ಭರವಸೆ ನೀಡಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದ್ದು, ನಾಲ್ಕು ಭಾಗಗಳಲ್ಲಿ ಪಾವತಿ ಮಾಡಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸದ್ಯ ನಗರ ವ್ಯಾಪ್ತಿಯಲ್ಲಿನ ಗುತ್ತಿಗೆದಾರರಿಗೆ ಬಿಲ್ ಪಾವತಿ, ಸಾಲಗಳನ್ನು ತೆರವುಗೊಳಿಸುವುದು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ಹಾಗೂ ಇನ್ನಿತರ ಕಾರಣಗಳಿಂದ ಗ್ರಂಥಾಲಯದ ತೆರಿಗೆ ಹಣವನ್ನು ಇಲಾಖೆಗೆ ನೀಡುವಲ್ಲಿ ವಿಳಂಬವಾಗಿದೆ ಎಂದು ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಒಟ್ಟು ಆಸ್ತಿ ತೆರಿಗೆಯಲ್ಲಿ ಶೇಕಡಾ 6ರಷ್ಟು ಗ್ರಂಥಾಲಯ ಇಲಾಖೆಗೆ ಗ್ರಂಥಾಲಯ ಕರ ಆಗಿ ಮೀಸಲಿಡಲಾಗುತ್ತಿದೆ. ಗ್ರಂಥಾಲಯ ಇಲಾಖೆ ವ್ಯಾಪ್ತಿಯಲ್ಲಿ ಸರ್ಕಾರದ ನೀಡುವ ಹಣ ವರ್ಷಗಳಿಂದಲೂ ಬಾಕಿ ಉಳಿದಿದೆ. ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಇದೀಗ ನಾಲ್ಕು ವರ್ಷಗಳಲ್ಲಿ ಬಾಕಿ ಹಣ ನೀಡುವುದಾಗಿ ಭರವಸೆ ನೀಡಿದೆ.












Click it and Unblock the Notifications