• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೋಂ ಕ್ವಾರಂಟೈನ್‌ ಉಲ್ಲಂಘನೆ; ಬಿಬಿಎಂಪಿಯಿಂದ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಜೂನ್ 08 : ಬೆಂಗಳೂರು ನಗರದಲ್ಲಿ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದರೆ ಸರ್ಕಾರಿ ಕ್ವಾರಂಟೈನ್‌ಗೆ ಹಾಕಲಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕಣ್ಣಿಡಲು ಬೂತ್ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗುತ್ತಿದೆ.

ಹೋಂ ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಾಗೆಯೇ ಇವರ ಮೇಲೆ ಕಣ್ಗಾವಲು ಇಡಲು ಬಿಬಿಎಂಪಿಗೆ ಸಹ ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಂತ್ರಜ್ಞಾನದ ಮೊರೆ ಹೋಗಲಾಗಿದೆ.

ದೆಹಲಿಗೆ ಬಂದವರಿಗೆ 1 ವಾರ ಕಡ್ಡಾಯ ಹೋಂ ಕ್ವಾರಂಟೈನ್ ದೆಹಲಿಗೆ ಬಂದವರಿಗೆ 1 ವಾರ ಕಡ್ಡಾಯ ಹೋಂ ಕ್ವಾರಂಟೈನ್

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗುತ್ತಿದೆ. ಪೊಲೀಸ್, ಗೃಹ ರಕ್ಷಕ ದಳ, ಬೆಸ್ಕಾ, ಜಲಮಂಡಳಿ ಅಧಿಕಾರಿಗಳು, ಸ್ಥಳೀಯ ಅಪಾರ್ಟ್‌ಮೆಂಟ್ ಸಂಘದ ಸದಸ್ಯರನ್ನು ಒಳಗೊಂಡ ಸಮಿತಿ ಇದಾಗಿದೆ.

ಕಲಬುರಗಿಯಲ್ಲಿ ಗರ್ಭಿಣಿಯ ಹೋಂ ಕ್ವಾರಂಟೈನ್ ತಂದ ಆತಂಕಕಲಬುರಗಿಯಲ್ಲಿ ಗರ್ಭಿಣಿಯ ಹೋಂ ಕ್ವಾರಂಟೈನ್ ತಂದ ಆತಂಕ

ಹೋಂ ಕ್ವಾರಂಟೈನ್‌ನಲ್ಲಿರುವವರು 'ಕ್ವಾರಂಟೈನ್ ವಾಚ್' ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬೇಕು. ದಿನಕ್ಕೊಮ್ಮೆ ಅದರಲ್ಲಿ ಸೆಲ್ಫಿ ಹಾಕಿ ಅಪ್ ಡೇಟ್ ಮಾಡುವಂತೆ ಕುಟುಂಬದವರು ನೋಡಿಕೊಳ್ಳಬೇಕು. ಬೂತ್ ಮಟ್ಟದ ಸಮಿತಿ ಈ ಅಪ್ಲಿಕೇಶನ್‌ನಲ್ಲಿನ ಮಾಹಿತಿಯನ್ನು ಸ್ಟೇಟ್ ವಾರ್‌ ರೂಂಗೆ ರವಾನೆ ಮಾಡುತ್ತಾರೆ.

 ಹೋಂ ಕ್ವಾರಂಟೇನ್ ಗಳಿಂದ ಗಂಟೆಗೊಂದು ಸೆಲ್ಫೀ ಹೋಂ ಕ್ವಾರಂಟೇನ್ ಗಳಿಂದ ಗಂಟೆಗೊಂದು ಸೆಲ್ಫೀ

ಸ್ಥಳೀಯ ನಿವಾಸಿಗಳ ಸಂಘ, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಕ್ಕೆ ಸುತ್ತಮುತ್ತಲ ಪ್ರದೇಶದಲ್ಲಿ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮಾಹಿತಿ ನೀಡಲಾಗುತ್ತದೆ. ಒಂದು ವೇಳೆ ಅವರು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಸಂಚಾರ ನಡೆಸಿದರೆ ಮಾಹಿತಿ ನೀಡುವಂತೆ ಸೂಚಿಸಲಾಗುತ್ತದೆ.

ಎಲ್ಲಾ ಅಂತರಾಷ್ಟ್ರೀಯ ಪ್ರಯಾಣಿಕರು, ಮಹಾರಾಷ್ಟ್ರದಿಂದ ಮರಳಿದವರು ಹೋಂ ಕ್ವಾರಂಟೈನ್‌ನಲ್ಲಿರುವುದು ಅನಿವಾರ್ಯವಾಗಿದೆ. ಯಾರಾದರೂ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಹೊರಗೆ ಸಂಚಾರ ನಡೆಸಿದರೆ ಅವರನ್ನು ಸರ್ಕಾರಿ ಕ್ವಾರಂಟೈನ್‌ಗೆ ಹಾಕಲಾಗುತ್ತದೆ ಮತ್ತು ಎಫ್‌ಐಆರ್ ದಾಖಲು ಮಾಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

English summary
In a new SOP Bruhat Bengaluru Mahanagara Palike (BBMP) said that if a person violates the home quarantine protocols will sent to institutional quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X