ಕೊರೊನಾ ಕಾಲದಲ್ಲೂ ಬಿಬಿಎಂಪಿಗೆ ಸಂದಾಯವಾದ ಆಸ್ತಿ ತೆರಿಗೆ ಎಷ್ಟು ಗೊತ್ತಾ?
ಬೆಂಗಳೂರು, ಜನವರಿ 18:ಬಿಬಿಎಂಪಿಗೆ ಆಸ್ತಿ ತೆರಿಗೆಯೇ ಮೂಲ ಆದಾಯ, ಕೊರೊನಾ ಕಾಲದಲ್ಲೂ ಬಿಬಿಎಂಪಿಗೆ ಹೆಚ್ಚು ತೆರಿಗೆ ಸಂಗ್ರಹವಾಗಿದೆ.
ಬಿಬಿಎಂಪಿಯು ಜನವರಿ 13ರವರೆಗೆ 2460 ಕೋಟಿ ರೂ ತೆರಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.ಆದರೆ 3500 ಕೋಟಿ ರೂ ಸಂಗ್ರಹಿಸುವ ಗುರಿ ಹೊಂದಿತ್ತು. ಕೊರೊನಾ ಸೋಂಕಿನಿಂದಾಗಿ ಬಿಬಿಎಂಪಿಯು ಕೂಡ ಸಂಕಷ್ಟಕ್ಕೆ ಸಿಲುಕಿತ್ತು. ಕಳೆದ ಒಂದು ವರ್ಷದಿಂದ ಯಾರು ಆಸ್ತಿ ತೆರಿಗೆ ನೀಡಿಲ್ಲವೋ ಅವರ ಹೆಸರುಗಳನ್ನು ಪಟ್ಟಿ ಮಾಡುವಂತೆ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಸೂಚಿಸಿದ್ದರು.
ಬಿಬಿಎಂಪಿ ಹೊರತುಪಡಿಸಿ ಉಳಿದೆಲ್ಲಾ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಪುಟ ಅಸ್ತು
ಸುಮಾರು 100ಕ್ಕೂ ಹೆಚ್ಚು ಮಂದಿಯಿಂದ 600 ಕೋಟಿಗೂ ಹೆಚ್ಚು ತೆರಿಗೆ ಇನ್ನೂ ಸಂಗ್ರಹವಾಗಬೇಕಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. 2019-20ರ ಅವಧಿಯಲ್ಲಿ 2397 ಕೋಟಿ ರೂ ತೆರಿಗೆ ಸಂಗ್ರಹವಾಗಿತ್ತು. 2021ರ ಮಾರ್ಚ್ ಅಂತ್ಯದೊಳಗೆ 400 ಕೋಟಿ ರೂ ಹೆಚ್ಚಿನ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ.
ಕೊರೊನಾ ಸೋಂಕಿನಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಮುಂಬರುವ ಏಪ್ರಿಲ್‌ನಿಂದ ಮತ್ತಷ್ಟು ಭಾರ ಹೆಚ್ಚಾಗಲಿದೆ.
ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ಹೊಸದಾಗಿ ಭೂ ಸಾರಿಗೆ ಉಪಕರ ವಿಧಿಸಲಾಗಿದೆ. ಭೂ ಸಾರಿಗೆ ಉಪಕರ ಪ್ರಸ್ತಾವನೆಗೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಅನುಮೋದನೆ ನೀಡಿದ್ದು, ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ.