ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಮೋದಿ, ಬಿಬಿಎಂಪಿ ಕಸರತ್ತು ನೋಡಿ

|
Google Oneindia Kannada News

Recommended Video

ಬೆಂಗಳೂರಿಗೆ ಮೋದಿ , ಬಿಬಿಎಂಪಿ ಏನ್ ಮಾಡ್ತಿದೆ ನೋಡಿ | Oneindia Kannada

ಬೆಂಗಳೂರು, ಸೆಪ್ಟೆಂಬರ್ 6: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿರುವ ಕಾರಣ ಎರಡೇ ದಿನಗಳಲ್ಲಿ 250 ರಸ್ತೆಗಳನ್ನು ಸರಿ ಮಾಡಿದ್ದು, ರಸ್ತೆಗುಂಡಿಗಳನ್ನು ಬಿಬಿಎಂಪಿ ಮುಚ್ಚಿದೆ.

ಎಷ್ಟೋ ದಿನಗಳಿಂದ ಸಾರ್ವಜನಿಕರು ರಸ್ತೆಗುಂಡಿಗಳ ಬಗ್ಗೆ ನಿತ್ಯ ಸಾವಿರಾರು ದೂರುಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲ, ಆದರೆ ಮೋದಿ ಬರುತ್ತಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಬಿಬಿಎಂಪಿ ಅಷ್ಟು ಕೆಲಸಗಳನ್ನು ಮಾಡಿ ಮುಗಿಸಿದೆ.

ಚಂದ್ರಯಾನ-2 ಉಪಗ್ರಹ ಚಂದ್ರನ ಮೇಲೆ ಲ್ಯಾಂಡಿಂಗ್ ಆಗುವ ಸುಸಮಯವನ್ನು ಪ್ರಧಾನಿ ಬೆಂಗಳೂರಲ್ಲಿ ವೀಕ್ಷಿಸಲಿದ್ದಾರೆ.

ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ಅವರು ಆಯುಕ್ತ ಅನಿಲ್ ಕುಮಾರ್ ಅವರ ಬಳಿ ರಸ್ತೆಗುಂಡಿಗಳ ಕುರಿತು ಮಂಗಳವಾರ ಮಾತುಕತೆ ನಡೆಸಿದ್ದಾರೆ. ಬಳಿಕ ಎಂಜಿನಿಯರ್‌ಗಳ ಜೊತೆ ಕುರಿತು ಚರ್ಚಿಸಿ ಎರಡೇ ದಿನಗಳಲ್ಲಿ ಗುಂಡಿಗಳನ್ನು ಮುಚ್ಚಿಸಿದ್ದಾರೆ.

BBMP Levels Roads In Two Days

ಮೋದಿಯವರು ಬರುವ ರಸ್ತೆಯಲ್ಲಿ ಹಂಪ್‌ಗಳು, ರಸ್ತೆಗುಂಡಿಗಳು ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗೆಯೇ ಆ ಪ್ರದೇಶದಲ್ಲಿ ಶುಚಿತ್ವ ಕಾಪಾಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ ಆ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಗಮನ ಹರಿಸಲು ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ.

ನರೇಂದ್ರ ಮೋದಿ ಅವರು ಯಲಹಂಕ ವಾಯು ನೆಲೆ ಬಳಿ ಇರುವ ಖಾಸಗಿ ಹೋಟೆಲ್‌ ಒಂದರಲ್ಲಿ ತಂಗಲಿದ್ದಾರೆ. ಪೀಣ್ಯದಲ್ಲಿರುವ ಇಸ್ರೋ ಟೆಲಿಮೇಟರಿ ಟ್ರ್ಯಾಕಿಂಗ್ ಮೂಲಕ ನೋಡಲಿದ್ದಾರೆ.

ಬಿಬಿಎಂಪಿಯು ರಸ್ತೆಗುಂಡಿಗಳನ್ನು ಮುಚ್ಚಲು ಸಿದ್ಧವಾಗಿದ್ದರೂ ಕೂಡ ಜಲಮಂಡಳಿಯು ಪೈಪ್‌ಲೈನ್‌ಗಳನ್ನು ಅಳವಡಿಸಲು ರಸ್ತೆಯನ್ನು ಅಗೆಯುತ್ತಿದೆ. ಹಾಗಾಗಿ ವಿಳಂಬವಾಗುತ್ತಿದೆ.

English summary
BBMP Levels Roads In Two Days, Narendra Modi slated to land in the city on Friday to witness Chandrayaan-2 is landing on the moon , the agency has pressed into services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X