ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್‌

|
Google Oneindia Kannada News

ಬೆಂಗಳೂರು, ಜುಲೈ 17 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದ 198 ವಾರ್ಡ್‌ಗಳಲ್ಲಿಯೂ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ನಡೆಸಲು ಬಿಬಿಎಂಪಿ ಚಾಲನೆ ನೀಡಿದೆ.

ಶುಕ್ರವಾರ ಮೇಯರ್ ಗೌತಮ್ ಕುಮಾರ್ ಜೈನ್ ಮತ್ತು ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಈ ಪ್ರಕ್ರಿಯೆಗೆ ಚಾಲನೆ ನೀಡಿದರು. ಕೋವಿಡ್ - 19 ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ಎಲ್ಲಾ ವಾರ್ಡ್‌ನಲ್ಲಿ ನಡೆಯಲಿದೆ.

ಆ ಭಗವಂತ ಬಂದರೂ ಬೆಂಗಳೂರು ಕಾಪಾಡುವುದು ಕಷ್ಟ!ಆ ಭಗವಂತ ಬಂದರೂ ಬೆಂಗಳೂರು ಕಾಪಾಡುವುದು ಕಷ್ಟ!

ಬೆಂಗಳೂರು ನಗರದಲ್ಲಿ ಗುರುವಾರ 2344 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,288ಕ್ಕೆ ಏರಿಕೆಯಾಗಿದೆ. 507 ಕೋವಿಡ್ ಸೋಂಕಿತರು ಇದುವರೆಗೂ ನಗರದಲ್ಲಿ ಮೃತಪಟ್ಟಿದ್ದಾರೆ.

ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ ಮನೆಯೇ ಕೋವಿಡ್ ಆರೈಕೆ ಕೇಂದ್ರ; ವ್ಯವಸ್ಥೆ ಹೀಗಿರಲಿ

ಎಲ್ಲಾ ವಾರ್ಡ್‌ಗಳಲ್ಲಿ ಮನೆ-ಮನೆ ಸಮೀಕ್ಷೆ ಕೈಗೊಂಡು ಕೋವಿಡ್ - 19 ಲಕ್ಷಣಗಳಿರುವ ಸಾರ್ವಜನಿಕರಿಗೆ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ಕೈಗೊಳ್ಳಲು ಸರ್ಕಾರಿ/ಗುತ್ತಿಗೆ (ಓಲಾ) ವಾಹನಗಳನ್ನು ವಲಯವಾರು ನಿಯೋಜನೆ ಮಾಡಲಾಗಿದೆ.

ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ

150 ಸ್ವಯಂ ಸೇವಕರ ನೇಮಕ

150 ಸ್ವಯಂ ಸೇವಕರ ನೇಮಕ

ನಗರದ 198 ವಾರ್ಡ್‌ಗಳಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ನಡೆಸಲು ಸುಮಾರು 150 ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡು ಬಿಬಿಎಂಪಿ ಅವರಿಗೆ ತರಬೇತಿ ನೀಡಿದೆ. ಕಂಟೈನ್ಮೆಂಟ್ ಝೋನ್, ಹಾಟ್ ಸ್ಪಾಟ್‌ ಮತ್ತು ಹೆಚ್ಚು ಜನ ಸಂದಣಿ ಇರುವ ಪ್ರದೇಶದಲ್ಲಿ ಮೊದಲು ಪರೀಕ್ಷೆ ನಡೆಯಲಿದೆ.

ನೀವು ಸ್ವಯಂ ಸೇವಕರಾಗಿ ಸೇರಬಹುದು

ನೀವು ಸ್ವಯಂ ಸೇವಕರಾಗಿ ಸೇರಬಹುದು

ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ನಡೆಸಲು ಇನ್ನೂ ಸಹ ಸ್ವಯಂ ಸೇವಕರ ಅಗತ್ಯವಿದೆ. ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಸ್ವಯಂ ಸೇವಕರಾಗಿ ಕೆಲಸ ಮಾಡಬಹುದಾಗಿದೆ. ಬಿಬಿಎಂಪಿ ಅವರಿಗೆ ಅಗತ್ಯ ತರಬೇತಿಯನ್ನು ನೀಡಲಿದೆ.

ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್

ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಪ್ರಮುಖವಾಗಿ ILI/SARI ಲಕ್ಷಣಗಳಿರುವ, ಕಂಟೈನ್ಮೆಂಟ್ ಪ್ರದೇಶ, ಕೊಳಗೇರಿ ಪ್ರದೇಶ ಹಾಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ನಡೆಸಲಾಗುತ್ತದೆ.

ವಲಯವಾರು ವಾಹನಗಳ ನಿಯೋಜನೆ

ವಲಯವಾರು ವಾಹನಗಳ ನಿಯೋಜನೆ

ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ನಡೆಸಲು ನಡೆಸಲು ಬಿಬಿಎಂಪಿಯ ಪೂರ್ವ ವಲಯಕ್ಕೆ 40, ಪಶ್ಚಿಮಕ್ಕೆ 40, ದಕ್ಷಿಣ 35, ಬೊಮ್ಮನಹಳ್ಳಿ 20, ದಾಸರಹಳ್ಳಿ 12, ಯಲಹಂಕ 15, ಆರ್. ಆರ್. ನಗರ 20, ಮಹದೇವಪುರ 20, ಸೇರಿ ಒಟ್ಟು 232 ವಾಹನಗಳನ್ನು ನಿಯೋಜನೆ ಮಾಡಲಾಗಿದೆ.

English summary
Bruhat Bengaluru Mahanagara Palike (BBMP) launched rapid antigen test in city all 198 ward's. Around 150 volunteer science graduates’ have also been trained to administer swab tests in hot spots, containment zones and densely populated parts of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X