'ಹಸಿರು ಬೆಂಗಳೂರು'ಗಾಗಿ 90,000 ಸಸಿ ನೆಟ್ಟು ಪೋಷಿಸಲಿರುವ ಬಿಬಿಎಂಪಿ
ಬೆಂಗಳೂರು, ಅಕ್ಟೋಬರ್ 18: ಉದ್ಯಾನ ನಗರಿ ಎಂದೇ ಖ್ಯಾತಿ ಪಡೆದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನೇಕ ಯೋಜನೆಗಳಿಂದ ಗಿಡ-ಮರಗಳ ಮಾರಣ ಹೋಮ ಆಗುತ್ತಲೇ ಇದೆ. ಈ ಮಧ್ಯೆ ಬಿಬಿಎಂಪಿ 'ಹಸಿರು ಬೆಂಗಳೂರು'ಗಾಗಿ ಶ್ರಮಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 90,000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಸಿರೀಕರಣ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ "ಹಸಿರು ಬೆಂಗಳೂರು" ಕಾರ್ಯಕ್ರಮದಡಿ ಸಾವಿರಾರು ಗಿಡಗಳನ್ನು ನಡೆಸಲಾಗುತ್ತಿದೆ. ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ 2023-24ನೇ ಸಾಲಿನಲ್ಲಿ ಬೆಂಗಳೂರು ಹಸಿರುಗೊಳಿಸುವ ಬೆಂಗಳೂರಿನಾದ್ಯಂತ ಗಿಡಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಸುಮಾರು 250 ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಿಂದ ಒಡಂಬಡಿಕೆ ಮಾಡಿಕೊಂಡು ಸುಮಾರು 50,000 ಶಾಲೆಗಳು ಮತ್ತುಕಾಲೇಜು ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ.
ಗಿಡಗಳ ಮಾಹಿತಿಗೆ ಜಾಲತಾಣ ರೂಪಿಸಲಾಗುವುದು
ಬಿಬಿಎಂಪಿ ಅರಣ್ಯ ಘಟಕದ ವತಿಯಿಂದ ನೆಡಲಾದ ಗಿಡಗಳನ್ನು 03 ವರ್ಷಗಳ ಕಾಲ ಶಾಲಾ ವಿದ್ಯಾರ್ಥಿಗಳ ಹಾಗೂ ಅರಣ್ಯ ಅಧಿಕಾರಿಗಳ ಸಹಯೋಗದೊಂದಿಗೆ ಪೋಷಣೆ ಮಾಡಲಾಗುವುದು. ಈ ಸಂಬಂಧ ಪಾಲಿಕೆ ವತಿಂದ ಸಾಮಾಜಿಕ ಜಾಲತಾಣವನ್ನು ರೂಪಿಸಿ ನಗರದಾದ್ಯಂತ ನೆಡಲಾಗಿರುವ ಗಿಡಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಪಾಲಿಕೆ ತಿಳಿಸಿದೆ.
ನಗರದಲ್ಲಿ ಈಗಾಗಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಲಯವಾರು ನೆಟ್ಟಿರುವ ಗಿಡಗಳ ಸಂಖ್ಯೆ, ಶಾಲಾ/ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ಜಾಲತಾಣದಲ್ಲಿ ಮಾಹಿತಿ ನೀಡಲಾಗುವುದು. ಜೊತೆಗೆ ಸಿಎಂಪಿ ಅರಣ್ಯ ಘಟಕದ ಸಸ್ಯಕ್ಷೇತ್ರಗಳಿಂದ ಸಾರ್ವಜನಿಕಲಿಗೆ ಉಚಿತವಾಗಿ ಗಿಡಗಳನ್ನು ಸಹ ವಿತರಿಸಲಾಗಿರುತ್ತದೆ ಎಂದು ಪ್ರಟಕಣೆಯಲ್ಲಿ ತಿಳಿಸಿದೆ.

ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ಸಸಿ ನೆಟ್ಟ ಮಾಹಿತಿ
1. ಪೂರ್ವ ವಲಯದಲ್ಲಿ ಗುರಿಯಂತೆ 4000 ಗಿಡ ನೆಡಲಾಗಿದೆ.
2. ಪಶ್ಚಿಮ ವಲಯದಲ್ಲಿ 5000 ಸಸಿ ನೆಡುವ ಗುರಿ ಪೈಕಿ 3000 ಗಿಡ ಬೆಳೆಸಲಾಗುತ್ತಿದೆ.
3. ದಕ್ಷಿಣ ವಲಯದಲ್ಲಿ ಉದ್ದೇಶದಂತೆ 4000 ಗಿಡ ನೆಡಲಾಗಿದೆ.
4. ಆರ್‌ಆರ್ ನಗರ ವಲಯದಲ್ಲಿ 15700 ಗುರಿ ಪೈಕಿ 9100 ಸಸಿ ನೆಡಲಾಗಿದೆ.
5. ಬೊಮ್ಮನಹಳ್ಳಿ ವಲಯದಲ್ಲಿ ಗುರಿಯಂತೆ 16900 ಸಸಿಗಳನ್ನು ಬೆಳೆಸಲಾಗುತ್ತಿದೆ.
6. ದಾಸರಹಳ್ಳಿ ವಲಯದಲ್ಲಿ 14000 ಸಸಿ ನೆಡುವ ಗುರಿ ಸಾಧಿಸಿದ್ದೇವೆ.
7. ಯಲಹಂಕ ವಲಯ 18600 ಗಿಡ ನೆಡುವ ಗುರಿ ಪೂರ್ಣಗೊಳಿಸಿದ್ದೇವೆ.
8. ಮಹದೇವಪುರ ವಲಯ ಅಂದುಕೊಂಡಂತೆ 16800 ಗಿಡ ನೆಡಲಾಗಿದೆ.
9. ಯೋಜನೆಯಡಿ ಐದು ಸಾವಿರ ಗಿಡ ನೆಡಲಾಗಿದೆ.
10. ಒಟ್ಟು 100000 ಲಕ್ಷ ಸಸಿನೆಡುವ ಪೈಕಿ 91400 ಗಿಡ ನೆಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.












Click it and Unblock the Notifications