ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಅಗೆಯುವುದಕ್ಕೆ ನಿಷೇಧ ಹೇರಿದ ಬಿಬಿಎಂಪಿ!

|
Google Oneindia Kannada News

ಬೆಂಗಳೂರು, ಜುಲೈ. 25: ಬೆಂಗಳೂರು ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ರಸ್ತೆಗಳ ಹದಗೆಟ್ಟ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಬಿಎಂಪಿ ನಗರದಲ್ಲಿ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳನ್ನು ಹೊರತುಪಡಿಸಿ ರಸ್ತೆ ಅಗೆಯುವುದನ್ನು ಮೂರು ತಿಂಗಳ ಕಾಲ ನಿಷೇಧಿಸಿದೆ.

ಆದಾಗ್ಯೂ, ಹಿಂದೆ ಎರಡು ವಾರಗಳ ನಿಷೇಧವನ್ನು ವಿಧಿಸಿದಾಗಿನಿಂದ ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ಆಪ್ಟಿಕ್ ಫೈಬರ್ ಕೇಬಲ್‌ಗಳನ್ನು (ಒಎಫ್‌ಸಿ) ಹಾಕಲು ಕಾನೂನುಬಾಹಿರವಾಗಿ ರಸ್ತೆಗಳನ್ನು ಅಗೆಯುವುದನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಹಲವಾರು ವಿನಾಯಿತಿಗಳನ್ನು ಕೋರಿವೆ. ಈಗ ಬಿಬಿಎಂಪಿ ರಸ್ತೆ ಅಗುವುದಕ್ಕೆ ಮೂರು ತಿಂಗಳ ನಿಷೇಧವನ್ನು ಹೇರಿದೆ.

 ವೈರಲ್ ವಿಡಿಯೋ: ಹುಲಿ ರಸ್ತೆ ದಾಟಲು ವಾಹನ ನಿಲ್ಲಿಸಿದ ಪೊಲೀಸರು ವೈರಲ್ ವಿಡಿಯೋ: ಹುಲಿ ರಸ್ತೆ ದಾಟಲು ವಾಹನ ನಿಲ್ಲಿಸಿದ ಪೊಲೀಸರು

ಜೂನ್ 20 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮುನ್ನ ಕೆಂಗೇರಿಯ ಕೊಮ್ಮಘಟ್ಟ ಮುಖ್ಯ ರಸ್ತೆಯನ್ನು ಒಎಫ್‌ಸಿ ಹಾಕಲು ಟೆಲಿಕಾಂ ಸೇವಾ ಪೂರೈಕೆದಾರರು ಅಗೆದಿದ್ದರು. ಆದರೆ ಪ್ರಧಾನಿ ಭೇಟಿಯ ಕೆಲವೇ ದಿನಗಳಲ್ಲಿ ರಸ್ತೆಯನ್ನು ಮುಚ್ಚಿ ಮತ್ತೆ ತೇಪೆ ಹಾಕಲಾಗಿದೆ. ಹೊಸದಾಗಿ ರಸ್ತೆ ಅಗೆಯುವುದ್ದಕ್ಕೆ ಟಿಎಸ್‌ಪಿಯನ್ನು ತಡೆದಿಲ್ಲ. ಅದೇ ಟಿಎಸ್‌ಪಿ ಈಗ ಈ ಪ್ರದೇಶದಲ್ಲಿನ ಒಳಗಿನ ವಾರ್ಡ್ ರಸ್ತೆಗಳನ್ನು ಅಗೆಯುತ್ತಿದೆ. ಈಗ ಯಾವುದೇ ಅಧಿಕಾರಿಗಳು ಇದನ್ನು ತಡೆಯುತ್ತಿಲಿಲ್ಲ ಎಂದು ಸ್ಥಳೀಯ ನಿವಾಸಿ ಪ್ರಶಾಂತ್ ಕುಮಾರ್ ಆರೋಪಿಸಿದರು.

ನಗರದಲ್ಲಿ ರಸ್ತೆ ಅಗೆಯುವ ಕ್ರಮವನ್ನು ಟಿಎಸ್‌ಪಿಗಳು ಉಲ್ಲಂಘಿಸುತ್ತಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಒಪ್ಪಿಕೊಂಡಿದ್ದಾರೆ. ರಸ್ತೆ ಅಗೆಯಲು ಸ್ಪಷ್ಟವಾದ ನಿಷೇಧವಿದೆ. ರಸ್ತೆಗಳನ್ನು ಅಗೆಯುವುದು ಕಂಡುಬಂದಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲು ನಾವು ಎಲ್ಲಾ ವಲಯ ಆಯುಕ್ತರಿಗೆ ಸೂಚನೆ ನೀಡಿದ್ದೇವೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇತ್ತೀಚೆಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಲಾಲ್ ಬಾಗ್ ಬಳಿ ರಿಲೇಡ್ ರಸ್ತೆಯನ್ನು ಅಗೆದಿದ್ದಕ್ಕಾಗಿ ರಿಲಯನ್ಸ್ ಜಿಯೋ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದೆ. ಆದರೆ, ಇತರ ಹಲವು ಪ್ರಕರಣಗಳಲ್ಲಿ ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ.

ನಿಷೇಧ ಉಲ್ಲಂಘಿಸಿ ರಸ್ತೆ ಅಗೆತ

ನಿಷೇಧ ಉಲ್ಲಂಘಿಸಿ ರಸ್ತೆ ಅಗೆತ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಂತಹ ಸಂಸ್ಥೆಗಳು ಸಹ ವಿನಾಯಿತಿಗಳನ್ನು ಕೋರಿವೆ. ಮೂರು ತಿಂಗಳ ನಿಷೇಧವನ್ನು ನಿರ್ಲಕ್ಷಿಸಿ ಹಲವಾರು ಕಾಮಗಾರಿಗಳನ್ನು ಪ್ರಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.

ಮನೆಗಳಿಗೆ ಸಂಪರ್ಕಕ್ಕೆ ಅವಕಾಶ

ಮನೆಗಳಿಗೆ ಸಂಪರ್ಕಕ್ಕೆ ಅವಕಾಶ

ಮನೆಗಳಿಗೆ ಸಂಪರ್ಕವನ್ನು ಒದಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರಂಭದಲ್ಲಿ ಬೆಸ್ಕಾಂ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಾಗಿ ಕೇವಲ ಹಾರಿಜಾಂಟಲ್ ಡೈರೆಕ್ಷನಲ್ ಡ್ರಿಲ್ಲಿಂಗ್ (ಎಚ್‌ಡಿಡಿ) ಅನ್ನು ಕೈಗೊಳ್ಳಲು ವಿನಾಯಿತಿ ನೀಡಿದೆ ಎಂದು ಗಿರಿನಾಥ್ ಹೇಳಿದರು. ಆದಾಗ್ಯೂ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾರಿಜಾಂಟಲ್ ಡೈರೆಕ್ಷನಲ್ ಡ್ರಿಲ್ಲಿಂಗ್ ಮೂಲಕ ಮನೆಗಳಿಗೆ ಸಂಪರ್ಕಗಳನ್ನು ಒದಗಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ರಸ್ತೆಗಳನ್ನು ಅಗೆಯುತ್ತಿದ್ದಾರೆ ಎಂದು ಮುಖ್ಯ ಪೌರಾಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಆದ್ಯತೆಯ ಆಧಾರದ ಮೇಲೆ ಕಾಮಗಾರಿ ಪಟ್ಟಿ

ಆದ್ಯತೆಯ ಆಧಾರದ ಮೇಲೆ ಕಾಮಗಾರಿ ಪಟ್ಟಿ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಬೆಸ್ಕಾಂ ಸಹ ಕಾಮಗಾರಿಗಳ ನಿರ್ಣಾಯಕ ಸ್ವರೂಪವನ್ನು ಉಲ್ಲೇಖಿಸಿ ನಿಷೇಧದಿಂದ ವಿನಾಯಿತಿಗಳನ್ನು ಕೋರಿವೆ. ಈ ವಿನಂತಿಗಳನ್ನು ಅನುಸರಿಸಿ, ಅದರ ಉಪಯುಕ್ತತೆ, ಆದ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳಲು ಬಯಸುವ ಪ್ರಮುಖ ಕಾರ್ಯಗಳ ಪಟ್ಟಿಯನ್ನು ನಾವು ಮಾಡುತ್ತಿದ್ದೇವೆ ಎಂದು ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಆದರೂ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಅಗೆತ

ಆದರೂ ಗಂಗಾಧರ ಚೆಟ್ಟಿ ರಸ್ತೆಯಲ್ಲಿ ಅಗೆತ

ಈ ಪಟ್ಟಿಗಳು ನಮಗೆ ಲಭ್ಯವಾದ ನಂತರ ಟ್ರಾಫಿಕ್, ರಸ್ತೆ ಸ್ಥಿತಿ ಮತ್ತು ನಿವಾಸಿಗಳಿಗೆ ಹೆಚ್ಚು ತೊಂದರೆ ನೀಡದ ಕಾಮಗಾರಿಗಳಿಗೆ ನಾವು ಅವಕಾಶ ನೀಡುತ್ತೇವೆ ಎಂದು ತುಷಾರ್ ಗಿರಿನಾಥ್ ಹೇಳಿದರು. ಆದಾಗ್ಯೂ, ಹಲಸೂರು ಕೆರೆಗೆ ಹೊಂದಿಕೊಂಡಂತೆ ಗಂಗಾಧರ ಚೆಟ್ಟಿ ರಸ್ತೆಯಂತಹ ಹಲವಾರು ಸ್ಥಳಗಳಲ್ಲಿ ಜಲಮಂಡಳಿ ಈಗಾಗಲೇ ಹೊಸ ಕಾಮಗಾರಿಗಳನ್ನು ಪ್ರಾರಂಭಿಸಿದೆ ಮತ್ತು ರಸ್ತೆಯನ್ನು ಅಗೆದು ಹಾಕಿದೆ.

English summary
Keeping in view the incessant rains and the deteriorating condition of roads in Bengaluru city, BBMP has banned road digging for three months except for works already underway in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X