ಬಿಬಿಎಂಪಿ ಕಸದ ವಾಹನಗಳಿಗೆ ಹೊಸ ನಿಯಮ! ಮೀರಿದರೇ ಕ್ರಿಮಿನಲ್ ಕೇಸ್
ಬೆಂಗಳೂರು, ಜುಲೈ23: ಕಸದ ವಾಹನಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹೊಸ ನಿಯಮವನ್ನು ತಂದಿದೆ. ಪಾಲಿಕೆ ವ್ಯಾಪ್ತಿಯ ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ. ಗುತ್ತಿಗೆದಾರರು ಮೂಲಕ ಸರಬರಾಜು ಮಾಡಲಾದ ಎಲ್ಲಾ ವಾಹನಗಳಿಗೂ ಹೊಸ ಆದೇಶ ಅನ್ವಯವಾಗುತ್ತದೆ.
ಕಸದ ವಾಹನಗಳಿಂದ ಅಪಘಾತ ಸಂಭವಿಸಿ ಸಾವು ನೋವಾದರೆ. ದಂಡದ ರೂಪದಲ್ಲಿ ಆ ವಾಹನ ಮಾಲೀಕರೇ ಪರಿಹಾರ ನೀಡಬೇಕು ಎಂದು ಹೊರಡಿಸಿದ ಬಿಬಿಎಂಪಿ ಘನತ್ಯಾಜ ವಿಶೇಷ ಆಯುಕ್ತ ಆದೇಶಿದ್ದಾರೆ.
ಬಿಬಿಎಂಪಿ ಕಸದ ಲಾರಿಗಳಿಂದ ಅಪಘಾತ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗುತ್ತಿದೆ ಎನ್ನಲಾಗುತ್ತದೆ. ಜೊತೆಗೆ ಅನಾಮಾಧೇಯ ವ್ಯಕ್ತಿಗಳಿಂದ ಸ್ವಂತ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಅಳವಡಿಕೆ ಹಿನ್ನೆಲೆ ಬ್ರೇಕ್ ಹಾಕಲು ಆದೇಶ ಹೊರಡಿಸಿದೆ.

ಆದೇಶ ಪಾಲಿಸದಿದ್ದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ.
1.ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ಕೋಶದ ಗುತ್ತಿಗೆದಾರರ ಮೂಲಕ ಸರಬರಾಜು ಮಾಡಲಾದ ಎಲ್ಲಾ ಆಟೋ ಟಿಪ್ಪರಗಳು ಕಾಂಪ್ಯಾಕ್ಟರ್‌ಗಳ ಪಾಲಿಕೆಯ ಸೇವೆಯಲ್ಲಿ / ಬಿಬಿಎಂಪಿ / ಬಿಬಿಎಂಪಿ ಸೇವೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ / ಇತರ ಎಂದು ನಮೂದಿಸುವುದನ್ನ ತಕ್ಷಣದಿಂದ ನಿಷೇಧಿಸಲಾಗಿದ್ದೆ.
2. ಪಾಲಿಕೆಗೆ ಪಾಲಿಕೆಯ ಸಂಬಂಧಿಸಿರದ ಅನಾಮಧೇಯ ವಾಹನಗಳು ಬೆಂಗಳೂರು ಮಹಾನಗರ ಸೇವೆಯಲ್ಲಿ / ಬಿಬಿಎಂಪಿ / ಬಿಬಿಎಂಪಿ ಸೇವೆಯಲ್ಲಿ / ಬೃಹತ್ ಪಾಲಿಕೆ / ಇತರೆ ಎಂದು ನಾಮಫಲಕ ಹಾಕಿದ್ದಲ್ಲಿ ನಮೂಸಿದ್ದಲ್ಲಿ ಅಂತಹ ವಾಹನಗಳ ಮೇಲೆ ಮತ್ತು ಮಾಲೀಕರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ಚಾಲಕರ ದಾಖಲಿಸುವುದು.
3. ಎಲ್ಲಾ ಚಾಲಕರ ವಾಹನ ಚಾಲನಾ ಪರವಾನಿಗೆ, ವಾಹನ ಚಲಿಸಲು ದೈಹಿಕ ಸಧೃಡತೆಯ ಪ್ರಮಾಣ ಪತ್ರ , ವಾಹನದ ಫಿಟ್ನೆಸ್ ಪ್ರಮಾಣ ಪತ್ರ , ಇನ್ಸುರೆನ್ಸ್ ಪ್ರಮಾಣ ಪತ್ರಗಳ ತಪಾಸಣೆ ಹಾಗೂ ಅವಶ್ಯ ಕಾಯ್ದೆಗಳನ್ವಯ ಇತರ ತಪಾಸಣೆಗಳನ್ನು ಸಹ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಕೈಗೊಳ್ಳುವುದು .

4. ವಲಯ ಮತ್ತು ವಾರ್ಡ್ ಮಾರ್ಷಲ್‌ಗಳು /ಕಿರಿಯ ಆರೋಗ್ಯ ಪರಿವೀಕ್ಷಕರುಗಳು ಕಾರ್ಯಾಚರಣೆಯ ರಸ್ತೆಗಳಲ್ಲಿ ಇಂತಹ ಅನಧಿಕೃತವಾಗಿ ಪಾಲಿಕೆಯ ಹೆಸರನ್ನು ನಮೂದಿಸಿರುವ ನಾಮಫಲಕಗಳನ್ನ ಹಾಕಿರುವ ವಾಹನಗಳನ್ನು ನಿಲ್ಲಿಸಿ ಕೂಡಲೇ ತೆಗೆಸುವುದು
5. ಒಂದು ವೇಳೆ ಗುತ್ತಿಗೆದಾರರಿಗೆ ಪಾಲಿಕೆಯ ಹೆಸರು ನಮೂದು ನಾಮಫಲಕಗಳಿಲ್ಲದೇ ಘನತ್ಯಾಜ್ಯ ಸಂಗ್ರಹಣೆ , ಸಾಗಾಣೆ ಮತ್ತು ವಿಲೇವಾರಿಯಲ್ಲಿ ತೊಂದರೆಯಾಗುತ್ತಿದ್ದಲ್ಲಿ, ಮುಂಚಿತವಾಗಿಯೇ ಅಧೀಕ್ಷಕ ಅಭಿಯಂತರರಿಂದ ಲಿಖಿತ ರೂಪದಲ್ಲಿ ಮಾನ್ಯತೆಯ ಅವಧಿಯೊಂದಿಗೆ ಅನುಮತಿ ಪತ್ರವನ್ನು ಪಡೆದು ಘನತ್ಯಾಜ್ಯ ಸಂಗ್ರಹಣೆ, ಸಾಗಾಣೆಯ ಕಾರ್ಯವನ್ನು ನಿರ್ವಹಿಸುವುದು.
ಕಾರ್ಯಚರಣೆಯ ಸಮಯದಲ್ಲಿ ಪೊಲೀಸ್ ಇತರೆ ಅಧಿಕಾರಿಗಳು ಕೇಳಿದ್ದಲ್ಲಿ , ಸದರಿ ಪತ್ರವನ್ನು ಸಲ್ಲಿಸುವುದು.
6. ಇನ್ನು ಮುಂದೆ , ಅನಧಿಕೃತವಾಗಿ ಗುತ್ತಿಗೆದಾರರ ವಾಹನಗಳ ಮೇಲೆ "ಪಾಲಿಕೆಯ ಸೇವೆಯಲ್ಲಿ / ಬಿಬಿಎಂಪಿ / ಬಿಬಿಎಂಪಿ ಸೇವೆಯಲ್ಲಿ ಬೃಹತ್ ಪಾಲಿಕೆ / ಇತರ " ನಮೂದಿಸಿ ನಾಮಫಲಕ ಅಳವಡಿಸಿರುವುದು ಪಾಲಿಕೆಯ ಪೊಲಿಸ್ ಇಲಾಖೆಯ ಇತರೆ ಅಧಿಕಾರಿಗಳ ಗಮನಕ್ಕೆ ಬಂದರೆ, ಅಂತಹ ವಾಹನಗಳ ಚಾಲಕರ ಮೇಲೆ ಮತ್ತು ಮಾಲೀಕರ ಮೇಲೆ ಕಾನೂನಾತ್ಮಕವಾಗಿ ಕ್ರಮಜರುಗಿಸುವುದು.

7. ಒಂದು ಅನಧಿಕೃತ / ಅನಾಮಧೇಯ ವಾಹನಗಳ ತಿಳಿಸಿದ ಮೇಲೆ ಅಪಘಾತಗಳಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ಅಥವಾ ಸಾವು - ನೋವು ಸಂಭವಿಸಿದಲ್ಲಿ ಸದರಿ ವಾಹನಗಳ ಮಾಲೀಕರಿಂದಲೇ ಪರಿಹಾರದ ಮೊತ್ತವನ್ನು ದಂಡದ ರೂಪದಲ್ಲಿ ಸಂತ್ರಸ್ತರಿಗೆ ಕೊಡಿಸಲಾಗುವುದೆಂದು ಈ ಮೂಲಕ ಸೂಚಿಸಿದೆ.












Click it and Unblock the Notifications