ಬೆಂಗಳೂರು: 800 ಮರ ಕಡಿಯಲು ಬಿಬಿಎಂಪಿಯಿಂದ ಅನುಮೋದನೆ ಪಡೆದ ಆ ಅಭಿವೃದ್ಧಿ ಯೋಜನೆಗಳು ಯಾವವು?
ಬೆಂಗಳೂರು, ಜನವರಿ 23: ಬೆಂಗಳೂರಿನ ಸ್ಯಾಂಕಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ಯೋಜನೆಗೆ ಪೂರ್ಣವಾಗಿ ಬೆಳೆದುನಿಂತ ಪಾರಂಪರಿಕ ಮರಗಳ ತೆರವಿಗೆ ಸರ್ಕಾರ ನಿರ್ಧಾರ ಮಾಡಿತ್ತು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೆ ಇದೀಗ ಮೂರು ಅಭಿವೃದ್ಧಿ ಯೋಜನೆಗಳಿಗಾಗಿ ಒಟ್ಟು 800ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಹಾಕಲು ಸರ್ಕಾರ ಅನುಮತಿ ನೀಡಿದೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 800ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಅನುಮೋದನೆ ನೀಡಿದೆ. ಇದರಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ವು ದೂರವಾಣಿನಗರ ಮತ್ತು ಕೆಂಪಾಪುರ ಕ್ರಾಸ್ ನಡುವೆ ಎಲಿವೇಟೆಡ್ ಮೆಟ್ರೋ ಮಾರ್ಗ ನಿರ್ಮಾಣದ ಕಾಮಗಾರಿ ಹಾಗೂ ಇದೇ ಭಾಗದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆಂದು ಬೆಳೆದು ನಿಂತ ಮರಗಳನ್ನು ಕಡಿಯಲು ಅನುಮತಿ ಪಡೆದುಕೊಂಡಿದೆ.
800 ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಅನುಮೋದನೆ ನೀಡಿದ್ದರ ಬಗ್ಗೆ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ವಿವಿಧ ಯೋಜನೆಗಳ ಪೈಕಿ ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (KRDCL) ರಸ್ತೆ ವಿಸ್ತರಣೆ ಯೋಜನೆ ಮತ್ತು ಕೆಂಪಾಪುರ ವ್ಯಾಪ್ತಿಯಲ್ಲಿನ ನಮ್ಮ ಮೆಟ್ರೋ ಯೋಜನೆಗಳು ಸೇರಿವೆ ಎಂದು ಅವರು ತಿಳಿಸಿದರು.

ನೈಋತ್ಯ ರೈಲ್ವೆ ಇಲಾಖೆಯು ಸಲ್ಲಿಸಿದ್ದ ಯಶವಂತಪುರ ರೈಲು ನಿಲ್ದಾಣದ ನವೀಕರಣ ಯೋಜನೆಯ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಮರ ಕಡಿಯುವುದರ ವಿರುದ್ಧ ಕೇವಲ ಒಂದು ಆಕ್ಷೇಪಣೆ ಮಾತ್ರ ಸಲ್ಲಿಕೆಯಾಗಿತ್ತು. ಅದರಲ್ಲಿ ಪರಿಸರಕ್ಕೆ ಹಾಗೂ ಬೆಳೆದು ನಿಂತ ಮರ ಕಡಿಯದಂತೆ ಹಾಗೂ ಪರ್ಯಾಯ ಮಾರ್ಗ ಹುಡುಕುವಂತೆ ಆಗ್ರಹಿಸಲಾಗಿತ್ತು. ಇದಕ್ಕೆ ಉತ್ತರಿಸಿದ್ದ ರೈಲ್ವೆ ಇಲಾಖೆ ಬೆಂಗಳೂರಿನ ಭವಿಷ್ಯದ ಅಗತ್ಯತೆ ಪೂರೈಕೆಗೆ ಹಾಲಿ ಸೌಕರ್ಯ ಸಾಲದು. ನವೀಕರಣ ಅಗತ್ಯವಿದೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡಿತ್ತು. ಇದಾಗ ಬಳಿಕ ಇಲಾಖೆಗೆ ಉದ್ದೇಶಿತ ಯೋಜನೆಯಲ್ಲಿ 79 ಮರಗಳ ಸಂರಕ್ಷಣೆ, 33 ಮರಗಳ ಬೇರೆ ಸ್ಥಳಾಂತರ ಹಾಗೂ 141 ಮರ ತೆರವಿಗೆ ಸೂಚಿಸಲಾಗಿತ್ತು.
ನಮ್ಮ ಮೆಟ್ರೋ ಪ್ರಸ್ತಾವಕ್ಕೆ 97 ಆಕ್ಷೇಪ್ರಣೆ ಸಲ್ಲಿಕೆ
ಬಿಎಂಆರ್‌ಸಿಎಲ್ ಕೆಂಪಾಪುರ ಕ್ರಾಸ್ ಮತ್ತು ದೂರವಾಣಿ ನಗರ ಮಧ್ಯೆ ಮೆಟ್ರೊ ಮಾರ್ಗ ಮತ್ತು ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದೆ. ಓಆರ್‌ಆರ್ ಏರ್‌ಪೋರ್ಟ್ ಲೈನ್ ಯೋಜನೆಗೆ ಒಟ್ಟು 97 ಆಕ್ಷೇಪಣೆ ಸಲ್ಲಿಕೆ ಆಗಿದ್ದವು. 14 ಮರ ಉಳಿಸಿ, 43 ಮರ ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅನಿವಾರ್ಯ ಕಾರಣಕ್ಕೆ 203 ಮರ ತೆರವಿಗೆ ನಿರ್ಧರಿಸಲಾಗಿದೆ.

ಗುಂಜೂರುನಿಂದ ಬೆಳತ್ತೂರುವರೆಗೆ ಐದು ಕಿಲೋ ಮೀಟರ್ ಉದ್ದದ ರಸ್ತೆಗೆ ಅಭಿವೃದ್ಧಿಗೆ ಕೆಆರ್‌ಡಿಸಿಎಲ್‌ನ ಯೋಜನೆ ಒಂದು ಆಕ್ಷೇಪ ವ್ಯಕ್ತವಾಗಿತ್ತು. ಪ್ರಸ್ತುತ ಈ ರಸ್ತೆಯು ವಾಹನ ದಟ್ಟಣೆಯಿಂದ ಕೂಡಿದೆ. ಸಮರ್ಪಕ ಹಾಗೂ ಸುಗಮ ವಾಹನ ಸಂಚಾರಕ್ಕೆ, ಟ್ರಾಪಿಕ್ ನಿವಾರಣೆಗೆ ಮರ ರಸ್ತೆ ಅಭಿವೃದ್ಧಿ ಎಂದು ತಿಳಿಸಲಾಗಿತ್ತು. ಈ ಯೋಜನೆಗಾಗಿ ಈಲ್ಲಿನ 163 ಮರ ಬಿಟ್ಟು 82 ಮರಗಳ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ಸುಮಾರು 450ಕ್ಕೂ ಹೆಚ್ಚು ಮರಗಳ ತೆರವು ಅನಿವಾರ್ಯ ಎನ್ನಲಾಗಿದೆ.












Click it and Unblock the Notifications