ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ ಉಪನಗರ ರೈಲು ಯೋಜನೆ: 268 ಮರ ಕಡಿಯಲು ಬಿಬಿಎಂಪಿ ಗ್ರೀನ್ ಸಿಗ್ನಲ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಉಪನಗರ ರೈಲು ಮಾರ್ಗದ ಮಲ್ಲಿಗೆ ಕಾರಿಡಾರ್‌ ನಿರ್ಮಾಣಕ್ಕಾಗಿ 268 ಮರಗಳನ್ನು ಕಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅರಣ್ಯ ವಿಭಾಗ ಒಪ್ಪಿಗೆ ನೀಡಿದೆ.

ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್‌ನಿಂದ 661 ಮರಗಳನ್ನು ಕಡಿಯುವ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಅರಣ್ಯ ಕೋಶ ಸಾರ್ವಜನಿಕ ಪ್ರಕಟಣೆಯನ್ನು ಪ್ರಕಟಿಸಿ ಒಂದು ವರ್ಷದ ನಂತರ, ಬಿಬಿಎಂಪಿಯ ವೃಕ್ಷ ತಜ್ಞರ ಸಮಿತಿಯು 268 ಮರಗಳನ್ನು ಕಡಿಯಲು ಅನುಮತಿ ನೀಡಲು ನಿರ್ಧರಿಸಿದೆ. ಈ ಸಂಬಂಧ ಸಾರ್ವಜನಿಕರ ಗಮನಕ್ಕೆ ಬಿಬಿಎಂಪಿಗೆ ಯಾವುದೇ ಆಕ್ಷೇಪಣೆಗಳು ಬಂದಿಲ್ಲ ಎಂದು ಹೇಳಲಾಗಿದೆ.

ಬೆಂಗಳೂರು ಉಪನಗರ ರೈಲು ಕಾರಿಡಾರ್‌ಗಾಗಿ 268 ಮರಗಳನ್ನು ಕತ್ತರಿಸಲು ಬಿಬಿಎಂಪಿ ಒಪ್ಪಿಗೆ ನೀಡಿದೆ.

BBMP give green signal for 668 Trees taxing proposal for mallige suburban rail project

ಕಡಿಯಲು ಗುರುತಿಸಲಾದ 268 ಮರಗಳು ಹಾಗೂ ಗುರುತಿಸಲಾದ 315 ಮತ್ತು ಸ್ಥಳಾಂತರಕ್ಕಾಗಿ 58 ಅನ್ನು ಮೂಲ ಪ್ರಸ್ತಾವನೆಯ ಸಂಖ್ಯೆ 661ಕ್ಕೆ ಒಳಗೊಂಡಿಲ್ಲ. ಯಶವಂತಪುರ ಸುತ್ತಮುತ್ತಲಿನ ನಾಲ್ಕು ಕಡೆ ಮರಗಳನ್ನು ಸ್ಥಳಾಂತರಿಸವಂತೆ ಅರಣ್ಯ ವಿಭಾಗ ಶಿಫಾರಸು ಮಾಡಿದೆ.

ಯೋಜನೆ ಸಂಬಂಧ 50 ಆಕ್ಷೇಪಣೆ ಸಲ್ಲಿಕೆ

ಯೋಜನೆಗಾಗಿ ಅನೇಕ ಮರಗಳನ್ನು ಕಡಿಯುವ ಪ್ರಸ್ತಾವನೆ ಯಾವುದೇ ಆಕ್ಷೇಪಣೆಗಳು ಬಂದಿಲ್ಲವಾದರು ಸಹ ಸಾಧ್ಯವಾದಷ್ಟು ಮರಗಳನ್ನು ಉಳಿಸಬೇಕಿದೆ. ಇಲ್ಲವೇ ಕೆಲವು ಮರಗಳನ್ನು ಸ್ಥಳಾಂತರಿಸುವುದು ನಮ್ಮ ಕರ್ತವ್ಯ ಎಂದು ಮರ ಅಧಿಕಾರಿ ಮತ್ತು ಅರಣ್ಯ ಉಪ ಸಂರಕ್ಷಣಾಧಿಕಾರಿ (ಬಿಬಿಎಂಪಿ) ತಿಳಿಸಿದರು. ಪ್ರತಿ ಮರಕ್ಕೆ 10 ಸಸಿಗಳ ಅನುಪಾತದಲ್ಲಿ ಕಡ್ಡಾಯ ಅರಣ್ಯೀಕರಣವನ್ನು ಖಚಿತಪಡಿಸಿಕೊಳ್ಳಿ. ಬಳ್ಳಾರಿ ರಸ್ತೆ ಅಗಲೀಕರಣಕ್ಕಾಗಿ ಅರಮನೆ ಮೈದಾನದ ಬಳಿ ಮರಗಳನ್ನು ಕಡಿಯುವ ಪ್ರಸ್ತಾವನೆಗೆ ಬಂದ 50 ಆಕ್ಷೇಪಣೆಗಳಿಗೆ ವ್ಯತಿರಿಕ್ತವಾಗಿ ಮಲ್ಲಿಗೆ ಕಾರಿಡಾರ್‌ಗೆ ಮರಗಳನ್ನು ಕಡಿಯುವ ನೋಟಿಸ್‌ಗೆ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಸ್ತೆ ವಿಸ್ತರಣೆಗಾಗಿ 54 ಮರಗಳನ್ನು ಕಡಿಯಲು ಬಿಬಿಎಂಪಿ ಹಸಿರು ನಿಶಾನೆ ತೋರಿಸಿದೆ.

ಮರ ಕಡಿಯುವ ಪ್ರಸ್ತಾವನೆ ಸಂಬಂಧ ಸಲ್ಲಿಕೆಯಾದ 50 ಆಕ್ಷೇಪಣೆಗಳನ್ನು ಬಿಬಿಎಂಪಿ ತಳ್ಳಿಹಾಕಲಾಗಿದೆ ಎಂದು ಪರಿಸರವಾದಿಗಳು ಹೇಳಿದ್ದಾರೆ. ಆದರೆ ಯೋಜನೆಗೆ ಬೆಂಗಳೂರು ಉತ್ತರದ ನಿವಾಸಿಗಳು ಒಪ್ಪಿಗೆ ನೀಡಿರುವ ಬಗ್ಗೆ ಪಾಲಿಕೆಗೆ ಪತ್ರ ಬರೆದಿದ್ದಾರೆ. ಆಕ್ಷೇಪಣೆಗಳು ಮಾತ್ರ ಬೆಂಗಳೂರು ದಕ್ಷಿಣ ವಿಭಾಗದಿಂದ ಬಂದಿವೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಸ್ತೆ ಮೂಲಸೌಕರ್ಯ) ಬಿ.ಎಸ್ ಪ್ರಹ್ಲಾದ್ ತಿಳಿಸಿದ್ದಾರೆ.

BBMP give green signal for 668 Trees taxing proposal for mallige suburban rail project

ಬಿಬಿಎಂಪಿ ಅರಣ್ಯ ವಿಭಾಗಕ್ಕೆ 50 ಆಕ್ಷೇಪಣೆಗಳು ಬಂದಿವೆ. ಆದರೆ ಈ ಬಗ್ಗೆ ಬಿಬಿಎಂಪಿ ಸಾರ್ವಜನಿಕರ ಅಭಿಪ್ರಾಯ ಕೇಳಿಲ್ಲ. ಪರಿಸರ ನಾಶದಿಂದ ಬದುಕಿಗೆ ತೊಂದರೆ ಆಗಲಿದೆ. ಹೆಚ್ಚುತ್ತಿರುವ ವಾಹನ ದಟ್ಟಣೆ ಸಂದರ್ಭದಲ್ಲಿ ಮರಗಳು ಸೂಕ್ತ ಗಾಳಿ ಒದಗಿಸುವ ಕೆಲಸ ಮಾಡುತ್ತವೆ ಎಂದು ಪರಿಸರ ಹೋರಾಟಗಾರ ವಿಜಯ್ ನಿಶಾಂತ್ ಹೇಳಿದರು.

English summary
Bruhat Bengaluru Mahanagara Palike (BBMP) give green signal for 668 Tree axing proposal for mallige suburban rail project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X