BBMP Tax Setllement: ತಪ್ಪಾಗಿ ಆಸ್ತಿ ತೆರಿಗೆ ಘೋಷಿಸಿಕೊಂಡವರಿಗೆ 'ಒನ್ ಟೈಮ್ ಸೆಟ್ಲ್ ಮೆಂಟ್' ಸೌಲಭ್ಯ: ಪಾವತಿ ಹೇಗೆ? ತಿಳಿಯಿರಿ

ಬೆಂಗಳೂರು, ಫೆಬ್ರವರಿ 24: ಇತ್ತೀಚೆಗಷ್ಟೇ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಬಿಬಿಎಂಪಿ ವ್ಯಾಪ್ತಿಯ ಪಾವತಿದಾರರಿಗೆ ಬಾಕಿ ಮೇಲಿನ ದಂಡದ ಪ್ರಯಾಣವನ್ನು ಶೇಕಡಾ 50ರಷ್ಟು ಇಳಿಕೆ ಮಾಡಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಮಸೂದೆ ಮಂಡನೆ ಆಗಿದೆ. ಅದರ ಬೆನ್ನಲ್ಲೆ ಸರ್ಕಾರ ಒಟಿಎಸ್ ಸೌಲಭ್ಯ ಜಾರಿಗೆ ತಂದಿದೆ. ಇದು ಏನು? ಪಾವತಿ ಹೇಗೆ? ಎಲ್ಲಿ ಪಾವತಿಸಬೇಕು ಎಂಬೆಲ್ಲ ಮಾಹಿತಿ ಇಲ್ಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಸರ್ಕಾರದ ಆದೇಶದಂತೆ 'ಒನ್ ಟೈಮ್ ಸೆಟ್ಲ್ ಮೆಂಟ್'(OTS) ಅನ್ನು ಸೌಲಭ್ಯವನ್ನು ಘೋಷಿಸಿದೆ. ಇದನ್ನು ಪಾವತಿದಾರರು ಶೀಘ್ರವೇ ಆನ್‌ಲೈನ್ ಮೂಲಕ ಪಾವತಿಸಲು ಅವಕಾಶ ಸಹ ನೀಡಲಾಗಿದೆ. ಇದಕ್ಕು ಶೇಕಡಾ 50ರಷ್ಟು ದಂಡ ಕಡಿತ ಸೌಲಭ್ಯ ಸಿಗಲಿದೆ ಎಂದು ಬಿಬಿಎಂಪಿ ತಿಳಿಸಿದೆ.

BBMP Gave One Time Settlement Online Payment for Those Wiht Incorrect Property Tax Declarations

ಸರ್ಕಾರದಿಂದ ಒಟಿಎಸ್ ಯೋಜನೆ ಜಾರಿ

ರಾಜ್ಯ ಸರ್ಕಾರವು ಕಳೆದ ಫೆಬ್ರವರಿ 22ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ತಪ್ಪಾಗಿ ಘೋಷಿಸಿಕೊಂಡಿರುವ ಮಾಲೀಕರಿಗಾಗಿ ಈ ಹೊಸ ಸೌಲಭ್ಯ ಒಟಿಎಸ್ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಈ ಯೋಜನೆಯಡಿ ಬಿಬಿಎಂಪಿಯ ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸುವ ಸಾಪ್ಟ್ ವೇರ್ ನಲ್ಲಿ ಒಟಿಎಸ್ ಅನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ನಾಗರಿಕರು ಈಗ ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಪಡೆದು ಆನ್‌ಲೈನ್‌ನಲ್ಲಿ ಪಾವತಿಸುವಂತೆ ಸರ್ಕಾರ ತಿಳಿಸಿದೆ.

BBMP Gave One Time Settlement Online Payment for Those Wiht Incorrect Property Tax Declarations

5-ವರ್ಷಗಳ ಮಿತಿ ಪ್ರಯೋಜನ

ಬಿಬಿಎಂಪಿಯ ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿಯೇ ಈ OTS ವ್ಯವಸ್ಥೆ ಜಾರಿಗೆ ತಂದಿರುವುದು ಮತ್ತೊಂದು ವಿಶೇಷ ಎನ್ನಬಹುದು. ನಾಗರೀಕರು ಸಂಪೂರ್ಣ ಬಡ್ಡಿ ಮನ್ನಾ, ವಂಚನೆ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ದಂಡ ಕಡಿತ ಹಾಗೂ ವಸತಿ ಮತ್ತು ಮಿಶ್ರ ಬಳಕೆಗೆ ಪ್ರಕರಣಗಳಲ್ಲಿ ಮಾತ್ರ ಗರಿಷ್ಟ 5-ವರ್ಷಗಳ ಮಿತಿ ಪ್ರಯೋಜನವನ್ನು ತಕ್ಷಣವೇ ಪಡೆಯಬಹುದಾಗಿದೆ ಬಿಬಿಎಂಪಿ ಮಾಹಿತಿ ನೀಡಿದೆ.

OTS ಪಾವತಿ ಹೇಗೆ?

ಒಟಿಎಸ್ ಮೂಲಕ ತೆರಿಗೆ ಪಾವತಿಸುವವರು ಬೇಗನೆ ನೀವು ಬಿಬಿಎಂಪಿ ಅಧಿಕೃತ ವೆಬ್ ಸೈಟ್ https://bbmptax.karnataka.gov.inಗೆ ಭೇಟಿ ನೀಡಿ, ಒಟಿಎಸ್ ನ ಸಂಪೂರ್ಣ ಪ್ರಯೋಜನವನ್ನು ಆನ್‌ಲೈನ್‌ನಲ್ಲಿ ಪಡೆದು ಪಾವತಿಸಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+