ಬಿಬಿಎಂಪಿ ಕದನ : ವೀರನಪಾಳ್ಯದಲ್ಲಿ ಮತದಾನ ಆರಂಭ

ಬೆಂಗಳೂರು, ಆಗಸ್ಟ್ 22 : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜ್ಞಾನಭಾರತಿ ವಾರ್ಡ್ (129)ನ ವೀರನಪಾಳ್ಯದಲ್ಲಿ ಮತದಾನ ಆರಂಭವಾಗಿದೆ. ಮೂರು ಪಕ್ಷದ ಅಭ್ಯರ್ಥಿಗಳು ಗ್ರಾಮಕ್ಕೆ ಭೇಟಿ ನೀಡಿ ಮೂರು ತಿಂಗಳಿನಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಗ್ರಾಮ ದೇವತೆ ಮೇಲೆ ಪ್ರಮಾಣ ಮಾಡಿದ ನಂತರ ಗ್ರಾಮಸ್ಥರು ಮತದಾನಕ್ಕೆ ಒಪ್ಪಿಕೊಂಡಿದ್ದಾರೆ.

ಮತದಾನ ಬಹಿಷ್ಕಾರ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭವಾಗಿದೆ. ಆದರೆ, ವೀರನಪಾಳ್ಯ ಗ್ರಾಮದವರು ಮೂಲ ಸೌಕರ್ಯಗಳನ್ನು ನೀಡುವಂತೆ ಒತ್ತಾಯಿಸಿ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಸುಮಾರು 600 ಜನರು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜ್ಞಾನಭಾರತಿ ವಾರ್ಡ್ (129) ನಲ್ಲಿರುವ ವೀರನ ಪಾಳ್ಯ ಗ್ರಾಮಸ್ಥರು ಇಂದು ಬೆಳಗ್ಗೆಯಿಂದ ಮತದಾನ ಬಹಿಷ್ಕಾರ ಮಾಡಿದ್ದಾರೆ. [ಬಿಬಿಎಂಪಿ ಮತದಾನ : ಕ್ಷಣ-ಕ್ಷಣದ ಮಾಹಿತಿ]

no voting

ಏಕೆ ಮತ ಹಾಕೋಲ್ಲ : ಇಲ್ಲಿ ಹಿಂದಿನಿಂದಲೂ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ದೂರು ನೀಡಿದ್ದೇವೆ. ಆದರೆ ಈ ಸಮಸ್ಯೆಯನ್ನು ಬಗೆಹರಿಸಿಲ್ಲ. ಆದ್ದರಿಂದ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. [ನಿಮ್ಮ ಮತಗಟ್ಟೆ ಹುಡುಕಿ]

ಇಲ್ಲಿ ಸುಮಾರು 600 ಮತದಾರರಿದ್ದೇವೆ. ಈ ಬಾರಿ ಮತದಾನವನ್ನು ಬಹಿಷ್ಕರಿಸಿದರೆ ಜನ ಪ್ರತಿನಿಧಿಗಳಿಗೆ ಬುದ್ಧಿ ಬಂದು ಸಮಸ್ಯೆ ಸರಿ ಮಾಡಬಹುದು. ಆದ್ದರಿಂದ ನಾವು ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಜ್ಞಾನ ಭಾರತ ವಾರ್ಡ್‌ನ ಅಭ್ಯರ್ಥಿಗಳು

* ಬಿಜೆಪಿ - ತೇಜಸ್ವಿನಿ ಸತ್ಯನಾರಾಯಣ
* ಕಾಂಗ್ರೆಸ್ - ಕಾವ್ಯಶ್ರೀ ಮಂಜು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+