ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದಿನ ಮೀಸಲಾತಿ ಪಟ್ಟಿಯಂತೆ ಬಿಬಿಎಂಪಿ ಚುನಾವಣೆ

|
Google Oneindia Kannada News

ಬೆಂಗಳೂರು, ಜೂ. 04 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಹಿಂದೆ ಹೊರಡಿಸಿದ ಮೀಸಲಾತಿ ಪಟ್ಟಿಯ ಅನ್ವಯ ನಡೆಸಲು ಸರ್ಕಾರ ನಿರ್ಧರಿಸಿದೆ. ಬಿಬಿಎಂಪಿ ಚುನಾವಣೆಯನ್ನು ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು, ಮೂರು ತಿಂಗಳಿನಲ್ಲಿ ಹೊಸ ಮೀಸಲಾತಿ ಪಟ್ಟಿಯನ್ನು ಪ್ರಕಟಿಸುವುದ ಕಷ್ಟ. ಆದ್ದರಿಂದ ಏ.12ರಂದು ಹೊರಡಿಸಿದ ಮೀಸಲಾತಿ ಪಟ್ಟಿ ಅನ್ವಯ ಚುನಾವಣೆ ನಡೆಸಲಾಗುತ್ತದೆ ಎಂದರು. [ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಿ]

tb jayachandra

ಸುಪ್ರೀಂಕೋರ್ಟ್ ಮೇ5ರಂದು ನೀಡಿರುವ ಆದೇಶದ ಅನ್ವಯ ಮೂರು ತಿಂಗಳಿನಲ್ಲಿ ಚುನಾವಣೆ ನಡೆಸಬೇಕಾಗಿದೆ. ಸರ್ಕಾರ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಹಳೆ ಮೀಸಲಾತಿ ಪಟ್ಟಿಯ ಅನ್ವಯವೇ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. [ಮೀಸಲಾತಿ ಪಟ್ಟಿಗೆ ಸದಸ್ಯರ ವಿರೋಧ]

ವಿರೋಧ ವ್ಯಕ್ತವಾಗಿತ್ತು : ಏ.12ರಂದು ಸರ್ಕಾರ ಪ್ರಕಟಿಸಿದ ಮೀಸಲಾತಿ ಪಟ್ಟಿಗೆ ಬಿಬಿಎಂಪಿ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದರು. ಮೀಸಲಾತಿ ಪಟ್ಟಿಯಲ್ಲಿ ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ 33 ರಿಂದ 48ಕ್ಕೆ ಹೆಚ್ಚಿಸಲಾಗಿದೆ. 67ರಷ್ಟಿದ್ದ ಮಹಿಳಾ ಸದಸ್ಯರ ಬಳಗಕ್ಕೆ ಇನ್ನೂ 29 ಜನರು ಸೇರ್ಪಡೆಯಾಗಲಿದ್ದಾರೆ. [ಬಿಬಿಎಂಪಿ ವಿಭಜನೆ ಹೇಗೆ?, ಸಂಕ್ಷಿಪ್ತ ಮಾಹಿತಿ]

ಮೀಸಲಾತಿ ಪಟ್ಟಿಯ ಅನ್ವಯ ಮಾಜಿ ಮೇಯರ್ ಎನ್.ಶಾಂತಕುಮಾರಿ ಪ್ರತಿನಿಧಿಸುವ ಮೂಡಲಪಾಳ್ಯ ವಾರ್ಡ್‌ನಲ್ಲಿ ಮಹಿಳಾ ಮೀಸಲು ಕೈಬಿಡಲಾಗಿದೆ. ಡಾ.ರಾಜ್‌ಕುಮಾರ್ ವಾರ್ಡ್, ಸಾರಕ್ಕಿ, ಪದ್ಮನಾಭನಗರ, ಜೆ.ಪಿ.ಪಾರ್ಕ್, ಚಾಮರಾಜಪೇಟೆ, ಕಾವೇರಿಪುರ ವಾರ್ಡ್‌ಗಳ ಮೀಸಲಾತಿಯೂ ಬದಲಾಗಿದೆ.

198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯನ್ನು ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ಎಂದು ಮೂರು ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ. ಪಾಲಿಕೆ ವಿಭಜನೆ ನಂತರ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಬಿಬಿಎಂಪಿ ಸದಸ್ಯರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

English summary
Law minister T.B.Jayachandra said, Bruhat Bengaluru Mahanagara Palike (BBMP) election will be conducted under reservation list announced on April 12, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X