ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀನಗರ ವಾರ್ಡ್: ಬಿಜೆಪಿ ಅಭ್ಯರ್ಥಿ ಸವಿತಾ ಗೆಲುವು

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 25 : ಬಿಬಿಎಂಪಿ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಅಭ್ಯರ್ಥಿಗಳು ಸೋಲು ಗೆಲುವಿನ ನಡುವೆ ನಿಂತಿದ್ದಾರೆ. ಆದರೆ ಕೆಲವು ವಾರ್ಡ್ ಗಳಲ್ಲಿ ಕೆಲವು ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿ ಸಂಭ್ರಮದಲ್ಲಿ ತೊಡಗಿದ್ದಾರೆ.

ಸಮಾಜ ಸೇವಾ ದೃಷ್ಟಿಯಿಂದ ಹಲವಾರು ಅಭ್ಯರ್ಥಿಗಳು ತಮ್ಮ ವೃತ್ತಿ ಬದುಕನ್ನು ತೊರೆದು ಬಿಬಿಎಂಪಿ ಚುನಾವಣಾ ಕಣಕ್ಕೆ ಇಳಿದಿದ್ದರು. ಅಂತಹವರಲ್ಲಿ ಜೆ.ಎಂ ಸವಿತಾ ಅವರು ಒಬ್ಬರಾಗಿದ್ದರು.[ಮಾಜಿ ಕಾನ್ ಸ್ಟೇಬಲ್, ಬಿಬಿಎಂಪಿ ಅಭ್ಯರ್ಥಿ ಸವಿತಾ: ಸಂದರ್ಶನ]

BBMP Election Result: Srinagar ward (156) J. M Savitha victory

ಸವಿತಾ ಅವರು ತಮ್ಮ ಪೊಲೀಸ್ ವೃತ್ತಿಯನ್ನು ಬಿಟ್ಟು ಬಿಬಿಎಂಪಿ ಚುನಾವಣೆಗೆ ಶ್ರೀನಗರ ವಾರ್ಡ್ (156)‌ನಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಹಿಮ್ಮೆಟ್ಟಿ ವಿಜಯ ಮಾಲೆ ಧರಿಸಿದ ಸವಿತಾ ಅವರು ಶ್ರೀನಗರ ವಾರ್ಡ್ ಬಿಜೆಪಿ ಪಾಲಾಗುವಂತೆ ಮಾಡಿದ್ದಾರೆ.[ಖಾಕಿ ಕಿತ್ತಾಕಿ ಖಾದಿ ತೊಡಲು ಹೊರಟ ಮಹಿಳಾ ಪೊಲೀಸ್]

ಶ್ರೀನಗರ ವಾರ್ಡಿನಲ್ಲಿ 36, 982 ಜನಸಂಖ್ಯೆಯಿದ್ದು, ಇದರಲ್ಲಿ ಪುರುಷರು 18,, 793, ಮಹಿಳೆಯರು 17,, 252 ಮಂದಿ ಇದ್ದಾರೆ. ತಾವು ಆಡಿ ಬೆಳೆದ ವಾರ್ಡಿನಲ್ಲಿಯೇ ಸವಿತಾ ಅವರು ಜಯ ಸಾಧಿಸಿ ಅಪ್ಪನಂತೆ ಮಗಳು ಎಂಬ ಸಮಾಧಾನ ಬಾಳಿನ ಕೊನೆವರೆಗೂ ಉಳಿಯುವಂತೆ ಮಾಡಿಕೊಂಡಿದ್ದಾರೆ.

English summary
BBMP Elections 2015 Result: Srinagar(156) ward BJP candidate J. M Savitha victory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X