ವಿಜಯವಾಣಿ- ಈಟಿವಿ ಸಮೀಕ್ಷೆ: ಕಾಂಗ್ರೆಸ್ ಸೆಂಚುರಿ, ಬಿಜೆಪಿಗೆ ವರಿ!
ಬೆಂಗಳೂರು, ಆಗಸ್ಟ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಮತದಾನ ಕಡಿಮೆಯಾಗಿರುವುದರಿಂದ ಯಾವ ಪಕ್ಷಕ್ಕೆ ಲಾಭ? ಯಾವ ಪಕ್ಷಕ್ಕೆ ನಷ್ಟ? ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತದೆ ಎಂಬ ಲೆಕ್ಕಾಚಾರ ಆರಂಭಗೊಂಡಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲೂ ಮೇಲುಗೈ ಸಾಧಿಸಲಿದೆ ಎಂದು ವಿಜಯವಾಣಿ ಹಾಗೂ ಈಟಿವಿ ಕನ್ನಡ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.[ವಿಜಯವಾಣಿ-ಈಟಿವಿ ಚುನಾವಣಾ ಪೂರ್ವ ಸಮೀಕ್ಷೆ]
ಮತದಾರರ ನಿರುತ್ಸಾಹದ ನಡುವೆ ವಿವಿಧ ಮಾಧ್ಯಮಗಳ ಸಮೀಕ್ಷೆ ವರದಿಗಳು ಬರುತ್ತಿವೆ, ಮತದಾನ ಪ್ರಮಾಣ ಕಡಿಮೆಯಾಗಿದ್ದಕ್ಕೆ ವಿವಿಧ ಪಕ್ಷಗಳು ಚುನಾವಣಾ ಆಯೋಗಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಲೆಕೆಡಿಸಿಕೊಂಡಿದೆ. ಮತಯಂತ್ರದಲ್ಲಿ ಭದ್ರವಾಗಿರುವ ಜನಾದೇಶ ತಿಳಿಯಲು ಆಗಸ್ಟ್ .25ರ ತನಕ ಕಾಯಬೇಕು. [ಸುದ್ದಿವಾಹಿನಿಗಳ ಸಮೀಕ್ಷೆಗಳ ಸಂಗ್ರಹ]
ಬಿಬಿಎಂಪಿಯ ಒಟ್ಟು 198 ವಾರ್ಡ್‌ಗಳ ಪೈಕಿ 197 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.. ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್ ಸೆಂಚುರಿ, ಬಿಜೆಪಿಗೆ ವರಿ!
ವಿಜಯವಾಣಿ- ಈಟಿವಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 101 ಸ್ಥಾನಗಳ ನಿರೀಕ್ಷೆಯಿದ್ದು, ಬಿಜೆಪಿ ಬಲ 75 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್ ಬಲ 20 ಸ್ಥಾನಗಳಿಗೆ ವೃದ್ಧಿಸಲಿದೆ. 3 ಪಕ್ಷಗಳ ತ್ರಿಕೋನ ಸ್ಪರ್ಧೆಯಲ್ಲಿ ಇತರೆ ಅಭ್ಯರ್ಥಿಗಳ ಗೆಲುವು 2ಕ್ಕೆ ಸೀಮಿತವಾಗಲಿದೆ.

ಕಾಂಗ್ರೆಸ್ ಫಲಿತಾಂಶ ನಿರೀಕ್ಷಿತವಾಗಿದೆ
ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲದಿರುವುದು, ಹಲವು ಭಾಗ್ಯ ಯೋಜನೆಗಳ ನೇರ ಫಲಾನುಭವಿಗಳು ಹಾಗೂ ಅಹಿಂದ ವರ್ಗ ಕೈ ಹಿಡಿದಿದ್ದು, ಅಲ್ಪಸಂಖ್ಯಾತ ಮತಗಳು, ಸಿದ್ದರಾಮಯ್ಯ ಅವರ ಆಡಳಿತದ ಮೇಲೆ ಇನ್ನೂ ಜನತೆ ಭರವಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಆಡಳಿತ ಪಕ್ಷದ ಪರ ಹೆಚ್ಚಿನ ಪ್ರಮಾಣದಲ್ಲಿ ಮತಗಳು ಬಂದಿವೆ.

ಕಮಲದಲ್ಲಿ ಮೂಡಿದ ಒಡಕು ಮತ ವಿಭಜನೆ
ನಗರ ಪ್ರದೇಶದ ಮತದಾರರನ್ನು ಸೆಳೆಯಲು ಆರ್ ಅಶೋಕ್ ಅವರು ಮಾಡಿದ ತಂತ್ರಗಳು ಕೊನೆ ಕ್ಷಣದಲ್ಲಿ ಮುಳುವಾಯಿತು. ನಾಯಕತ್ವದಲ್ಲಿ ಭಿನ್ನಮತ, ವ್ಯಾಪಕ ಭ್ರಷ್ಟಾಚಾರದ ಆರೋಪ, ಮತ ಸೆಳೆಯುವ ಸ್ಥಳೀಯ ನಾಯಕತ್ವದ ಕೊರತೆ, ನಾಯಕರ ಮಧ್ಯೆ ಸಮನ್ವಯದ ಕೊರತೆ , ಲಿಂಗಾಯಿತ ಮತ್ತು ಒಕ್ಕಲಿಗ ನಾಯಕತ್ವದ ತಿಕ್ಕಾಟ, ಯಡಿಯೂರಪ್ಪ ಅವರ ಗೈರು, ತಂತ್ರಜ್ಞಾನಕ್ಕೆ ಮೊರೆ ಘಾಕಿದ್ದು ಎಲ್ಲವೂ ಕೈಕೊಟ್ಟಿತು.

ಗೊತ್ತು ಗುರಿ ಇಲ್ಲದ ಜೆಡಿಎಸ್ ಕಿಂಗ್ ಮೇಕರ್
ಗೊತ್ತು ಗುರಿ ಇಲ್ಲದ ಪ್ರಚಾರದ ಭರಾಟೆಯಲ್ಲಿ ಕಳೆದು ಹೊದ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ. ಅದರೆ, 20ಕ್ಕಿಂತ ಕಡಿಮೆ ಸ್ಥಾನ ಪಡೆಯುವ ಆತಂಕ ಇರುವುದರಿಂದ ಜೆಡಿಎಸ್ ತನ್ನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ. ಕಾಂಗ್ರೆಸ್ ನಿಂದ ಅಹಿಂದ, ಅಲ್ಪಸಂಖ್ಯಾತರ ಮತಗಳನ್ನು ಕಿತ್ತುಕೊಂಡರೂ ಬಿಜೆಪಿ ಭಿನ್ನಮತದ ಲಾಭ ಪಡೆಯಲು ಜೆಡಿಎಸ್ ಗೆ ಸಾಧ್ಯವಾಗಿಲ್ಲ. ಇಲ್ಲದಿದ್ದರೆ ಒಕ್ಕಲಿಗರ ಓಟೆಲ್ಲ ಜೆಡಿಎಸ್ ಪಾಲಾಗುತ್ತಿತ್ತು.

ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕು
198 ವಾರ್ಡ್‌ಗಳ ಜತೆಗೆ, 61 ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು ಸೇರಿ ಒಟ್ಟು 259 ಸದಸ್ಯ ಬಲದ ಪಾಲಿಕೆಯಲ್ಲಿ ಯಾರೇ ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕೇಬೇಕು. ಅದಕ್ಕಾಗಿ ಕಾಂಗ್ರೆಸ್ 104 ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ. 28 ಶಾಸಕರು, ಸಂಸದರ ಬಲ ಹೊಂದಿರುವ ಬಿಜೆಪಿಗೆ 102 ಸ್ಥಾನ ಗೆಲ್ಲಬೇಕು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications