ಮಳೆ ಅವಾಂತರ: ನಿದ್ದೆಯಲ್ಲಿರುವ ಬಿಬಿಎಂಪಿಗೆ ಎಚ್ಚರಿಕೆ
ಬೆಂಗಳೂರು, ಜೂನ್ 26: ಮಳೆ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಜೂನ್ ತಿಂಗಳ ಮೊದಲ ವಾರ ಸಭೆ ನಡೆಸಿದ್ದ ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಾವು ಕೊಟ್ಟ ಮಾತನ್ನು ಮರೆತು ಎಲ್ಲಿ ಮಲಗಿದ್ದಾರೆ ಎಂದು ಹುಡಕಬೇಕಿದೆ ಎಂದು ಎಎಪಿ ಕರ್ನಾಟಕ ಲೇವಡಿ ಮಾಡಿದೆ.
Recommended Video
ಕೇವಲ ಟಾಸ್ಕ್ ಪೋರ್ಸ್ ರಚಿಸಿದರೆ ಸಮಸ್ಯೆ ಬಗೆಹರಿಯುವುದು ಎಂದು ಸಚಿವರು ತಿಳಿದಂತಿದೆ. ನೆನ್ನೆ ನಗರದಾದ್ಯಂತ ಸುರಿದ ಮಳೆಗೆ ಹಲವೆಡೆ ರಸ್ತೆ ತುಂಬ ನೀರು ಹರಿಯುತ್ತಿದ್ದರೂ ಟಾಸ್ಕ್ ಪೋರ್ಸ್ ಸಿಬ್ಬಂದಿಗಳು ಒಬ್ಬರೂ ಕಾಣಲಿಲ್ಲ.
BBMP crew carry out emergency work to drain out water from the Nayandahalli flyover. The water logging was due to heavy 🌧️🌧️ rains from last evening.#BBMP #Bengaluru #BengaluruRains @CMofKarnataka @BBMP_MAYOR @KarnatakaVarthe @Tejasvi_Surya @BlrCityPolice @blrcitytraffic pic.twitter.com/4oM0oB7mDC
— B.H.Anil Kumar,IAS (@BBMPCOMM) June 26, 2020
ಮಳೆಗಾಲಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಕೇ? ನಿನ್ನೆ ಕೆಂಗೇರಿ ಬಳಿ ವೃಷಭಾವತಿ ನದಿಗೆ ಕಟ್ಟಿದ್ದ ತಡೆಗೋಡೆ ಕುಸಿದು ಬಿದ್ದಿದೆ, ರಸ್ತೆ ಬಿರುಕು ಬಿಟ್ಟಿದೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ನೂರಾರು ಜನರು ಜಲಸಮಾಧಿ ಆಗಬೇಕಾಗಿತ್ತು. ಜನ ಸಾಮಾನ್ಯರ ಜೀವದ ಚೆಲ್ಲಾಟವಾಡದೇ ಈಗಲಾದರೂ ಬಿಬಿಎಂಪಿ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳುವುದೇ?

* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳ, ಗುತ್ತಿಗೆದಾರರ ಅಕ್ರಮ ಕೂಟಗಳಿಗೆ ತಡೆ ಹಾಕಬೇಕು.
* ಮಳೆ ನೀರು ರಸ್ತೆಯಲ್ಲಿ ಹರಿಯಲು ಮ್ಯಾನ್‌ಹೋಲ್ ಕಟ್ಟಿಕೊಳ್ಳುವುದು ಸಹ ಪ್ರಮುಖ ಕಾರಣ ಆದ್ದರಿಂದ ದೆಹಲಿ ಸರ್ಕಾರದ ಮಾದರಿಯಲ್ಲಿ ಅತ್ಯಾಧುನಿಕ ಒಳಚರಂಡಿ ಸ್ವಚ್ಚಗೊಳಿಸುವ ಯಂತ್ರಗಳನ್ನು (automatic sewage cleaning machine) ಕೂಡಲೇ ಖರೀದಿಸಬೇಕು.
* ಕಾಮಗಾರಿಯ ನೆಪದಲ್ಲಿ ತೋಡಿರುವ ಒಳಚರಂಡಿಗಳನ್ನು ತಕ್ಷಣ ದುರಸ್ಥಿಗೊಳಿಸಬೇಕು.
* ಈಗಾಗಲೇ ಚಾಲ್ತಿಯಲ್ಲಿರುವ ಮಳೆ ನೀರು ಸಂಗ್ರಹ ಯೋಜನೆಯನ್ನು ಚುರುಕುಗೊಳಿಸಬೇಕು.
ಜನರ ಕಣ್ಣೊರೆಸಲು ಭರವಸೆಗಳನ್ನು ನೀಡದೆ ಕೂಡಲೇ ಮಳೆ ಅವಘಡಗಳನ್ನು ತಪ್ಪಿಸುವಂತಹ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷ ಈ ಮೂಲಕ ಆಗ್ರಹಿಸುತ್ತದೆ.
ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಪೋರ್ಸಿನ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಅವರಿಗೆ ತಡೆಗೋಡೆ ಕಳಪೆ ಕಾಮಗಾರಿ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಮ್ ಆದ್ಮಿ ಪಕ್ಷದ ವತಿಯಿಂದ ದೂರು ದಾಖಲಿಸಲಾಗಿದೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications